ಬೆಂಗಳೂರು,ಜ.2- ಪಿಜಿಯಲ್ಲಿ ಸಿಲಿಂಡರ್ ಸ್ಫೋಟದ ಹಿನ್ನೆಲೆ ಎಚ್ಚೆತ್ತುಕೊಂಡ ಜಿಬಿಎ ಅಧಿಕಾರಿಗಳು ಸರ್ವೀಸ್ ಅಪಾರ್ಟ್ಮೆಂಟ್, ಹಾಸ್ಟಲ್ ಹಾಗೂ ಪಿಜಿಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.
ಎಲ್.ಪಿ.ಜಿ./ಅನಿಲ ಸಂಪರ್ಕಗಳ ಸುರಕ್ಷಿತ ಹಾಗೂ ಅಧಿಕೃತ ಬಳಕೆ-ಅಕ್ರಮ ಹಾಗೂ ಅಸುರಕ್ಷಿತ ಅನಿಲ ಸಿಲಿಂಡರ್‌ಗಳ ಸಂಪೂರ್ಣ ನಿಷೇಧ-ಸರಿಯಾದ ಗಾಳಿ ಮತ್ತು ಅಗ್ನಿ ಸುರಕ್ಷತಾ ಕ್ರಮಗಳು-ವಿದ್ಯುತ್ ಸುರಕ್ಷತೆ ಹಾಗೂ ಓವರ್‌ಲೋಡ್ ತಪ್ಪಿಸುವ ಕ್ರಮಗಳು-ಮಾನ್ಯ ಹಾಗೂ ಅಸ್ತಿತ್ವದಲ್ಲಿರುವ ವ್ಯಾಪಾರ ಪರವಾನಗಿ ಮತ್ತು ಅಗತ್ಯ ನೋಂದಣಿಗಳಂತಹ ಸುರಕ್ಷತಾ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡಬೇಕೆಂದು ತಾಕೀತು ಮಾಡಿದ್ದಾರೆ.
