Monday, November 25, 2024
Homeರಾಷ್ಟ್ರೀಯ | NationalBIG NEWS : ವಿಚ್ಛೇದಿತ ಮುಸ್ಲಿಂ ಮಹಿಳೆರೂ ಪತಿಯಿಂದ ಜೀವನಾಂಶ ಪಡೆಯಬಹುದು : ಸುಪ್ರೀಂ ಮಹತ್ವದ...

BIG NEWS : ವಿಚ್ಛೇದಿತ ಮುಸ್ಲಿಂ ಮಹಿಳೆರೂ ಪತಿಯಿಂದ ಜೀವನಾಂಶ ಪಡೆಯಬಹುದು : ಸುಪ್ರೀಂ ಮಹತ್ವದ ತೀರ್ಪು

ನವದೆಹಲಿ,ಜು.10- ಕ್ರಿಮಿನಲ್‌ ಪ್ರಕ್ರಿಯೆ ಸಂಹಿತೆ(ಸಿಆರ್‌ಪಿಸಿ) ಸೆಕ್ಷನ್‌ 125ರಡಿ ಪತಿಯೊಬ್ಬ ಕಾನೂನು ಬದ್ಧವಾಗಿ ವಿಚ್ಛೇಧನ ಪಡೆದ ಮುಸ್ಲಿಂ ಮಹಿಳೆಯು ಜೀವನಾಂಶದ ಹಕ್ಕು ಪಡೆಯಲು ಅರ್ಹಳು ಎಂದು ಮಹತ್ವದ ತೀರ್ಪು ನೀಡಿದೆ. ಈ ಹಿಂದೆ ಶರಿಯತ್‌ ಕಾನೂನಿನ ಪ್ರಕಾರ ವಿಚ್ಛೇಧಿತ ಪತ್ನಿ ತನ್ನ ಪತಿಯಿಂದ ಜೀವನಾಂಶ ಪಡೆಯುವಂತಿರಲಿಲ್ಲ.

ಈ ಪ್ರಕರಣವು ತನ್ನ ಮಾಜಿ ಪತ್ನಿಗೆ 10,000 ರೂ. ಮಧ್ಯಂತರ ಜೀವನಾಂಶವನ್ನು ನೀಡುವಂತೆ ತೆಲಂಗಾಣ ಹೈಕೋರ್ಟ್‌ ನಿರ್ದೇಶನವನ್ನು ಪ್ರಶ್ನಿಸಿದ ವ್ಯಕ್ತಿಯೊಬ್ಬನ ಅರ್ಜಿಗೆ ಸಂಬಂಧಿಸಿದ ಪ್ರಕರಣವಾಗಿದೆ.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಅಗಸ್ಟಿನ್‌ ಜಾರ್ಜ್‌ ಮಸಿಹ್‌ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ವಿಚ್ಛೇದಿತ ಹೆಂಡತಿಗೆ ಸೆಕ್ಷನ್‌ 125ರ ಸಿಆರ್‌ಪಿಸಿ ಸೆಕ್ಷನ್‌ ಅಡಿ ಮಧ್ಯಂತರ ಜೀವನಾಂಶ ಪಡೆಯಲು ಅರ್ಹಳಾಗಿದ್ದಾಳೆ ಎಂದು ತೀರ್ಪು ನೀಡಿತು.

ಸೆಕ್ಷನ್‌ 125ರಡಿ ವಿಚ್ಛೇದನ ಪಡೆದ ಪತ್ನಿಗೆ ಸಿಆರ್‌ಪಿಸಿ ಸೆಕ್ಷನ್‌ 125ರಡಿ ಮಧ್ಯಂತರ ಜೀವನಾಂಶ ನೀಡಬೇಕೆಂಬ ಆದೇಶದ ವಿರುದ್ದ ಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿ ಮುಸ್ಲಿಂ ಮಹಿಳೆಯರ(ವಿಚ್ಛೇಧನದಲ್ಲಿ ಹಕ್ಕುಗಳ ರಕ್ಷಣೆ) ಕಾಯ್ದೆ 1986 ಜಾತ್ಯತೀತ ಕಾನೂನಿನ ಎದುರು ಸಮರ್ಥನೀಯವಲ್ಲ ಎಂದು ಸ್ಪಷ್ಪಪಡಿಸಿತು.

