ಬೆಂಗಳೂರು, ಜೂ.26- ಬೆಂಗಳೂರು ಎದುರಿಸುತ್ತಿರುವ ತೀವ್ರವಾದ ನೀರಿನ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸುಸ್ಥಿರ ಮೊಬಿಲಿಟಿಯಲ್ಲಿ ಜಾಗತಿಕ ನಾಯಕ ಆಲ್ಸ್ಟಂ, ಮುಂಚೂಣಿಯ ಲಾಭರಹಿತ ಸಂಸ್ಥೆ ಯುನೈಟೆಡ್ ವೇ ಬೆಂಗಳೂರು ಸಹಯೋಗದಲ್ಲಿ ಬೆಂಗಳೂರು ಪೂರ್ವದ ದೊಡ್ಡಬಾನಹಳ್ಳಿ ಗ್ರಾಮದಲ್ಲಿರುವ ಬಿದರೆ ಅಗ್ರಹಾರ ಕೆರೆಗೆ ಪುನರುಜ್ಜೀವನ ನೀಡಿದೆ.
ಈ ಉಪಕ್ರಮವು ಎಲ್ಲರಿಗೂ ಸ್ವಚ್ಛ ನೀರು ಮತ್ತು ನೈರ್ಮಲ್ಯವನ್ನು ಸಾಧಿಸುವ ಮೂಲಕ ಎಸ್.ಡಿ.ಜಿ. 6 ಗುರಿಯನ್ನು ಪೂರೈಸುತ್ತದೆ. ಈ ಸಮಗ್ರ ಪುನರುಜ್ಜೀವನ ಯೋಜನೆಯು ಕೆರೆಯ ನೀರು ಸಂಗ್ರಹ ಸಾಮರ್ಥ್ಯವನ್ನು 18 ಲೀಟರ್ ಗಳಿಗೆ ಹೆಚ್ಚಿಸಿದ್ದು ಇದು ಅಂತರ್ಜಲ ಪ್ರಮಾಣ ಹೆಚ್ಚಿಸಲಿದೆ ಮತ್ತು ದಕ್ಷಿಣ ಪಿನಾಕಿನಿ ನದಿಗೆ ಜೀವ ತುಂಬಿದೆ.
ಇದರಲ್ಲಿ 25,800 ಕ್ಯೂಬಿಕ್ ಮೀಟರುಗಳಷ್ಟು ಹೂಳು ನಿವಾರಿಸಲಾಗಿದೆ ಮತ್ತು 8,300 ಕ್ಯೂಬಿಕ್ ಮೀಟರುಗಳಷ್ಟು ಮಣ್ಣನ್ನು ನಿವಾರಿಸಲಾಗಿದ್ದು ಅದರ ನೀರಿನ ಗುಣಮಟ್ಟ ಮತ್ತು ಸಾಮರ್ಥ್ಯವನ್ನು ಗಮನಾರ್ಹವಾಗಿ ಸುಧಾರಿಸಿದೆ.ಆಲ್ಸ್ಟಂ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಒಲಿವಿಯರ್ ಲಾಯ್ಸನ್, ಬಿದರೆ ಅಗ್ರಹಾರ ಕೆರೆಯ ಪುನರುಜ್ಜೀವನ ಯೋಜನೆಯು ಈ ಬದ್ಧತೆಗೆ ಸಾಕ್ಷಿಯಾಗಿದೆ.
ಸುಧಾರಿತ ನೀರಿನ ಗುಣಮಟ್ಟ ಮತ್ತು ಹಸಿರು ವಿಸ್ತರಣೆಯಿಂದ ಈ ಕೆರೆಯು ಭವಿಷ್ಯದಲ್ಲಿ ಕಿರು ಜೀವವೈವಿಧ್ಯತೆಯ ತಾಣವಾಗುವ ಸಂಭವನೀಯತೆ ಇದೆ. ವೇಕ್ ದಿ ಲೇಕ್ ಉಪಕ್ರಮಕ್ಕೆ ಬೆಂಬಲಿಸುವ ಮೂಲಕ ಆಲ್ಸ್ಟಂ ಸ್ಥಳೀಯ ಸಮುದಾಯದ ಸಬಲೀಕರಣದಲ್ಲಿ ದೀರ್ಘಾವಧಿ ಪರಿಣಾಮ ಉಂಟು ಮಾಡುವ ಗುರಿ ಹೊಂದಿದೆ ಮತ್ತು ಭವಿಷ್ಯದ ತಲೆಮಾರುಗಳಿಗೆ ಸುಸ್ಥಿರ ವಿಶ್ವದ ಸೃಷ್ಟಿಗೆ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.