Friday, November 22, 2024
Homeರಾಜ್ಯಬೌದ್ಧ ಸಮುದಾಯದ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿದೆ : ಸಚಿವ ಜಮೀರ್‌ ಅಹಮದ್‌

ಬೌದ್ಧ ಸಮುದಾಯದ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿದೆ : ಸಚಿವ ಜಮೀರ್‌ ಅಹಮದ್‌

ಮೈಸೂರು, ಜೂ.29- ರಾಜ್ಯ ಸರ್ಕಾರ ಬೌದ್ಧ ಸಮುದಾಯದ ಜತೆಯಿದ್ದು, ಅವರ ಬೇಡಿಕೆಗಳಿಗೆ ಸ್ಪಂದಿಸಲಿದೆ ಎಂದು ಅಲ್ಪಸಂಖ್ಯಾ ತರ ಕಲ್ಯಾಣ ಸಚಿವ ಜಮೀರ್‌ ಅಹಮದ್‌ ಖಾನ್‌ ತಿಳಿಸಿದ್ದಾರೆ.

ಸರಸ್ವತಿಪುರಂನಲ್ಲಿ ಮಹಾಬೋಧಿ ಮೈತ್ರಿ ಮಂಡಲವು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ನೀಡಲಾದ ಒಂದು ಕೋಟಿ ರೂ. ಅನುದಾನದಲ್ಲಿ ನಿರ್ಮಿಸಲಾದ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ಬೌದ್ಧ ಸಮುದಾಯವು ರಾಜ್ಯದಲ್ಲಿ ನೆಲೆಸಿರುವುದರ ಜತೆಗೆ ಶಿಕ್ಷಣ ಕ್ಷೇತ್ರದಲ್ಲೂ ಉತ್ತಮ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಶಿಕ್ಷಣಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಯಾವುದೇ ರೀತಿಯ ನೆರವು ನೀಡಲು ಸಿದ್ಧ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಹಾಬೋಧಿ ಮೈತ್ರಿಮಂಡಲದ ಸರಸ್ವತಿಪುರಂ, ಹುಣಸೂರು, ಬೈಲಕುಪ್ಪೆ, ಟಿ.ನರಸೀಪುರ ಶಾಖೆಗಳ ಶಿಕ್ಷಣ ಸಂಸ್ಥೆ ಕಟ್ಟಡ ನಿರ್ಮಾಣ ಹಾಗೂ ಇತರೆ ಸೌಲಭ್ಯಕ್ಕೆ ನೀಡಲಾದ 1.62 ಕೋಟಿ ರೂ. ಅನುದಾನದ ಚೆಕ್‌ಅನ್ನು ಸಚಿವರು ಖುದ್ದು ಬೆಂಗಳೂರಿನಿಂದ ಬಂದು ಆನಂದ ಬಂತೇಜಿ ಅವರಿಗೆ ಹಸ್ತಾಂತರ ಮಾಡಿದರು.

ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಅಗತ್ಯ ಲ್ಯಾಪ್‌ಟಾಪ್‌ ಖರೀದಿಸಲು 2 ಲಕ್ಷ ನೆರವನ್ನು ವೈಯಕ್ತಿಕವಾಗಿ ನೀಡಿದರು.ಎನ್‌ಸಿಸಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಪಡೆಯಲು ಇಲಾಖೆಯಿಂದ ನೆರವು ಕೊಡಿಸಲಾಗುವುದು. ಸಾಧ್ಯವಾಗದಿದ್ದರೆ ವೈಯಕ್ತಿಕ ವಾಗಿ ನೀಡಲಾಗುವುದು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಸಚಿವರಿಗೆ ಗೌರವ ಪ್ರಶಸ್ತಿ ನೀಡಿ ಸನಾನಿಸಲಾಯಿತು.

ಆನಂದ ಬಂತೇಜಿ, ಇತ್ತೀಕಾ ಮಹಾಧೀರಾ, ಸಿದ್ಧಾರ್ಥ್‌ ವಾಟ್ಸಾಯನ್‌ ಉಪಸ್ಥಿತರಿದ್ದರು.
ಗುರುಪುರ ಕ್ಯಾಂಪ್‌ಗೆ ಭೇಟಿ : ಸಚಿವ ಜಮೀರ್‌ ಅಹಮದ್‌ ಖಾನ್‌, ಹುಣಸೂರು ಗುರುಪುರ ಕ್ಯಾಂಪ್‌ನ ಗುಡ್‌ ಮೆಡ್‌ ತಾಂತ್ರಿಕ ವಿಶ್ವವಿದ್ಯಾಲಯ ಸೊಸೈಟಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಅಲ್ಲಿನ ಬೌದ್ಧ ಬಿಕ್ಕುಗಳೊಂದಿಗೆ ಸಂವಾದ ನಡೆಸಿದರು.

RELATED ARTICLES

Latest News