ರಾಯ್‍ಪುರ, ಅ.18- ಛತ್ತೀಸ್‍ಗಢದಲ್ಲಿ ವಿಧಾನಸಭೆ ಚುನಾವಣೆಗೆ ಬರ್ಜರಿ ಪ್ರಚಾರದ ನಡುವೆ ಸುಮಾರು 5.5 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಲೆಕ್ಕಕ್ಕೆ ಸಿಗದ ನಗದು, ಮದ್ಯ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿ ತಿಳಿಸಿದೆ.
ಮುಂಬರುವ ನವೆಂಬರ್ 7 ಮತ್ತು 17 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮಾದರಿ ನೀತಿ ಸಂಹಿತೆ ಹೇರಿದ ನಂತರ ಅ. 9 ಮತ್ತು ಅ.16 ರ ನಡುವೆ ವಿವಿಧೆಡೆ ನಗದು ಹಾಗು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-10-2023)
ಇದರಲ್ಲಿ 85 ಲಕ್ಷ ನಗದು, 37.57 ಲಕ್ಷ ಮೌಲ್ಯದ 11,851 ಲೀಟರ್ ಮದ್ಯ, 61.57 ಲಕ್ಷ ಮೌಲ್ಯದ 1,838 ಕೆಜಿ ಮಾದಕ ದ್ರವ್ಯ, 1.7 ಕೋಟಿ ಮೌಲ್ಯದ 63 ಕೆಜಿ ಚಿನ್ನಾಭರಣ ಮತ್ತು 2.03 ಕೋಟಿ ಮೌಲ್ಯದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.