ಬೆಂಗಳೂರು, ಜೂ.27- ವಿವಿಧ ಜಾನಪದ ಕಲಾತಂಡಗಳ ಕಲಾಪ್ರದರ್ಶನ ಸೇರಿದಂತೆ ವೈವಿಧ್ಯಮಯ ಮೆರವಣಿಗೆಯೊಂದಿಗೆ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿಯನ್ನು ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಅದ್ಧೂರಿಯಾಗಿ ಇಂದು ಆಚರಿಸಲಾಯಿತು.
ಸಂಘದ ಆವರಣದಲ್ಲಿರುವ ಅಶ್ವಾರೂಢ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ನೆರವೇರಿಸುವುದರೊಂದಿಗೆ ಜಯಂತಿ ಆಚರಣೆ ಮಾಡಲಾಯಿತು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯ್ಕನಹಳ್ಳಿಯ ಸ್ಫಟಿಕಪುರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವದೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಹನುಮಂತಯ್ಯ, ಪ್ರಧಾನ ಕಾರ್ಯದರ್ಶಿ ಎಚ್.ಸಿ.ಜಯಮುತ್ತು, ಗೌರವಾಧ್ಯಕ್ಷ ಬಿ.ಕೆಂಚಪ್ಪಗೌಡ,
ಉಪಾಧ್ಯಕ್ಷರಾದ ಎಲ್.ಶ್ರೀನಿವಾಸ್, ಸಿ.ದೇವರಾಜು, ಖಜಾಂಚಿ ಸಿ.ಮಾರೇಗೌಡ, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ನೆಲ್ಲಿಗೆರೆ ಬಾಲು, ನಿರ್ದೇಶಕರಾದ ಬಿ.ಪಿ.ಮಂಜೇಗೌಡ, ಅಶೋಕ್ ಜಯರಾಂ, ಆರ್.ಪ್ರಕಾಶ್, ಟಿ.ಕೋನಪ್ಪರೆಡ್ಡಿ, ಪುಟ್ಟಸ್ವಾಮಿ ಮೊದಲಾದವರ ಸಮುಖದಲ್ಲಿ ಜಯಂತಿ ಆಚರಿಸಲಾಯಿತು.
ಬಳಿಕ ಅಶ್ವಾರೂಢ ಕೆಂಪೇಗೌಡ ವೇಷಧಾರಿ, ನಂದಿಧ್ವಜ, ವೀರಭದ್ರ ಕುಣಿತ, ಗಾರುಡಿ ಗೊಂಬೆ, ಡೊಳ್ಳು ಕುಣಿತ, ತಮಟೆ, ಪಾಳೆಗಾರ ವೇಶ, ಪೂಜಾ ಕುಣಿತ, ಪಟಕುಣಿತ, ಮೈಸೂರು ನಗಾರಿ, ಮಂಗಳವಾದ್ಯದೊಂದಿಗೆ ಸಂಘದ ಆವರಣದಿಂದ ಕಂಠೀರವ ಕ್ರೀಡಾಂಗಣದವರೆಗೆ ಮೆರವಣಿಗೆ ನಡೆಸಲಾಯಿತು.