Wednesday, December 18, 2024
Homeರಾಷ್ಟ್ರೀಯ | Nationalಅಂತಾರಾಷ್ಟ್ರೀಯ ಯೋಗ ದಿನ : ರಾಷ್ಟ್ರಪತಿ, ಪ್ರಧಾನಿ, ಸಚಿವರುಗಳಿಂದ ಯೋಗಾಭ್ಯಾಸ

ಅಂತಾರಾಷ್ಟ್ರೀಯ ಯೋಗ ದಿನ : ರಾಷ್ಟ್ರಪತಿ, ಪ್ರಧಾನಿ, ಸಚಿವರುಗಳಿಂದ ಯೋಗಾಭ್ಯಾಸ

ನವದೆಹಲಿ,ಜೂ.21 (ಪಿಟಿಐ) – ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಇಂದು ರಾಷ್ಪ್ರಪತಿ ದ್ರೌಪದಿ ಮುರ್ಮು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ನಡ್ಡಾ ಸೇರಿದಂತೆ ಹಲವಾರು ಕೇಂದ್ರ ಸಚಿವರುಗಳು ಯೋಗ ಮಾಡುವ ಮೂಲಕ ಗಮನ ಸೆಳೆದರು.

ಶ್ರೀನಗರದಲ್ಲಿನ ಎಸ್‌‍ಕೆಐಸಿಸಿಯಲ್ಲಿ ನಡೆದ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು, ಯೋಗವು ಜನರು ತಮ ಸುತ್ತಲಿನ ಪ್ರಪಂಚದ ಕಲ್ಯಾಣದೊಂದಿಗೆ ಸಂಬಂಧ ಹೊಂದಿದೆ ಎಂಬುದನ್ನು ಅರಿತುಕೊಳ್ಳಲು ಸಹಾಯ ಮಾಡಿದೆ ಎಂದು ಹೇಳಿದರು. ಜಗತ್ತು ಯೋಗವನ್ನು ಜಾಗತಿಕ ಒಳಿತಿನ ಪ್ರಬಲ ಏಜೆಂಟ್‌ ಎಂದು ನೋಡುತ್ತಿದೆ ಎಂದು ಹೇಳಿದರು.

ನಾವು ಒಳಗೆ ಶಾಂತಿಯುತವಾಗಿದ್ದಾಗ, ನಾವು ಪ್ರಪಂಚದ ಮೇಲೆ ಸಕಾರಾತಕ ಪರಿಣಾಮ ಬೀರಬಹುದು… ಯೋಗವು ಸಮಾಜದಲ್ಲಿ ಸಕಾರಾತಕ ಬದಲಾವಣೆಯ ಹೊಸ ಮಾರ್ಗಗಳನ್ನು ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು.

ಅದೇ ರೀತಿ ರಾಷ್ಟ್ರಪತಿ ಭವನದಲ್ಲಿ ಯೋಗ ಪ್ರದರ್ಶನ ಮಾಡಿದ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದಾಲ್‌ ಸರೋವರದ ಹುಲ್ಲುಹಾಸಿನ ಮೇಲೆ ನಡೆದ ಯೋಗ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಾನವೀಯತೆಗೆ ಯೋಗವು ಭಾರತದ ಅನನ್ಯ ಕೊಡುಗೆಯಾಗಿದೆ ಮತ್ತು ಹೆಚ್ಚುತ್ತಿರುವ ಜೀವನಶೈಲಿ ಸಂಬಂಧಿತ ಸಮಸ್ಯೆಗಳಿಂದಾಗಿ ಇದು ಹೆಚ್ಚು ಮಹತ್ವದ್ದಾಗಿದೆ. ಇಡೀ ಜಾಗತಿಕ ಸಮುದಾಯಕ್ಕೆ, ವಿಶೇಷವಾಗಿ ಭಾರತದ ಸಹ ನಾಗರಿಕರಿಗೆ ಅಂತರಾಷ್ಟ್ರೀಯ ಯೋಗ ದಿನದಂದು ಶುಭಾಶಯಗಳು! ಯೋಗವು ಮಾನವೀಯತೆಗೆ ಭಾರತದ ಅನನ್ಯ ಕೊಡುಗೆಯಾಗಿದೆ.

ಹೆಚ್ಚುತ್ತಿರುವ ಜೀವನಶೈಲಿ ಸಂಬಂಧಿತ ಸಮಸ್ಯೆಗಳ ದಷ್ಟಿಯಿಂದ, ಯೋಗವು ಇಂದು ಹೆಚ್ಚು ಮಹತ್ವದ್ದಾಗಿದೆ ಎಂದು ಅವರು ಹೇಳಿದರು. ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಯಮುನಾ ಕ್ರೀಡಾ ಸಂಕೀರ್ಣದಲ್ಲಿ ಯೋಗ ಪ್ರದರ್ಶಿಸಿದ ಕೇಂದ್ರ ಸಚಿವ ಜೆ.ಪಿ ನಡ್ಡಾ ಅವರು, ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಮಣಿದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜೂನ್‌ 21 ರಂದು ಆಚರಿಸಲು ಘೋಷಣೆ ಮಾಡಿದೆ ಎಂದು ತಿಳಿಸಿದರು.

ಅಂದಿನಿಂದ ಪ್ರಧಾನಿ ಮೋದಿಯವರ ನೇತತ್ವದಲ್ಲಿ ಯೋಗವು ಪ್ರಪಂಚದ ಮೂಲೆ ಮೂಲೆಯನ್ನು ತಲುಪಿದೆ. ನನಗೆ ಇಂದು ಉತ್ಸಾಹಿಗಳೊಂದಿಗೆ ಯೋಗ ಮಾಡುವ ಅವಕಾಶ ಸಿಕ್ಕಿದೆ. ನಾಗರಿಕರು ತಮ ದಿನನಿತ್ಯದ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಆರೋಗ್ಯ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್‌ ಅವರು ಏಮ್ಸೌನಲ್ಲಿ ಐಡಿವೈ ಆಚರಣೆಗೆ ಚಾಲನೆ ನೀಡಿದರು ಮತ್ತು ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಮತ್ತು ಆರೋಗ್ಯ ಸಚಿವಾಲಯದ ಅಧಿಕಾರಿಗಳೊಂದಿಗೆ ಯೋಗ ಪ್ರದರ್ಶಿಸಿದರು.ರಾಮ್‌ ಮನೋಹರ್‌ ಲೋಹಿಯಾ ಮತ್ತು ಸಫ್ದರ್‌ಜಂಗ್‌ ಆಸ್ಪತ್ರೆಗಳಲ್ಲಿಯೂ ದಿನವನ್ನು ಆಚರಿಸಲಾಯಿತು.

RELATED ARTICLES

Latest News