Sunday, September 29, 2024
Homeರಾಷ್ಟ್ರೀಯ | Nationalಯುಪಿ ಸಿಎಂ ಯೋಗಿ ಆದಿತ್ಯನಾಥ್‌ರ ನಕಲಿ ಕಾರ್ಯದರ್ಶಿ ಅರೆಸ್ಟ್

ಯುಪಿ ಸಿಎಂ ಯೋಗಿ ಆದಿತ್ಯನಾಥ್‌ರ ನಕಲಿ ಕಾರ್ಯದರ್ಶಿ ಅರೆಸ್ಟ್

ಲಕ್ನೋ,ಜೂ.24- ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಕಾರ್ಯದರ್ಶಿಯಂತೆ ನಟಿಸಿ, ದೂರವಾಣಿ ಮೂಲಕ ಸರ್ಕಾರಿ ಅಧಿಕಾರಿಗಳನ್ನು ವಂಚಿಸಿದ ಆರೋಪದ ಮೇಲೆ ಕುಖ್ಯಾತ ಕ್ರಿಮಿನಲ್ ಒಬ್ಬನನ್ನು ವಿಶೇಷ ಕಾರ್ಯಪಡೆ (ಎಸ್‌‍ಟಿಎಫ್‌) ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಆರೋಪಿಯನ್ನು ವಿವೇಕ್‌ ಶರ್ಮಾ ಅಲಿಯಾಸ್‌‍ ಬಂಟು ಚೌಧರಿ ಎಂದು ಗುರುತಿಸಲಾಗಿದೆ.ಸಿಎಂ ಕಾರ್ಯದರ್ಶಿಯ ಹೆಸರಿನಲ್ಲಿ ನಕಲಿ ಫೋನ್‌ ಕರೆಗಳನ್ನು ಮಾಡುವ ಮೂಲಕ ಆಡಳಿತ ಅಧಿಕಾರಿಗಳು ಮತ್ತು ಸಾರ್ವಜನಿಕರನ್ನು ವಂಚಿಸುತ್ತಿದ್ದ ಈತನನ್ನು ಬಸ್ತಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಎಸ್‌‍ಟಿಎಫ್‌ ಹೇಳಿಕೆಯಲ್ಲಿ ತಿಳಿಸಿದೆ.

ಕೆಲವು ದಿನಗಳ ಹಿಂದೆ, ಜಿಲ್ಲಾಧಿಕಾರಿ ಮತ್ತು ಬಸ್ತಿ ಮುಖ್ಯ ಅಭಿವದ್ಧಿ ಅಧಿಕಾರಿಗೆ ವಂಚಿಸುವ ಸಲುವಾಗಿ, ಅವರ ಅಧಿಕತ ಸಂಖ್ಯೆಗಳಿಗೆ ಕರೆ ಮಾಡಿ ತಾನು ಮುಖ್ಯಮಂತ್ರಿಯ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡಿದ್ದೇನೆ ಎಂದು ವಿವೇಕ್‌ ತಪ್ಪೊಪ್ಪಿಕೊಂಡಿದ್ದಾನೆ.

ಟ್ರೂ-ಕಾಲರ್‌ ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ವಿವೇಕ್‌ ಅವರ ಮೊಬೈಲ್‌ ಸಂಖ್ಯೆಯು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಎಂದು ಕಂಡುಬಂದಿದೆ.ಬಸ್ತಿಯ ಕೊತ್ವಾಲಿಯಲ್ಲಿ ಐಪಿಸಿಯ ಸೆಕ್ಷನ್‌ 419 (ವ್ಯಕ್ತಿಯಿಂದ ವಂಚನೆಗೆ ಶಿಕ್ಷೆ), 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರೇರೇಪಿಸುವುದು), 384 (ಸುಲಿಗೆ ಶಿಕ್ಷೆ) ಮತ್ತು 507 (ಅನಾಮಧೇಯ ಸಂವಹನದಿಂದ ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಂಚನೆ ಆರೋಪದ ಮೇಲೆ ಅಲಿಗಢ್‌, ಬಲ್ರಾಮ್‌ಪುರ, ಮಥುರಾ, ಕಾನ್ಪುರ್‌ ನಗರ ಮತ್ತು ಹರ್ದೋಯಿ ಜಿಲ್ಲೆಗಳ ವಿವಿಧ ಪೊಲೀಸ್‌‍ ಠಾಣೆಗಳಲ್ಲಿ ಈತನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ ಎಂದು ಎಸ್‌‍ಟಿಎಫ್‌ ಹೇಳಿಕೆಯಲ್ಲಿ ತಿಳಿಸಿದೆ. ವಿವೇಕ್‌ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.

RELATED ARTICLES

Latest News