Monday, November 25, 2024
Homeಕ್ರೀಡಾ ಸುದ್ದಿ | Sportsಟೀಮ್ ಇಂಡಿಯಾ ಸಾಧನೆಗೆ ಸಚಿನ್‌, ಧೋನಿ ಶ್ಲಾಘನೆ

ಟೀಮ್ ಇಂಡಿಯಾ ಸಾಧನೆಗೆ ಸಚಿನ್‌, ಧೋನಿ ಶ್ಲಾಘನೆ

ನವದೆಹಲಿ, ಜೂ.30- ಟಿ20 ವಿಶ್ವಕಪ್‌ ಗೆದ್ದ ಭಾರತೀಯ ತಂಡವನ್ನು ಮಾಜಿ ಆಟಗಾರರಾದ ಸಚಿನ್‌ ತೆಂಡೂಲ್ಕರ್‌, ಮಹೇಂದ್ರ ಸಿಂಗ್‌ ಧೋನಿ, ವಿವಿಎಸ್‌‍ ಲಕ್ಷ್ಮಣ್‌ ಮತ್ತಿತರ ನಾಯಕರು ಮುಕ್ತಕಂಠದಿಂದ ಶ್ಲಾಘಿಸಿ ಶುಭ ಹಾರೈಸಿದ್ದಾರೆ.ಭಾರತದ ಮೊದಲ ಟಿ 20 ವಿಶ್ವ ಚಾಂಪಿಯನ್‌ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು 17 ವರ್ಷಗಳ ನಂತರ ಟ್ರೋಫಿಯನ್ನು ಮರಳಿ ಪಡೆದ ರೋಹಿತ್‌ ಶರ್ಮಾ ಬಳಗವನ್ನು ಶ್ಲಾಘಿಸಿದ್ದಾರೆ.

2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಭಾರತವನ್ನು ತಮ ಚೊಚ್ಚಲ ಪ್ರಶಸ್ತಿ ಗೆಲುವಿಗೆ ಕಾರಣರಾದ ಮಾಜಿ ನಾಯಕ ಧೋನಿ, ಆಟದ ಪ್ರತಿಕೂಲ ಸಂದರ್ಭದಲ್ಲಿ ಶಾಂತತೆಯನ್ನು ಕಾಯ್ದುಕೊಂಡಿದ್ದಕ್ಕಾಗಿ ತಂಡದ ಆಟಗಾರರನ್ನು ಅಭಿನಂದಿಸಿದ್ದಾರೆ.

ಮುಂದಿನ ತಿಂಗಳ ಆರಂಭದಲ್ಲಿ 43 ನೇ ವರ್ಷಕ್ಕೆ ಕಾಲಿಡಲಿರುವ ಧೋನಿ, ಎಲ್ಲಾ ಭಾರತೀಯರಿಂದ ತವರಿಗೆ ಮತ್ತು ಪ್ರಪಂಚದ ಎಲ್ಲೆಡೆಯಿಂದ ವಿಶ್ವಕಪ್‌ ಅನ್ನು ಮನೆಗೆ ತಂದಿದ್ದಕ್ಕಾಗಿ ದೊಡ್ಡ ಧನ್ಯವಾದಗಳು. ಇದೇ ನನ್ನ ಹುಟ್ಟುಹಬ್ಬದ ಉಡುಗೊರೆ ಎಂದಿದ್ದಾರೆ.
ಲೆಜೆಂಡರಿ ಸಚಿನ್‌ ತೆಂಡೂಲ್ಕರ್‌ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಭಾರತದ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ, 1983 ಮತ್ತು 2011 ರಲ್ಲಿ ಎರಡು 50 ಓವರ್‌ಗಳ ವಿಶ್ವಕಪ್‌ ಗೆಲುವುಗಳು ಮತ್ತು 2007 ರ ಚೊಚ್ಚಲ ವಿಜಯದ ನಂತರ ದೇಶವು ಈಗ ನಾಲ್ಕನೇ ಸ್ಟಾರ್‌ ಅನ್ನು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

2011 ರ ವಿಶ್ವಕಪ್‌ ಗೆಲುವಿನಿಂದ ವಂಚಿತರಾದ ನನ್ನ ಸ್ನೇಹಿತ ರಾಹುಲ್‌ ದ್ರಾವಿಡ್‌ ಅವರಿಗೆ ತುಂಬಾ ಸಂತೋಷವಾಗಿದೆ ಆದರೆ ಈ ಟಿ20 ವಿಶ್ವಕಪ್‌ ಗೆಲುವಿಗೆ ಅವರ ಕೊಡುಗೆ ಅಪಾರವಾಗಿದೆ ಎಂದಿದ್ದಾರೆ.

ರೋಹಿತ್‌ ಶರ್ಮಾ ಅವರ ನಾಯಕತ್ವ ಮತ್ತು ಇತರ ತಂಡದ ಸದಸ್ಯರ ಕೊಡುಗೆಯನ್ನು ಶ್ಲಾಘಿಸಿದ ಸಚಿನ್‌, ರೋಹಿತ್‌ ಶರ್ಮಾ ಅದ್ಭುತ ನಾಯಕತ್ವ! 2023ರ ಏಕದಿನ ವಿಶ್ವಕಪ್‌ನ ಸೋಲನ್ನುಮರೆಸಿ ಮತ್ತೆ ನಮ ಎಲ್ಲಾ ಆಟಗಾರರನ್ನು ಟಿ20 ವಿಶ್ವಕಪ್‌ಗೆ ಪ್ರೇರೇಪಿಸುವಂತೆ ಮಾಡುವುದು ಶ್ಲಾಘನೀಯ ಎಂದರು.

ಜಸ್ಪ್ರೀತ್‌ ಬುವ್ರಾ ಅವರ ಪಂದ್ಯಾವಳಿಯ ಆಟಗಾರ ಪ್ರಶಸ್ತಿ ಮತ್ತು ವಿರಾಟ್‌ ಕೊಹ್ಲಿ ಅವರ ಪಂದ್ಯದ ಆಟಗಾರ ಪ್ರಶಸ್ತಿ ಎರಡೂ ಅರ್ಹವಾಗಿವೆ ಎಂದು ಅವರು ಹೇಳಿದರು.ಒಟ್ಟು ತಂಡದ ಪ್ರಯತ್ನ. ಎಲ್ಲಾ ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ಬಿಸಿಸಿಐಗೆ ಹತ್ಪೂರ್ವಕ ಅಭಿನಂದನೆಗಳು ಎಂದು ತೆಂಡೂಲ್ಕರ್‌ ಎಂದಿದ್ದಾರೆ.ಅದೇ ರೀತಿ ವಿವಿಎಸ್‌‍ ಲಕ್ಷ್ಮಣ್‌ ಸೇರಿದಂತೆ ಹಲವಾರು ಹಿರಿಯ ಕಿರಿಯ ಆಟಗಾರರು ಭಾರತ ಕ್ರಿಕೆಟ್‌ ತಂಡಕ್ಕೆ ಅಭಿನಂದನೆಗಳ ಮಹಾಪೂರವನ್ನೆ ಹರಿಸಿದ್ದಾರೆ.

RELATED ARTICLES

Latest News