ಹೈದರಾಬಾದ್, ಜು.1 (ಪಿಟಿಐ) – ದೇಶಾದ್ಯಂತ ಕೈಗಾರಿಕಾ ಬೆಳವಣಿಗೆಗೆ ಅನುಕೂಲವಾಗುವಂತೆ ಅನುಕೂಲಕರ ವಾತಾವರಣವನ್ನು ಸಷ್ಟಿಸಲು ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಇಲ್ಲಿ ನಡೆದ ಕೈಗಾರಿಕಾ ನಾಯಕರು ಮತ್ತು ಪಾಲುದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರವು ತೆಲಂಗಾಣವನ್ನು ಅತ್ಯಂತ ಪ್ರಮುಖ ರಾಜ್ಯವಾಗಿ ನೋಡುತ್ತಿದೆ ಮತ್ತು ಮತ್ತೆ ವಾಣಿಜ್ಯ ಸಚಿವರಾದ ನಂತರ ತಮ ಮೊದಲ ಪ್ರಚಾರ ಕಾರ್ಯಕ್ರಮವನ್ನು ಹೈದರಾಬಾದ್‌ನಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದರು.
ನೀತಿಗಳು ಮತ್ತು ವ್ಯಾಪಾರ ವಾತಾವರಣ, ಕೈಗಾರಿಕೆಗಳ ವಿವಿಧ ಅಗತ್ಯತೆಗಳ ಬಗ್ಗೆ ಎಲ್ಲಾ ಶಿಫಾರಸುಗಳು ಮತ್ತು ಸಲಹೆಗಳನ್ನು ನಾನು ಮತ್ತು ನನ್ನ ಅಧಿಕಾರಿಗಳು ಗಮನಿಸಿದ್ದೇವೆ ಎಂದು ಅವರು ಹೇಳಿದರು.
ಅವುಗಳಲ್ಲಿ ಕೆಲವನ್ನು ನಾನು ಪರಿಹರಿಸಲು ಪ್ರಯತ್ನಿಸುತ್ತೇನೆ. ಆದರೆ ಸ್ಥೂಲ ಮಟ್ಟದಲ್ಲಿ ದೇಶಾದ್ಯಂತ ಕೈಗಾರಿಕಾ ಬೆಳವಣಿಗೆಗೆ ಅನುಕೂಲಕರ ವಾತಾವರಣವನ್ನು ಸಷ್ಟಿಸಲು ಸರ್ಕಾರ ಬದ್ಧವಾಗಿದೆ ಅವರು ಹೇಳಿದರು.