ಬೆಂಗಳೂರು,ಜು.2- ಹಿಂದೂ ಎಂದು ಹೇಳಿಕೊಳ್ಳುವವರು 24 ಗಂಟೆ ಹಿಂಸೆ, ದ್ವೇಷ, ಸುಳ್ಳನ್ನು ಹರಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ನೆಟ್ಟಿಗರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಸತ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನಮ ನಾಯಕರಾದ ರಾಹುಲ್ ಗಾಂಧಿ ಅವರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲಾಗದ ಬಿಜೆಪಿ, ತನಗೆ ಹೇಳಿದ ಮಾತನ್ನು ಹಿಂದೂ ಧರ್ಮಕ್ಕೆ ಹೇಳಿದ್ದಾರೆ ಎಂದು ತಿರುಚಿ ತನ್ನ ವೈಲ್ಯ ಮರೆಮಾಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ.
ವಾಟ್ಸ್ ಆಪ್ ನಲ್ಲಿ ಬಿಜೆಪಿ ಕೃಪಾಪೋಷಿತ ಫೇಕ್ ನ್ಯೂಸ್ ಶೂರರು ಹರಿಬಿಟ್ಟಿರುವ ಅರ್ಧಂಬರ್ಧ ವಿಡಿಯೋ ನೋಡಿ ಅದನ್ನು ಇತರರಿಗೂ ರ್ಶೇ ಮಾಡದಿರಿ. ಸತ್ಯ ಏನೆಂಬುದನ್ನು ಒಳಗೊಂಡ ಪೂರ್ತಿ ವಿಡಿಯೋ ಇಲ್ಲಿದೆ ಎಂದು ವಿಡಿಯೋ ಹಂಚಿಕೂಂಡಿದ್ದರು.ಅವರು ಹಂಚಿಕೊಂಡ ವಿಡಿಯೋದಲ್ಲಿ ರಾಹುಲ್ ಮೊದಲು ಹೇಳಿದ್ದು, ನಂತರ ಸ್ಪಷ್ಟನೆ ನೀಡಿದ್ದು ಎರಡೂ ಇದೆ. ಸಿದ್ದರಾಮಯ್ಯನವರ ಸಮರ್ಥನೆಯನ್ನು ಬಹುತೇಕ ನೆಟ್ಟಿಗರು ಒಪ್ಪಿಕೊಂಡಿಲ್ಲ.
ಮಾನ್ಯ ಮುಖ್ಯಮಂತ್ರಿಗಳೇ ಸ್ವಲ್ಪ ವಿವೇಚನೆ ಇರಲಿ :
ಮಾನ್ಯ ಮುಖ್ಯಮಂತ್ರಿಗಳೇ ಸ್ವಲ್ಪ ವಿವೇಚನೆ ಇರಲಿ, ಅಖಂಡ ಭಾರತವನ್ನು ಯಾವುದರ ಆಧಾರದ ಮೇಲೆ ವಿಭಜನೆ ಮಾಡಿದ್ದು. ಭಾರತವು ಬಾಂಗ್ಲಾದೇಶ ಉಗಮಕ್ಕೆ ಕಾರಣವಾಯಿತು ಆದರೆ ಅಲ್ಲಿ ಹಿಂದೂ ಧರ್ಮವನ್ನು ಹೇರಲಿಲ್ಲ, ಆದರೆ ಬಾಂಗ್ಲಾದೇಶ ಜಾತ್ಯತೀತತೆ ಬಿಟ್ಟು ಮುಸ್ಲಿಂ ರಾಷ್ಟ್ರ ಅಂತ ಘೋಷಣೆ ಮಾಡಿಕೊಂಡಿತ್ತು. ಅಲ್ಲಿನ ಹಿಂದೂಗಳ ಪರಿಸ್ಥಿತಿ ಅರಿವಿದೇಯ? ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ.
ನಿಮ ಮತ್ತು ಕಾಂಗ್ರೆಸ್ ನ ಹಿಂದೂ ವಿರೋಧಿ ನೀತಿ :
ಸಿದ್ದರಾಮಯ್ಯನವರೇ, ಬಹಳ ಬುದ್ಧಿವಂತಿಕೆಯಿಂದ ನಿಮ ಮತ್ತು ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿಯನ್ನು ರಾಹುಲ್ ಗಾಂಧಿಯ ಹೆಸರಲ್ಲಿ ವಿವರಿಸಿದ್ದೀರಿ!! ರಾಜಕೀಯ ಲಾಭಕ್ಕಾಗಿ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿದಿದ್ದೀರಿ ಕಾಂಗ್ರೆಸ್‌ನವರು.. ಥೂ ನಾಚಿಕೆಯಾಗಬೇಕು ಕಾಂಗ್ರೆಸ್ ನವರಿಗೆ!! ಹಿಂದೂಗಳು ಹಿಂಸೆ, ಭಯ ಮತ್ತು ಸುಳ್ಳು ಹರಡುವವರೇ? ಎನ್ನುವ ಇನ್ನೊಂದು ಪ್ರತಿಕ್ರಿಯೆ ಬಂದಿದೆ.