ಆದರೆ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳು ಪ್ರತ್ಯೇಕವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೂ ಒಮತದ ತೀರ್ಪು ನೀಡಿರುವುದು ಗಮನಾರ್ಹ.ಸಿಆರ್‌ಪಿಸಿ ಸೆಕ್ಷನ್‌ 125 ಕೇವಲ ವಿವಾದಿತ ಮಹಿಳೆಯರಿಗೆ ಮಾತ್ರವಲ್ಲದೆ ಎಲ್ಲಾ ಮಹಿಳೆಯರಿಗೂ ಅನ್ವಯವಾಗುತ್ತದೆ ಎಂಬ ನಿರ್ಣಯದೊಂದಿಗೆ ನಾವು ಮೇಲನವಿ ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ ಎಂದು ನ್ಯಾಯಮೂರ್ತಿ ಬಿ.ನಾಗರತ್ನ ಸ್ಪಷ್ಟಪಡಿಸಿದರು.

ಸೆಕ್ಷನ್‌ 125ರಡಿ ಸಲ್ಲಿಸಲಾದ ಅರ್ಜಿ ವಿಚಾರಣೆ ಬಾಕಿ ಇದ್ದಲ್ಲಿ ವಿಚ್ಛೇಧಿತ ಮುಸ್ಲಿಂ ಮಹಿಳೆಯರ(ವಿವಾಹದ ಹಕ್ಕುಗಳ ಸಂರಕ್ಷಣೆ) ಕಾಯ್ದೆ 2019ನ್ನು ಅವಲಂಬಿಸಬಹುದಾಗಿದೆ. ಇದರಲ್ಲಿ ದೊರಕುವ ಪರಿಹಾರವು ಸಿಆರ್‌ಪಿಸಿ ಸೆಕ್ಷನ್‌ 125ರಡಿ ಸಿಗುವ ಪರಿಹಾರಕ್ಕೆ ಹೆಚ್ಚುವರಿಯಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

2019ರ ಕಾಯ್ದೆಯು ಸೆಕ್ಷನ್‌ 125ರಡಿಯಲ್ಲಿ ಪರಿಹಾರವನ್ನು ಒದಗಿಸುತ್ತದೆ. ಕಾಯ್ದೆ 1986ರ ಜಾತ್ಯತೀತ ಕಾನೂನಿನ ಮೇಲೆ ಮೇಲುಗೈ ಸಾಧಿಸುವುದಿಲ್ಲ. ಹೀಗಾಗಿ ಈ ಮೇಲನವಿಯನ್ನು ವಜಾಗೊಳಿಸುತ್ತೇವೆ. ಪರಿಹಾರವನ್ನು ಕೇವಲ ಧರ್ಮದ ಆಧಾರದ ಮೇಲೆ ನೋಡುವುದು ಬೇಡ ಎಂದು ಅರ್ಜಿದಾರರಿಗೆ ಸೂಚನೆ ನೀಡಿತು.

1985ರಲ್ಲಿ ಶಾ ಬಾನೋ ಪ್ರಕರಣದ ಮಹತ್ವದ ತೀರ್ಪಿನಲ್ಲಿ, ಸೆಕ್ಷನ್‌ 125ರಡಿ ಮುಸ್ಲಿಂ ಮಹಿಳೆಯರಿಗೂ ಅನ್ವಯಿಸುವ ಜಾತ್ಯತೀತ ನಿಬಂಧನೆಯಾಗಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಆದಾಗ್ಯೂ, ಮುಸ್ಲಿಂ ಮಹಿಳೆಯರ (ವಿಚ್ಛೇದನದ ಮೇಲಿನ ಹಕ್ಕುಗಳ ರಕ್ಷಣೆ) ಕಾಯಿದೆ, 1986 ರ ಮೂಲಕ ಇದನ್ನು ರದ್ದುಗೊಳಿಸಲಾಯಿತು ಮತ್ತು ಕಾನೂನಿನ ಸಿಂಧುತ್ವವನ್ನು 2001ರಲ್ಲಿ ಎತ್ತಿಹಿಡಿಯಲಾಯಿತು.

