Friday, November 22, 2024
Homeರಾಜ್ಯವಾಲ್ಮೀಕಿ ನಿಗಮ ಹಗರಣಕ್ಕೆ ಸಿಎಂ ನೇರ ಕಾರಣ : ಪ್ರಹ್ಲಾದ್‌ ಜೋಶಿ

ವಾಲ್ಮೀಕಿ ನಿಗಮ ಹಗರಣಕ್ಕೆ ಸಿಎಂ ನೇರ ಕಾರಣ : ಪ್ರಹ್ಲಾದ್‌ ಜೋಶಿ

ಬೆಂಗಳೂರು,ಜೂ.22- ವಾಲೀಕಿ ಅಭಿವೃದ್ಧಿ ನಿಗಮ ಮಂಡಳಿಯಲ್ಲಿ ನಡೆದಿರುವ ನೂರಾರು ಕೋಟಿ ಭ್ರಷ್ಟಾಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಕಾರಣ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಪಕ್ಷದ ವತಿಯಿಂದ ಹಮಿಕೊಂಡಿದ್ದ ನೂತನ ಸಂಸದರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಒಬ್ಬನೇ ಜಗತ್ತಿನಲ್ಲಿ ಮಹಾ ಸಾಚಾ ಎಂದು ಸಿದ್ದರಾಮಯ್ಯನವರು ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಹಣಕಾಸು ಇಲಾಖೆ ಯಾರ ಕೈಯಲ್ಲಿದೆ. ನಿಮ ಅನುಮತಿ ಇಲ್ಲದೆ ನಿಗಮದ ಹಣವು ಸಚಿವರೊಬ್ಬರ ಖಾತೆಗೆ ವರ್ಗಾವಣೆಯಾಗಲು ಹೇಗೆ ಸಾಧ್ಯ. ಈ ನಿಗಮದಲ್ಲಿ ನಡೆದಿರುವ ಎಲ್ಲಾ ಅಕ್ರಮಗಳಿಗೂ ಸಿದ್ದರಾಮಯ್ಯನವರೇ ನೇರ ಕಾರಣ ಎಂದು ಆರೋಪಿಸಿದರು.

ಬಿಜೆಪಿ ನೇತೃತ್ವದ ಎನ್‌ಡಿಗೆ ಜನರು 54% ಮತ ಕೊಟ್ಟು ಕಾಂಗ್ರೆಸ್‌‍ನ್ನು ತಿರಸ್ಕರಿಸಿದ್ದಾರೆ. ಅದರ ದ್ವೇಷಕ್ಕಾಗಿಯೇ ಕಾಂಗ್ರೆಸ್‌‍ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿದೆ. ಬೇರೆ ರಾಜ್ಯಗಳ ಹೋಲಿಕೆ ಮಾಡಿ ಅದರ ಸಮರ್ಥನೆ ಮಾಡಿಕೊಳ್ಳುತ್ತಿದೆ ಎಂದರು.

ಅರೆ ಬೆಂದ ಗ್ಯಾರಂಟಿಗಳನ್ನು ಕೊಟ್ಟು, ಅದಕ್ಕಾಗಿ ತೈಲ ಬೆಲೆ ಏರಿಸಿ ಮತ್ತಷ್ಟು ಬೆಲೆಗಳು ಏರಿಕೆ ಮಾಡುವಂತೆ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಬೆಲೆ ಏರಿಕೆ ಮಾಡಿ ಜನರಿಗೆ ಬರೆ ಹಾಕಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಈ ಚುನಾವಣೆಯಲ್ಲಿ ಸೋಶಿಯಲ್‌ ಮೀಡಿಯಾಗಳು ನಮ ವಿರುದ್ದ ಇದ್ದವು. ಆದಾಗ್ಯೂ ಮತದಾರರು ಕಾಂಗ್ರೆಸ್‌‍ನ್ನು ಸಿಂಗಲ್‌ ಡಿಜಿಟ್‌ಗೆ ತಂದು ನಿಲ್ಲಿಸಿದ್ದಾರೆ. ತಾಲ್ಲೂಕು ಪಂಚಾಯತ್‌ ಚುನಾವಣೆ ಆಗಲಿ, ಜಿಪಂ ಚುನಾವಣೆ ಆಗಲಿ ಕಾಂಗ್ರೆಸ್‌‍ನ್ನು ಮನೆಗೆ ಕಳಿಸಬೇಕು ಎಂದು ಕರೆ ನೀಡಿದರು.

ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರವಾಗಿದೆ. ಸಿಎಂ, ಡಿಸಿಎಂ ರಾಜೀನಾಮೆ ಕೊಡೋವರೆಗೂ ಹೋರಾಟ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Latest News