ವಾಷಿಂಗ್ಟನ್, ಜು.10- ಬಾಹ್ಯಾಕಾಶದಲ್ಲಿ ಬಂಧಿಯಾಗಿರುವ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಇಂದು ರಾತ್ರಿ 11 ಗಂಟೆಗೆ ನೇರ ಪ್ರಸಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬಾಹ್ಯಾಕಾಶದಲ್ಲಿ 10 ದಿನಗಳನ್ನು ಕಳೆಯಲು ಹೋಗಿದ್ದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಹಾಗೂ ಆಕೆಯ ಸಹುದ್ಯೋಗಿ ಅಂತರಾಷ್ಟ್ರೀಯ ಬಾಹ್ಯಾಕಾಶದಲ್ಲೇ ತಾಂತ್ರಿಕ ದೋಷದಿಂದ ಬಂಧಿಯಾಗಿದ್ದಾರೆ.
ಸದ್ಯ ಅವರು ಸುರಕ್ಷಿತ ವಾಗಿದ್ದಾರೆ ಎಂದು ನಾಸಾ ಘೋಷಿಸಿದೆ. ಅಲ್ಲದೆ, ನಾಳೆ ರಾತ್ರಿ 8.30ಕ್ಕೆ (ಜು.10ರಂದು 11 ಗಂಟೆ ಅಮೇರಿಕಾ ಕಾಲಮಾನ) ಅಂತಾರಾಷ್ಟ್ರೀಯ ಬಾಹ್ಯಾ ಕಾಶ ನಿಲ್ದಾಣದಿಂದಲೇ ನೇರಪ್ರಸಾರದಲ್ಲಿ ಹಾಜರಾಗಲಿ ದ್ದಾರೆ ಎಂದು ಮಾಹಿತಿ ಹಂಚಿಕೊಂಡಿದೆ.
ಸುನೀತಾ ಹಾಗೂ ಇತರರು ಬಾಹ್ಯಾಕಾಶದಲ್ಲಿ ಸುರಕ್ಷಿತ ವಾಗಿರುವ ಫೋಟೋಗಳನ್ನು ನಾಸಾ ತನ್ನ ಎಕ್‌್ಸ ಖಾತೆಯಲ್ಲಿ ಹಂಚಿಕೊಂಡಿದೆ. ಹಾಗೂ ಸದ್ಯ ಅವರಿಗೆ ಬೇಕಾದ ಎಲ್ಲಾ ಸೌಕರ್ಯಗಳಿಗೆ ಏನೂ ತೊಂದರೆಯಿಲ್ಲ. ಶೀಘ್ರವೇ ಅವರನ್ನು ವಾಪಸ್ ಕರೆ ತರುವ ಪ್ರಯತ್ನ ಮುಂದುವರೆದಿದೆ ಎಂದು ನಾಸಾ ಬರೆದುಕೊಂಡಿದೆ.
ಸುನೀತಾ ಮತ್ತು ಅವರ ಸಹುದ್ಯೋಗಿ ಬುಚ್ ವಿಲೋರ್ ಅವರು ಜೂನ್ 5 ರಂದು ಬೋಯಿಂಗ್ ಸ್ಟಾರ್ಲೈನರ್ ನಲ್ಲಿ 10 ಬಾಹ್ಯಾಕಾಶ ಪ್ರಯಾಣ ಆರಂಭಿಸಿದರು. ಆದರೆ ಸ್ವಾರ್ಲೈನರ್ 28 ಟ್ರಸ್ಟರ್ ಗಳಲ್ಲಿ ಐದು ಹೀಲಿಯಂ ಸೋರಿಕೆಗಳು ಸೇರಿ ಕೆಲ ತಾಂತ್ರಿಕ ಸಮಸ್ಯೆ ಕಂಡುಬಂದಿತ್ತು. ಹೀಗಾಗಿ ಅಂದಿನಿಂದ ಅವರಿಬ್ಬರು ಬಾಹ್ಯಾಕಾಶದಲ್ಲಿ ಬಂಧಿಯಾಗಿದ್ದಾರೆ.