ಬೆಂಗಳೂರು,ಜೂ.22- ಬೆಳಗಾವಿಯಲ್ಲಿ ನಡೆದಿದ್ದ ಮಕ್ಕಳ ಮಾರಾಟ ಪ್ರಕರಣದಲ್ಲಿ ರಕ್ಷಿಸಲಾಗಿದ್ದ ಹೆಣ್ಣು ಮಗು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ತಡರಾತ್ರಿ ಮೃತಪಟ್ಟಿದೆ.
ನರ್ಸ್ ಮಹದೇವಿಗೆ 30 ದಿನದ ಮಗುವನ್ನು ಕೇವಲ 60 ಸಾವಿರಕ್ಕೆ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಾಖಾನ್ ಮಗು ಮಾರಾಟ ಮಾಡಿದ್ದನು.ನಕಲಿ ವೈದ್ಯನಿಂದ ಮಗುವನ್ನು ಪಡೆದಿದ್ದ ನರ್ಸ್ ಮಹದೇವಿ ಬೆಳಗಾವಿಗೆ ಬಂದು ಶ್ರೀಮಂತ ದಂಪತಿಗೆ ಮಗು ಮಾರಾಟ ಮಾಡಲು ಯತ್ನಿಸಿದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಮಗುವನ್ನು ರಕ್ಷಿಸಿ ಜಿಲ್ಲಾಸ್ಪತ್ರೆಯಲ್ಲಿ ಆರೈಕೆ ಮಾಡಲಾಗುತ್ತಿತ್ತು.
30 ದಿನದ ಮಗುವಾದ್ದರಿಂದ ಅದರ ಬೆಳವಣಿಗೆ ಕುಂಠಿತವಾಗಿತ್ತಲ್ಲದೆ ತೂಕ ಹೆಚ್ಚಳವಾಗದೆ ನಿತ್ರಾಣಗೊಂಡು ರಾತ್ರಿ ಮೃತಪಟ್ಟಿದೆ. ಇಂದು ಬೆಳಿಗ್ಗೆ ಪೊಲೀಸರು ಹಾಗೂ ಮಗುವಿನ ತಂದೆ ತಾಯಿ ಸಮುಖದಲ್ಲಿ ಬೆಳಗಾವಿಯ ಸದಾಶಿವ ನಗರದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.