Friday, November 22, 2024
Homeಬೆಂಗಳೂರುಪ್ಲಾಸ್ಟಿಕ್‌ ನಿಷೇಧಕ್ಕೆ ಕೈ ಜೋಡಿಸಿ : ತುಷಾರ್‌ ಗಿರಿನಾಥ್‌ ಮನವಿ

ಪ್ಲಾಸ್ಟಿಕ್‌ ನಿಷೇಧಕ್ಕೆ ಕೈ ಜೋಡಿಸಿ : ತುಷಾರ್‌ ಗಿರಿನಾಥ್‌ ಮನವಿ

ಬೆಂಗಳೂರು, ಜು.3- ಅಂತಾರಾಷ್ಟ್ರೀಯ ಪ್ಲಾಸ್ಟಿಕ್‌ ಬ್ಯಾಗ್‌ ಮುಕ್ತ ದಿನಾಚರಣೆ ಅಂಗವಾಗಿ ಪೂರ್ವ ವಲಯ ಹೆಬ್ಬಾಳ ವಿಭಾಗದ ಮುನಿರೆಡ್ಡಿ ಪಾಳ್ಯ ವ್ಯಾಪ್ತಿಯಲ್ಲಿ ಪಾಸ್ಟಿಕ್‌ ನಿಷೇಧದ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಜಾಗೃತಿ ಜಾಥಾ ನಡೆಸಿದರು.

ನಗರದಾದ್ಯಂತ ಒಮೆ ಬಳಸುವ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಽಸಬೇಕು. ಬಟ್ಟೆ ಬ್ಯಾಗ್‌ ಅಥವಾ ಪೇಪರ್‌ ಬ್ಯಾಗ್‌ಗಳನ್ನು ಮಾತ್ರ ಬಳಸಲು ನಾಗರೀಕರು ಹಾಗೂ ವ್ಯಾಪಾರಿಗಳಲ್ಲಿ ಹೆಚ್ಚಾಗಿ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬೀದಿ ಬದಿ ವ್ಯಾಪಾರಿಗಳು, ಅಂಗಡಿ- ಮುಂಗಟ್ಟುಗಳಲ್ಲಿ ಮಾರಾಟ ಮಾಡುವವರಿಗೆ ಯಾವ್ಯಾವ ಪ್ಲಾಸ್ಟಿಕ್‌ ನಿಷೇಧವಾಗಿದೆ. ಯಾವುದನ್ನು ಬಳಸಲು ಅನುಮತಿಯಿದೆ ಎಂಬುದರ ಬಗ್ಗೆ ಬಿತ್ತಿಪತ್ರಗಳನ್ನು ನೀಡಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಜಾಗೃತಿ ಜಾಥಾ ಸಮಯದಲ್ಲಿ ಬೀದಿಬದಿ ವ್ಯಾಪಾರಿಗಳು, ಅಂಗಡಿಗಳ ಬಳಿ ತೆರಳಿ ಬಿತ್ತಿಪತ್ರಗಳನ್ನು ವಿತರಿಸುವ ಜೊತೆಗೆ ಬಟ್ಟೆ ಬ್ಯಾಗ್‌ಗಳನ್ನು ವಿತರಿಸಿ ಇನ್ನು ಮುಂದೆ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ಬಳಸದೆ ಇದೇ ರೀತಿಯ ಬಟ್ಟೆ ಬ್ಯಾಗ್‌ಗಳನ್ನು ಮಾತ್ರ ಬಳಸಬೇಕು. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ಬಳಸಬಾರದೆಂದು ಮನವಿ ಮಾಡಿದರು.

ಎಳನೀರು ಮಾರಾಟ ಮಾಡುವವರಿಗೆ ಪೇಪರ್‌ ಸ್ಟ್ರಾ ವಿತರಣೆ ಮಾಡಿ ಪ್ಲಾಸ್ಟಿಕ್‌ ನಿಂದ ತಯಾರಿಸಿದ ಉತ್ಪನ್ನಗಳನ್ನು ಯಾವುದೇ ಕಾರಣಕ್ಕೂ ಬಳಸದಂತೆ ಮನವಿ ಮಾಡಿದರು.
ಇದೇ ವೇಳೆ ಸಾರ್ವಜನಿಕರಿಗೆ ಮನೆಯಿಂದಲೇ ಕೈ ಚೀಲಗಳನ್ನು ತರಲು ಅಭ್ಯಾಸ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಸ್ಥಳಿಯವಾಗಿ ಲಭ್ಯವಿರುವ ಬಟ್ಟೆ ಚೀಲಗಳನ್ನು ಖರೀದಿಸಲು ಮನವಿ ಮಾಡಿದರು.

ಮೊದಲು ಎಚ್ಚರಿಕೆ ನಂತರ ದಂಡ: ನಿಷೇಽತ ಪ್ಲಾಸ್ಟಿಕ್‌ ಬಳಸುವವರಿಗೆ ಪ್ಲಾಸ್ಟಿಕ್‌ ಬಳಸುತ್ತಿದ್ದರೆ ಮೊದಲು ಎಚ್ಚರಿಕೆ ನೀಡುತ್ತೇವೆ. ಮತ್ತೆ ಪ್ಲಾಸ್ಟಿಕ್ ಬಳಸುವುದು ಕಂಡುಬಂದರೆ ದಂಡ ವಿಧಿಸಲಾಗುವುದು. ಒಮೆ ಬಳಸುವ ಪ್ಲಾಸ್ಟಿಕ್‌ ಪರಿಸಕ್ಕೆ ಹಾನಿಕಾರಕವಾಗಿದ್ದು, ಅದನ್ನು ನಾವೆಲ್ಲರೂ ಸೇರಿ ನಿಷೇಧಿಸೋಣ ಎಂದು ಅರಿವು ಮೂಡಿಸಿದರು.

ಅಂತಾರಾಷ್ಟ್ರೀಯ ಪ್ಲಾಸ್ಟಿಕ್‌ ಬ್ಯಾಗ್‌ ಮುಕ್ತ ದಿನಾಚರಣೆ ಅಂಗವಾಗಿ ನಗರದ ಎಲ್ಲಾ 8 ವಲಯಗಳಲ್ಲೂ ಜಾಗೃತಿ ಜಾಥಾ ಕಾರ್ಯಕ್ರಮಗಳನ್ನು ಹಮಿಕೊಂಡು ವ್ಯಾಪಾರಿಗಳು ಹಾಗೂ ನಾಗರೀಕರಲ್ಲಿ ಹರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.

ಈ ವೇಳೆ ವಲಯ ಆಯುಕ್ತರಾದ ಸ್ನೇಹಲ್‌‍, ವಲಯ ಜಂಟಿ ಆಯುಕ್ತರಾದ ಸರೋಜಾ, ಘನತ್ಯಾಜ್ಯ ವಿಭಾಗದ ಅಧೀಕ್ಷಕ ಅಭಿಯಂತರರಾದ ವಿಶ್ವನಾಥ್‌, ಆರೋಗ್ಯಾಽ ಕಾರಿಗಳು, ಮಾರ್ಷಲ್‌ಗಳು, ಸ್ಥಳೀಯ ಕ್ಷೇಮಾಭಿವೃದ್ದಿ ಸಂಘದ ಸದಸ್ಯರು/ಸ್ಥಳಿಯರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

Latest News