ಇಂದಿನ ವಿಚಾರಣೆಯ ಸಂದರ್ಭದಲ್ಲಿ ಭಾರತೀಯ ವಿವಾಹಿತ ಪುರುಷನು ಆರ್ಥಿಕವಾಗಿ ಸ್ವತಂತ್ರಳಲ್ಲದ ತನ್ನ ಹೆಂಡತಿಗೆ ತಾನು ಲಭ್ಯವಿರಬೇಕು ಎಂಬ ಅಂಶದ ಬಗ್ಗೆ ಜಾಗೃತರಾಗಿರಬೇಕು ಎಂದು ಪೀಠ ಹೇಳಿದೆ. ಅಂತಹ ಪ್ರಯತ್ನಗಳನ್ನು ಸ್ವತಂತ್ರವಾಗಿ ಮಾಡುವ ಭಾರತೀಯ ವ್ಯಕ್ತಿಯನ್ನು ಒಪ್ಪಿಕೊಳ್ಳಬೇಕು ಎಂದು ಅದು ಹೇಳಿದೆ.

ಕೌಟುಂಬಿಕ ನ್ಯಾಯಾಲಯವು ಪುರುಷನಿಗೆ ತನ್ನ ಮಾಜಿ ಪತ್ನಿಗೆ ಮಾಸಿಕ 20,000 ರೂಪಾಯಿಗಳ ಮಧ್ಯಂತರ ನಿರ್ವಹಣೆಯನ್ನು ನೀಡುವಂತೆ ಸೂಚಿಸಿತು. 2017ರಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ದಂಪತಿಗಳು ವಿಚ್ಛೇದನ ಪಡೆದಿದ್ದಾರೆ ಎಂಬ ಆಧಾರದ ಮೇಲೆ ಇದನ್ನು ತೆಲಂಗಾಣ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು.
ಹೈಕೋರ್ಟ್‌ ಜೀವನಾಂಶವನ್ನು ತಿಂಗಳಿಗೆ 10,000 ರೂ.ಗೆ ಮಾರ್ಪಡಿಸಿತು ಮತ್ತು ಆರು ತಿಂಗಳೊಳಗೆ ಪ್ರಕರಣವನ್ನು ವಿಲೇವಾರಿ ಮಾಡುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತು.

ಪ್ರತಿವಾದಿ, ವ್ಯಕ್ತಿಯ ಮಾಜಿ ಪತ್ನಿ, ಸೆಕ್ಷನ್‌ 125ರಡಿ ಕ್ಲೈಮ್‌‍ಗಳನ್ನು ಸಲ್ಲಿಸುವ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಕುಂದುಕೊರತೆಗಳನ್ನು ಎತ್ತಿದರು.ಪ್ರಕರಣದಲ್ಲಿ ಮುಸ್ಲಿಂ ಪುರುಷನನ್ನು ಪ್ರತಿನಿಧಿಸುವ ವಕೀಲರು, ಮುಸ್ಲಿಂ ಮಹಿಳಾ ಕಾಯಿದೆ 1986ರ ಪ್ರಕಾರ, ವಿಚ್ಛೇದಿತ ಮಹಿಳೆಯು ಸೆಕ್ಷನ್‌ 125ರಡಿ ಪ್ರಯೋಜನವನ್ನು ಪಡೆಯಲು ಅರ್ಹರಲ್ಲ ಎಂದು ಸಲ್ಲಿಸಿದರು. 1986 ರ ಕಾಯಿದೆಯು ಮುಸ್ಲಿಂ ಮಹಿಳೆಯರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಮುಂದೆ ಸಲ್ಲಿಸಲಾಯಿತು.

RELATED ARTICLES

Latest News