ತಿರುಚ್ಚಿ,ಅ.19- ತಮಿಳುನಾಡಿನ ತಿರುಚಿ ವಿಮಾನ ನಿಲ್ದಾಣದಲ್ಲಿರುವ ಏರ್ ಇಂಟೆಲಿಜೆನ್ಸ್ ಯುನಿಟ್ (ಎಐಯು) ಕೌಲಾಲಂಪುರದಿಂದ ಬಂದ ಪ್ರಯಾಣಿಕರೊಬ್ಬರು ಗುದನಾಳದಲ್ಲಿ ಇರಿಸಿಕೊಂಡಿದ್ದ 24 ಕ್ಯಾರಟ್‍ಗಳ ಶುದ್ಧತೆಯ ಚಿನ್ನದ ಬಾರ್ ಅನ್ನು ವಶಪಡಿಸಿಕೊಂಡಿದೆ.
ಪ್ರಯಾಣಿಕರು ಗುದನಾಳದಲ್ಲಿ ಬಚ್ಚಿಟ್ಟ ಕ್ಯಾಪ್ಸುಲ್‍ಗಳಲ್ಲಿ ಇರಿಸಲಾಗಿದ್ದ ಚಿನ್ನದ ಪೇಸ್ಟ್‍ನಿಂದ ಚಿನ್ನದ ಬಾರ್ ಅನ್ನು ಹೊರತೆಗೆಯಲಾಗಿದೆ. ವಶಪಡಿಸಿಕೊಂಡ 717 ಗ್ರಾಂ ತೂಕದ ಚಿನ್ನದ ಬೆಲೆ 42.91 ಲಕ್ಷ ರೂಪಾಯಿ ಎಂದು ಕಸ್ಟಮ್ಸ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಿಕೆಶಿಯವರ ಕಾರ್ಯಕ್ರಮಕ್ಕೆ ಸಚಿವರು ಗೈರಾಗಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಡಿ : ಶೆಟ್ಟರ್
ಈ ತಿಂಗಳ ಆರಂಭದಲ್ಲಿ, ತಿರುಚಿ ಏರ್‍ಪೆಫೋರ್ಟ್‍ನಲ್ಲಿ ಪುರುಷ ಪ್ರಯಾಣಿಕರ ಮಕ್ಕಳು ಧರಿಸಿದ್ದ ಶೂಗಳು ಮತ್ತು ಒಳ ಉಡುಪುಗಳಲ್ಲಿ ಬಚ್ಚಿಟ್ಟಿದ್ದ ಪೇಸ್ಟ್‍ನಂತಹ ವಸ್ತುಗಳಿಂದ ಒಂದು ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಚಿನ್ನದ ವಶಪಡಿಸಿಕೊಳ್ಳಲಾಗಿತ್ತು. ಪ್ರಯಾಣಿಕರು ಮಲೇಷ್ಯಾದ ಕೌಲಾಲಂಪುರದಿಂದ ಬಂದಿದ್ದರು.