ಮುಂಬೈ, ಜು.4- ಹಿಂದಿ, ಮರಾಠಿ, ಬಂಗಾಳಿ ಸೇರಿದಂತೆ ಹಲವು ಚಿತ್ರರಂಗಗಳಲ್ಲಿ ನಟಿಸಿದ್ದ ಸ್ಮೃತಿ ಬಿಸ್ವಾಸ್ ಇಂದು ಬೆಳಗ್ಗೆ ಮಹಾರಾಷ್ಟ್ರದ ನಾಸಿಕ್ನಲ್ಲಿರುವ ತಮ ನಿವಾಸದಲ್ಲಿ ನಿಧನರಾಗಿದ್ದಾರೆ.
ನಾಸಿಕ್ನಲ್ಲಿ ಒಂದು ಸಣ್ಣ ಮನೆಯಲ್ಲಿ ವಾಸವಾಗಿದ್ದ ಸತಿ ಬಿಸ್ವಾಸ್ ಅವರು ಕಳೆದ ಫೆಬ್ರುವರಿಯಲ್ಲಿ ತಮ 100ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಕಳೆದ ರಾತ್ರಿ ನಿಧನರಾಗಿದ್ದಾರೆ.
ಬಾಲ ಕಲಾವಿದೆಯಾಗಿ ಚಿತ್ರರಂಗದ ಜೀವನ ಆರಂಭಿಸಿದ ಸತಿ ಬಿಸ್ವಾನ್, ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಗುರುದತ್, ವಿ.ಶಾಂತರಾಮನ್, ಮೃನಾಲ್ ಸೇನ್, ಬಿಮಾಲ್ ರಾಯ್, ಬಿ.ಆರ್.ಚೋಪ್ರಾ ಹಾಗೂ ರಾಜ್ಕಪೂರ್ ಆ್ಯಕ್ಷನ್ ಕಟ್ ಹೇಳಿರುವ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಸತಿ ಬಿಸ್ವಾಸ್ ಅವರು ಬಾಲಿವುಡ್ನ ಶೋ ಮ್ಯಾನ್ ದೇವಾನಂದ್, ಕಿಶೋರ್ ಕುಮಾರ್, ಬಲರಾಜ್ ಶೈನಿ ಸೇರಿದಂತೆ ಹಲವು ಖ್ಯಾತ ಹೀರೋಗಳ ಜೊತೆಗೆ ಬೆಳ್ಳಿಪರದೆ ಹಂಚಿಕೊಂಡಿದ್ದರು.
1930ರಲ್ಲಿ ಸಂಧ್ಯಾ ಎಂಬ ಬಂಗಾಳಿ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಸತಿ ಬಿಸ್ವಾನ್, 1960ರಲ್ಲಿ ಮಾಡೆಲ್ ಗರ್ಲ್ ಎಂಬ ಸಿನಿಮಾದಲ್ಲಿ ಕೊನೆಯ ಬಾರಿ ಬಣ್ಣ ಹಚ್ಚಿದ್ದರು. ಖ್ಯಾತ ಸಿನಿಮಾ ನಿರ್ದೇಶಕ ಹಾಗೂ ನಿರ್ಮಾಪಕ ಎಸ್.ಡಿ.ನಾರಂಗ್ ಅವರೊಂದಿಗೆ ವಿವಾಹ ಜೀವನ ಆರಂಭಿಸಿದ ನಂತರ ಚಿತ್ರರಂಗದಿಂದ ದೂರ ಸರಿದ ಸತಿ, ಪತಿ ನಿಧನರಾದ ನಂತರ ನಾಸಿಕ್ನಲ್ಲಿ ನೆಲೆಸಿದ್ದರು.
2024ರ ಫೆಬ್ರವರಿ 17 ರಂದು ತಮ 100ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸತಿ ಬಿಸ್ವಾಸ್ ಅವರು ಸತ್ಯಜಿತ್ ಹಾಗೂ ರಾಜೀವ್ ಎಂಬ ಇಬ್ಬರು ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಸತಿ ಬಿಸ್ವಾಸ್ ಅವರ ನಿಧನಕ್ಕೆ ಬಾಲಿವುಡ್ನ ಸೂಪರ್ ಸ್ಟಾರ್ಗಳಾದ ಅಮಿತಾಬ್ಬಚ್ಚನ್ ಸೇರಿದಂತೆ ಹಲವು ಕಲಾವಿದರು ಹಾಗೂ ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.