Friday, April 11, 2025
Homeಮನರಂಜನೆತಮ್ಮ ವಾಹನಕ್ಕೆ ದರ್ಶನ್‌ ಖೈದಿ ನಂಬರ್‌ ಹಾಕಿಸಲು ಮುಗಿಬಿದ್ದ ಫ್ಯಾನ್ಸ್

ತಮ್ಮ ವಾಹನಕ್ಕೆ ದರ್ಶನ್‌ ಖೈದಿ ನಂಬರ್‌ ಹಾಕಿಸಲು ಮುಗಿಬಿದ್ದ ಫ್ಯಾನ್ಸ್

ಮೈಸೂರು,ಜೂ. 25- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ಗೆ ನೀಡಿರುವ ಸಂಖ್ಯೆಯನ್ನು ಅಭಿಮಾನಿಯೊಬ್ಬ ತಮ್ಮ ವಾಹನದ ಮೇಲೆ ಹಾಕಿಸಿಕೊಳ್ಳಲು ಆರ್ಟಿಒನಲ್ಲಿ ರಿಜಿಸ್ಟರ್ ಮಾಡಿಸಲು ಮುಂದಾಗಿದ್ದಾರೆ.

ಮೈಸೂರಿನ ಬನ್ನೂರಿನ ಧನುಷ್ ಎಂಬುವವರು ನಟ ದರ್ಶನ್ಗೆ ಪರಪ್ಪನ ಅಗ್ರಹಾರದ ಜೈಲಲ್ಲಿ ನೀಡಿರುವ ನಂಬರ್ 6106ಅನ್ನು ಇನ್ಮುಂದೆ ನಮಗೆ ಇದೇ ಲಕ್ಕಿ ನಂಬರ್. ಈ ನಂಬರ್ ನಮ್ಮ ಗಾಡಿ ಮೇಲೆ ಇರುತ್ತದೆ ಎಂದಿದ್ದಾರೆ.

ಅಲ್ಲದೆ ಇದೇ ನಂಬರ್ನಲ್ಲಿ ಆರ್ಟಿಒನಲ್ಲಿ ರಿಜಿಸ್ಟರ್ ಮಾಡಿಸಲು ಮುಂದಾಗಿದ್ದಾರೆ. ಇನ್ನು ದರ್ಶನ್ ಜೈಲುವಾಸ ನೆನೆದು ಗಳಗಳನೆ ಕಣ್ಣೀರಿಟ್ಟ ಅಭಿಮಾನಿ ಧನುಷ್, ನಟ ದರ್ಶನ್ ಶೀಘ್ರ ಬಿಡುಗಡೆಗೆ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಯಲ್ಲಿ ಪಾರ್ಥಿಸಿ ದರ್ಶನ್ ಬಿಡುಗಡೆಯಾದರೆ 101 ತೆಂಗಿನಕಾಯಿ ಒಡೆಯುತ್ತೇನೆ ಎಂದು ಹರಕೆ ಹೊತ್ತಿದ್ದಾರೆ.

ನಮ್ಮ ಬಾಸ್ ಏನೂ ತಪ್ಪೇ ಮಾಡಿಲ್ಲ. ನಮ್ಮ ಬಾಸ್ ಅನ್ನು ನಾವು ಎಂದೂ ಬಿಟ್ಟುಕೊಡೋದಿಲ್ಲ. ಕಾನೂನು ಎಲ್ಲರಿಗೂ ಒಂದೇ. ತಪ್ಪು ಮಾಡಿಲ್ಲ ಅಂದರೆ ರಾಜಾರೋಷವಾಗಿ ಬರುತ್ತಾರೆ ಎಂದಿದ್ದಾರೆ ಧನುಷ್.

RELATED ARTICLES

Latest News