Friday, November 22, 2024
Homeರಾಜ್ಯಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ಮೇಯರ್‌ ಆಗಿ ರಾಮಣ್ಣ ಬಡಿಗೇರ-ಉಪಮೇಯರ್‌ ಆಗಿ ದುರ್ಗಾಮಾ ಆಯ್ಕೆ

ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ಮೇಯರ್‌ ಆಗಿ ರಾಮಣ್ಣ ಬಡಿಗೇರ-ಉಪಮೇಯರ್‌ ಆಗಿ ದುರ್ಗಾಮಾ ಆಯ್ಕೆ

ಹುಬ್ಬಳ್ಳಿ,ಜೂ.29- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್‌ ಆಗಿ ಮಹಾನಗರ ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ ಹಾಗೂ ಉಪಮೇಯರ್‌ ಆಗಿ ಸದಸ್ಯೆ ದುರ್ಗಮಾ ಬೀಜವಾಡ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್‌‍ನಿಂದ ಮೇಯರ್‌ ಸ್ಥಾನಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಾರ್ಡ್‌ ನಂ.33 ಇಮ್ರಾನ್‌ ಯಲಿಗಾರ, ಹಾಗೂ ವಾರ್ಡ್‌ ನಂಬರ್‌ 50ರ ಸದಸ್ಯೆ ಉಪಮೇಯರ್‌ ಸ್ಧಾನಕ್ಕೆ ಮಂಗಳಾ ಮೋಹನ ಹಿರೇಮನಿ ಸ್ಪರ್ಧೆ ಮಾಡಿದ್ದರು.

ಪಕ್ಷಗಳ ಬಲಾಬಲ :
ಬಿಜೆಪಿ-39 ಕಾಂಗ್ರೆಸ್‌‍-33 ಎಐಎಂಐಎಂ- 3, ಜೆಡಿಎಸ್‌‍ 1 ಪಕ್ಷೇತರ, 6 ಮತ ಲೆಕ್ಕಾಚಾರ 90, ಚಲಾವಣೆಯಾಗಲಿರುವ ಒಟ್ಟು ಮತಗಳು 48, ಬಿಜೆಪಿ ಬಳಿಯಿರುವ ಮತಗಳು (ಪಾಲಿಕೆ ಸದಸ್ಯರು ಸಂಸದ ಶಾಸಕರು ವಿಧಾನಪರಿಷತ್‌ ಸದಸ್ಯರು ಪಕ್ಷೇತರರು ಸೇರಿ) 37.
ಸರಸ್ವತಿ ಧೋಂಗಡಿ ಅವರ ಸದಸ್ಯತ್ವ ಅನರ್ಹತೆಯಿಂದ ಬಿಜೆಪಿ ಬಲ 39ರಿಂದ 38ಕ್ಕೆ ಕುಸಿದಿತ್ತು. ಅವರ ಅನರ್ಹತೆ ಆದೇಶವನ್ನು ನ್ಯಾಯಾಲಯ ರದ್ದುಪಡಿಸಿದ್ದರಿಂದ ಬಿಜೆಪಿ ಬಲ ಯಥಾಸ್ಥಿತಿಗೆ ಬಂದಿದೆ.

ಉಪ ಮೇಯರ್‌ ಸ್ಥಾನಕ್ಕೆ ಬಿಜೆಪಿಯಲ್ಲಿ ದುರ್ಗಮ್ಮ ಶಶಿಕಾಂತ ಬಿಜವಾಡ, ಚಂದ್ರಿಕಾ ಮೇಸ್ತ್ರಿ ಅವರು ಪ್ರಮುಖ ಆಕಾಂಕ್ಷಿಗಳಿದ್ದರು. ಪಂಚತಾರಾ ಹೊಟೇಲ್ನಲ್ಲಿ ಸಭೆಭಾರತೀಯ ಜನತಾ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಬರದಂತೆ ಹಾಗೂ ಕುದುರೆ ವ್ಯಾಪಾರ ನಡೆಯದಂತೆ ನಿನ್ನೆನೇ ನಗರದ ಗೋಕುಲ ರಸ್ತೆಯಲ್ಲಿನ ಪಂಚತಾರಾ ಹೊಟೇಲ್ನಲ್ಲಿ
ಬಿಜೆಪಿ ಸದಸ್ಯರನ್ನ ವಾಸ್ತವ್ಯ ಹೂಡಿದ್ದರು.

ಇದರಿಂದಾಗಿ ಕಳೆದ ಎರಡು ದಿನಗಳಿಂದ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದ್ದವು. ಅಗತ್ಯ ಸಂಖ್ಯಾಬಲ ಇರುವ ಬಿಜೆಪಿಯಲ್ಲಿ ಮೇಯರ್‌ ಸ್ಥಾನಕ್ಕೆ ಯಾರು ಅಭ್ಯರ್ಥಿ ಯಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿತ್ತು.

ಬಿಜೆಪಿಯಲ್ಲಿ ಮೇಯರ್ ಸ್ಥಾನಕ್ಕೆ ರಾಮಣ್ಣ ಬಡಿಗೇರ, ತಿಪ್ಪಣ್ಣ ಮಜ್ಜಗಿ, ಸತೀಶ ಹಾನಗಲ್, ಬೀರಪ್ಪ ಖಂಡೇಕಾರ, ಉಮೇಶಗೌಡ ಕೌಜಗೇರಿ ಅವರ ಹೆಸರುಗಳು ಮುಂಚೂಣಿಯಲ್ಲಿದ್ದವು. ಇದರಲ್ಲಿ ಪಕ್ಷದ ವರಿಷ್ಠರು ರಾಮಣ್ಣ ಬಡಿಗೇರಗೆ ಮಣೆ ಹಾಕಿದರು.

ವೈಯಕ್ತಿಕ ವರ್ಚಸ್ಸು, ಪಕ್ಷ ನಿಷ್ಠೆ, ಉತ್ತಮ ಆಡಳಿತದ ಮೂಲಕ ಪಕ್ಷಕ್ಕೆ ಹೆಸರು ತರುವುದು, ಅನುಭವ, ಹಿರಿತನ ಆದರಿಸಿ ಅಭ್ಯರ್ಥಿ ಆಯ್ಕೆ ಮಾಡಲು ಕಸರತ್ತ ಸಹ ನಡೆಸಲಾಗಿತ್ತು.ಈಗಾಗಲೇ ಹಿರಿಯ ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ್‌ ಅವರು ನಾಲ್ಕು ಬಾರಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ರಾಮಣ್ಣ ಬಡಿಗೇರ ವಿಧಾನಸಭೆಯ ಉಪನಾಯಕ ಶಾಸಕ ಅರವಿಂದ್‌ ಬೆಲ್ಲದವರ ಶಿಷ್ಯ ಸಹ ಆಗಿದ್ದು ಇನ್ನೊಂದು ಕಡೆ ಶಾಸಕ ಮಹೇಶ್‌ ಟೆಂಗಿನಕಾಯಿ ಬೀರಪ್ಪ ಖಂಡೆಕಾರ ಪರವಾಗಿ ಬ್ಯಾಟಿಂಗ್‌ ಮಾಡಿದ್ದರು ಎನ್ನಲಾಗಿದೆ.

RELATED ARTICLES

Latest News