ಬೆಂಗಳೂರು,ಜು.6- ರಾಜ್ಯದಲ್ಲಿ ಜೂನ್ ತಿಂಗಳಿನ ವಾಣಿಜ್ಯ ತೆರಿಗೆ ಸಂಗ್ರಹ ಪ್ರಮಾಣ 7773.83 ಕೋಟಿ ರೂ. ಆಗಿದೆ. ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ ಒಟ್ಟು 24,862.77 ಕೋಟಿ ರೂ. ಸಂಗ್ರಹವಾಗಿದೆ. ಮೇ ತಿಂಗಳಿಗಿಂತ ಜೂನ್ ತಿಂಗಳಿನಲ್ಲಿ 349.52 ಕೋಟಿ ರೂ. ಹೆಚ್ಚು ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ. ಮೇ ತಿಂಗಳಿನಲ್ಲಿ 7424.31 ಕೋಟಿ ರೂ. ಸಂಗ್ರಹವಾಗಿತ್ತು.
ಜೂನ್ ತಿಂಗಳಿನಲ್ಲಿ 5792.34 ಕೋಟಿ ಸರಕು ಸೇವಾ ತೆರಿಗೆ, 1885.65 ಕೋಟಿ ಕರ್ನಾಟಕ ಮಾರಾಟ ತೆರಿಗೆ ಹಾಗೂ 95.84 ಕೋಟ ರೂ. ವೃತ್ತಿ ತೆರಿಗೆ ಸಂಗ್ರಹವಾಗಿದೆ.ಮೇ ತಿಂಗಳಿಗೆ ಹೋಲಿಸಿದರೆ ಜೂನ್ ತಿಂಗಳಿನಲ್ಲಿ ಸುಮಾರು 20 ಕೋಟಿ ರೂ.ನಷ್ಟು ವೃತ್ತಿ ತೆರಿಗೆ ಕಡಿಮೆಯಾಗಿದೆ. ಕಳೆದ ವರ್ಷದ ಜೂನ್ ತಿಂಗಳಿಗೆ ಹೋಲಿಸಿದರೂ ಈ ವರ್ಷ ಜೂನ್ ತಿಂಗಳ ವಾಣಿಜ್ಯ ತೆರಿಗೆ ಹೆಚ್ಚಾಗಿದೆ.
ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಇದುವರೆಗೆ 19043.44 ಕೋಟಿ ಸರಕು ಸೇವಾ ತೆರಿಗೆ, 5428.45 ಕೋಟಿ ಮಾರಾಟ ತೆರಿಗೆ ಹಾಗೂ 390.88 ಕೋಟಿ ರೂ. ವೃತ್ತಿ ತೆರಿಗೆ ಸಂಗ್ರಹವಾಗಿದೆ. ಒಟ್ಟಾರೆ 24862.77 ಕೋಟಿ ರೂ. ವಾಣಿಜ್ಯ ತೆರಿಗೆ ರಾಜ್ಯದಲ್ಲಿ ಸಂಗ್ರಹವಾದಂತಾಗಿದೆ.