ಪರಮೇಶ್ವರ ತ್ರಿಶೂಲ ದುಷ್ಟರ ಸಂಹಾರಕ್ಕೆ ಇರೋದು :
ಪರಮೇಶ್ವರ ತ್ರಿಶೂಲ ದುಷ್ಟರ ಸಂಹಾರಕ್ಕೆ ಇರೋದು. ಹಿಂದೂಗಳು ಆಗಿರುವುದಕ್ಕೆ ಇಲ್ಲಿಯವರೆಗೂ ಅನ್ಯ ಧರ್ಮದವರ ದಾಳಿ ಯಾರನ್ನು ಸಹಿಸಿಕೊಂಡು ತಮ ದೇಶದ ಎರಡು ಭಾಗವನ್ನು ಕಳೆದುಕೊಂಡು, ಶಿರ ಭಾಗವನ್ನು ಇದೀಗ ಉಳಿಸಿಕೊಂಡಿರೋದು. ಕತ್ತೆಗೇನು ಗೊತ್ತು ಭತ್ತದ ಸುಗ್ಗಿ? ದಾಳಿಗೆ ಪ್ರತಿದಾಳಿ ಎಂದು. ಕರ್ನಾಟಕದ ಜನತೆಗೆ ರಾಜ್ಯ ಸರ್ಕಾರದ ನೀತಿ ಗೊತ್ತು ಎನ್ನುವ ಮತ್ತೊಂದು ಪ್ರತಿಕ್ರಿಯೆ ಬಂದಿದೆ.
ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ತಮ ಚೊಚ್ಚಲ ಭಾಷಣವನ್ನು ವೀರಾವೇಷವಾಗಿ ಏನೋ ಲೋಕಸಭೆಯಲ್ಲಿ ಮಾಡಿದ್ದಾರೆ. ಆದರೆ, ತಮ ಭಾಷಣದ ವೇಳೆ ಶಿವನ ೇಟೋ ಹಿಡಿದು ಮಾಡಿದ ಭಾಷಣ ಆಕೋಶಕ್ಕೆ ಕಾರಣವಾಗಿದೆ. ಮಾತಿನ ಭರದಲ್ಲಿ ವಿನಾಕಾರಣ ವಿವಾದ ಮೈಗೆಳೆದುಕೊಂಡಿದ್ದಾರೆ.
ಆ ವೇಳೆ, ಮಧ್ಯ ಪ್ರವೇಶಿಸಿದ ಪ್ರಧಾನಿ ಮೋದಿ, ಇಡೀ ಹಿಂದೂ ಸಮುದಾಯವನ್ನು ಹಿಂಸಾತಕ ಎಂದು ಕರೆಯುವುದು ಗಂಭೀರ ವಿಚಾರ ಎಂದು ಹೇಳಿದ್ದರು. ಆಗ, ತಮ ತಪ್ಪಿನ ಅರಿವಾದ ರಾಹುಲ್ ಗಾಂಧಿ, ಇಲ್ಲ..ಇಲ್ಲ.. ನಾನು ಹೇಳಿದ್ದು ಬಿಜೆಪಿ, ಆರ್‌ಎಸ್‌ಎಸ್, ಮೋದಿ ಮಾತ್ರ ಹಿಂದೂಗಳಲ್ಲ ಎಂದು ಸ್ಪಷ್ಟನೆ ನೀಡಿದ್ದರು. ರಾಹುಲ್ ಅವರ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯ ತಮ ಟ್ವಿಟ್ಟರ್ (ಎಕ್ಸ್ ) ನಲ್ಲಿ ಸಮರ್ಥಿಸಿಕೊಂಡಿದ್ದು ಹೀಗೆ.. ಭಯಪಡಬೇಡಿ, ಭಯಗೊಳಿಸಬೇಡಿ ಎಂದು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಸೇರಿದಂತೆ ಎಲ್ಲ ಧರ್ಮಗಳು ಸಾರಿ ಹೇಳಿವೆ.
ಆದರೆ ಬಿಜೆಪಿಯಲ್ಲಿ ಹಿಂದುಗಳೆಂದು ಹೇಳಿಕೊಳ್ಳುವವರ ಕೆಲಸವೇ ಹಿಂಸೆ, ಭಯ ಮತ್ತು ಸುಳ್ಳು ಹರಡುವುದು…. ಹೀಗೆಂದು ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಹೇಳಿದರೆ ಬಿಜೆಪಿ ನಾಯಕರೇಕೆ ಉರಿದು ಬೀಳಬೇಕು? ಬಿಜೆಪಿ ಅವರಿಗೆ, ಆರ್.ಎಸ್.ಎಸ್ ನವರಿಗೆ, ಬಿಜೆಪಿಯವರಿಗೆ ಗುರಿಯಾಗಿಸಿ ಹೇಳಿದರೆ ಅದು ಇಡೀ ಹಿಂದೂ ಧರ್ಮಕ್ಕೆ ಹೇಳಿದಂತಾಗುತ್ತದೆಯೇ? ಎಂದು ಹೇಳಿಕೆಯನ್ನು ರಾಹುಲ್ ಗಾಂಧಿ ಅವರು ಸಮರ್ಥನೆ ಮಾಡಿಕೊಂಡಿದ್ದರು.