ನಿತ್ಯ ನೀತಿ : ಕಷ್ಟ ನಿಜಕ್ಕೂ ಕೆಟ್ಟದ್ದಲ್ಲ. ಅದು ನಮ ಮುಂದಿನ ನಡೆ ಹೇಗಿರಬೇಕು ಎಂಬುದನ್ನು ತಿಳಿಸುವ ಒಬ್ಬ ಶಿಕ್ಷಕನಂತೆ.
ಪಂಚಾಂಗ : ಶುಕ್ರವಾರ, 05-07-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಕೃಷ್ಣ ಪಕ್ಷ /ತಿಥಿ: ಅಮಾವಾಸ್ಯೆ / ನಕ್ಷತ್ರ: ಆರಿದ್ರಾ / ಯೋಗ: ಧ್ರುವ / ಕರಣ: ಚತುಷ್ಪಾದ
ಸೂರ್ಯೋದಯ – ಬೆ.05.58
ಸೂರ್ಯಾಸ್ತ – 06.50
ರಾಹುಕಾಲ – 10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ಪ್ರಯತ್ನವಿದ್ದಲ್ಲಿ ಆದಾಯ ಸಿಗಲಿದೆ. ಸಮಾಜದಲ್ಲಿ ಗೌರವ ಪ್ರಾಪ್ತಿಯಾಗಲಿದೆ.
ವೃಷಭ: ಕಾರ್ಯ ಸಾಮರ್ಥ್ಯವನ್ನು ಅರ್ಥಮಾಡಿ ಕೊಂಡು ಆದಾಯ ಹೆಚ್ಚಿಸುವ ಕೆಲಸ ಮಾಡಿ.
ಮಿಥುನ: ಉಪನ್ಯಾಸಕರಿಗೆ ಶುಭ ದಿನ. ಕಲಾವಿದರಿಗೆ ಅವಕಾಶ ಕೈ ತಪ್ಪುವ ಸಾಧ್ಯತೆ ಇದೆ.
ಕಟಕ: ವಸಾ್ತ್ರಭರಣ ಖರೀದಿಸುವ ಸಾಧ್ಯತೆ ಇದೆ.
ಸಿಂಹ: ಅಪರೂಪದ ಅತಿಥಿ ಆಗಮನದಿಂದ ಮನಸ್ಸಿಗೆ ಸಂತೋಷವಾಗಲಿದೆ.
ಕನ್ಯಾ: ಉನ್ನತ ಅಧಿ ಕಾರಿಗಳು ನಿಮ್ಮ ಮೇಲೆ ಕೋಪಗೊಳ್ಳು ವರು. ಎಚ್ಚರಿಕೆಯಿಂದಿರಿ.
ತುಲಾ: ಯುವಕರಿಗೆ ವೃತ್ತಿಯಲ್ಲಿ ಹಿನ್ನಡೆಯಾಗುವುದು.
ವೃಶ್ಚಿಕ: ಸ್ನೇಹಿತರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಒಳಿತು.
ಧನುಸ್ಸು: ಉದ್ಯೋಗ ಬದಲಾವಣೆಗೆ ಉತ್ತಮ ಸಮಯ ಮತ್ತು ಹೊಸ ಅವಕಾಶಗಳು ಸಿಗಲಿವೆ.
ಮಕರ: ಯೋಚಿಸುವ ಪ್ರತಿಯೊಂದು ಕೆಲಸ- ಕಾರ್ಯಗಳು ವಿಳಂಬ ರೀತಿಯಲ್ಲಿ ನಡೆಯಲಿವೆ.
ಕುಂಭ: ಉದ್ಯಮಿಗಳು ಹೊಸ ಶಾಖೆ ತೆರೆಯಲು ಬೇಕಾದ ಅನುಕೂಲಗಳು ಒದಗುತ್ತವೆ.
ಮೀನ: ಉನ್ನತ ಮಟ್ಟದಲ್ಲಿ ಕಾರ್ಯನಿರ್ವ ಹಿಸುವವರಿಗೆ ಜನಸಾಮಾನ್ಯರಿಂದ ಉತ್ತಮ ಪ್ರೋತ್ಸಾಹ ದೊರೆಯಲಿದೆ.