ಬೆಂಗಳೂರು, ಜ.2- ಬಡ ಹಾಗೂ ಮಧ್ಯಮ ವರ್ಗದವರಿಗೆ ಆಧಾರ ಸ್ಥಂಭಗಳಾಗಿದ್ದ ಜಿಬಿಎ ವ್ಯಾಪ್ತಿಯ ಹಲವು ಹೆರಿಗೆ ಆಸ್ಪತ್ರೆಗಳನ್ನು ಅಭಿವೃದ್ಧಿ ಹೆಸರಲ್ಲಿ ಬಂದ್ ಮಾಡಲಾಗಿದೆ.ಬಡವರು, ಕೂಲಿ ಕಾರ್ಮಿಕ ಮಹಿಳೆಯರಿಗೆ ಉಚಿತವಾಗಿ ಹೆರಿಗೆ ಮಾಡಿಸುತ್ತಿದ ಸುಮಾರು 28 ಪಾಲಿಕೆ ಹೆರಿಗೆ ಅಸ್ಪತ್ರೆ ಗಳಲ್ಲಿ 10 ಹೆರಿಗೆ ಅಸ್ಪತ್ರೆ ಗಳು ಅಭಿವೃದ್ಧಿ ಹೆಸರಲ್ಲಿ ಬಾಗಿಲು ಬಂದ್ ಮಾಡಲಾಗಿದೆ.
ಹೀಗಾಗಿ ಸ್ಥಳೀಯ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರು ದುಬಾರಿ ಹಣ ನೀಡಿ ಖಾಸಗಿ ಅಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವಂತಾಗಿದೆ.ಕೆಂಪೇಗೌಡ ನಗರ, ಚಾಮರಾಜಪೇಟೆ, ಶಾಂತಿನಗರ, ತಿಮ್ಮಯ್ಯ ರಸ್ತೆ, ಬೊಬ್ಬತ್ತಿ ಹೆರಿಗೆ, ಜಯನಗರ, ಅಡುಗೋಡಿ, ಯಡಿಯೂರು, ಆಜಾದ್‌ನಗರ ಹಾಗೂ ಯಶವಂತಪುರದಲ್ಲಿರುವ ಹೆರಿಗೆ ಆಸ್ಪತ್ರೆಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಬಂದ್ ಮಾಡಲಾಗಿದೆ.
ಅಭಿವೃದ್ಧಿ ಹೆಸರಿನಲ್ಲಿ ಹಲವಾರು ದಿನಗಳಿಂದ ಹೆರಿಗೆ ಆಸ್ಪತ್ರೆಗಳನ್ನು ಬಂದ್ ಮಾಡಿರುವುದನ್ನು ನೋಡಿದರೆ ನಗರಪಾಲಿಕೆ ಅಧಿಕಾರಿಗಳು ಖಾಸಗಿ ಅಸ್ಪತ್ರೆಗಳ ಒತ್ತಡಕ್ಕೆ ಮಣಿದಿದ್ದಾರ ಎಂಬ ಅನುಮಾನ ಕಾಡತೊಡಗಿದೆ ಎಂದು ಕೆಲವರು ಅನಮಾನ ವ್ಯಕ್ತಪಡಿಸುತ್ತಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದಾಗಿ ಆಸ್ಪತ್ರೆಗಳ ಅಭಿವೃದ್ಧಿಗೆ ಹಣ ಕೊರತೆ ಇದೆಯೇ ಎಂಬುದನ್ನು ಸರ್ಕಾರ ಬಹಿರಂಗಪಡಿಸಿದರೆ ನಾವೇ ಚಂದಾ ಎತ್ತಿ ಹಣ ನೀಡುತ್ತೇವೆ ಎಂದು ಪ್ರಜ್ಞಾವಂತ ನಾಗರಿಕರು ತಿಳಿಸಿದ್ದಾರೆ.
