Tuesday, November 26, 2024
Homeರಾಜ್ಯಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ

ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜು.13- ಎರಡನೇ ಬಾರಿ ಮುಖ್ಯಮಂತ್ರಿಗಳಾದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ಅವರ ಮೊದಲ ಕಾರ್ಯಕರ್ತರ ಅಹವಾಲು ಸ್ವೀಕಾರ ಅಭಿಯಾನ ಹುರುಪು-ನಿರೀಕ್ಷೆ-ಭರವಸೆಗಳೊಂದಿಗೆ ನಡೆಯಿತು. ಆರಂಭದಲ್ಲಿ ಮುಖ್ಯಮಂತ್ರಿಯವರು ಖುದ್ದು ವಿಕಲಚೇತನರ ಬಳಿಗೇ ಹೋಗಿ ಅಹವಾಲುಗಳನ್ನು ಸ್ವೀಕರಿಸಿದರು.

ತ್ರಿಚಕ್ರ ವಾಹನ, ಸರ್ಕಾರಿ ಉದ್ಯೋಗ, ನಿಗಮ ಮಂಡಳಿಯಲ್ಲಿ ಅವಕಾಶ, ಗುತ್ತಿಗೆ ನೌಕರಿ, ಸ್ವಂತ ಉದ್ಯೋಗಕ್ಕೆ ಅನುದಾನ, ಸಾಲದ ಸವಲತ್ತು ಸೇರಿ ನಾನಾ ಬೇಡಿಕೆಗಳನ್ನು ವಿಕಲಚೇತನ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿಗಳ ಮುಂದಿಟ್ಟರು. ಪ್ರತಿಯೊಬ್ಬ ಕಾರ್ಯಕರ್ತರ ಅಹವಾಲು ಮತ್ತು ಪಕ್ಷ ಸಂಘಟನೆಯಲ್ಲಿ ಅವರು ತೊಡಗಿಸಿಕೊಂಡಿರುವ ಬಗ್ಗೆ ವಿವರವಾಗಿ ಕೇಳಿ ತಿಳಿದುಕೊಂಡ ಮುಖ್ಯಮಂತ್ರಿಯವರು, ಅಹವಾಲುಗಳನ್ನು ಪಟ್ಟಿ ಮಾಡಿಕೊಂಡು ಸಂಬಂಧಪಟ್ಟ ಅ„ಕಾರಿಗಳ ಮೂಲಕ ಈಡೇರಿಸುವಂತೆ ತಮ್ಮ ಕಚೇರಿ ಸಿಬ್ಬಂದಿಗೆ ಸ್ಪಷ್ಟ ಸೂಚನೆ ನೀಡಿದರು. ತಕ್ಷಣ ಬಗೆಹರಿಸಬಹುದಾದ ಬೇಡಿಕೆಗಳಿಗೆ ಸಳದಲ್ಲೇ ಸ್ಪಂದಿಸಿದರು.

ರಾಜ್ಯದ ಹಲವೆಡೆಯಿಂದ ಕಾರ್ಯಕರ್ತರು ಆಗಮಿಸಿದ್ದರು. ಸುಮಾರು 712 ಜನ ಗೂಗಲ್ ಫಾರಂನಲ್ಲಿ ನೋಂದಣಿಯಾಗಿದ್ದು, ಒಟ್ಟು ನಾಲ್ಕು ಸಾವಿರ ಮಂದಿ ನೋಂದಣಿಯಾಗಿದೆ. ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಆಗಮಿಸಿದ ಸಾವಿರಕ್ಕೂ ಹೆಚ್ಚು ಜನರ ಹೆಸರು, ವಿಳಾಸ, ಪಕ್ಷದ ಸದಸ್ಯತ್ವ ಸಂಖ್ಯೆಯನ್ನು ಪರಿಶೀಲಿಸಿ, ಕೆಪಿಸಿಸಿ ಕಚೇರಿ ಸಿಬ್ಬಂದಿಗಳು ಪಡೆದುಕೊಂಡು ಅರ್ಜಿ ಸಂಖ್ಯೆ ನೀಡಿದರು. ಮಧ್ಯಹ್ನಾ 2 ಗಂಟೆಯ ಬಳಿಕ ಕಾರ್ಯಕ್ರಮಕ್ಕೆ ತೆರಳಬೇಕಿರುವುದರಿಂದ ಟೋಕನ್ ಸಂಖ್ಯೆ ಇಲ್ಲದವರ ಅರ್ಜಿಗಳನ್ನು ನೇರವಾಗಿ ಪಡೆದುಕೊಳ್ಳಲಾಯಿತು. ದೂರಗಳ ಸಂಖ್ಯೆ ಜಾಸ್ತಿ ಇದೆ. ಪ್ರತಿ ತಿಂಗಳು ಕನಿಷ್ಠ ಎರಡು ಬಾರಿ ಕಾರ್ಯಕರ್ತರ ಸ್ಪಂದನಾ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕೆಪಿಸಿಸಿ ಕಾರ್ಯಧ್ಯಕ್ಷ ಜಿ.ಸಿ.ಚಂದ್ರಶೇಖರ್ ಮನವಿ ಮಾಡಿದರು.

ಕಾರ್ಯಕರ್ತರ ಸ್ಪಂದನಾ ಕಾರ್ಯಕ್ರಮದ ಕೊನೆಯಲ್ಲಿ ಸಮಯದ ಕೊರತೆಯಿಂದ ಸಾಲಾಗಿ ನಿಂತಿದ್ದ ಕಾರ್ಯಕರ್ತರಿಂದ ಮುಖ್ಯಮಂತ್ರಿಯವರು ಖುದ್ದು ಅರ್ಜಿಗಳನ್ನು ಪಡೆದುಕೊಂಡು ಸ್ಪಂದಿಸುವುದಾಗಿ ಹೇಳಿ ಕಳುಹಿಸಿದರು.ವಿಕಲಚೇತನರ ಸಮಸ್ಯೆ ಆಲಿಕೆ ವೇಳೆ ಕಾರ್ಯಕರ್ತನೊಬ್ಬ ತಾನು ಹಾಸನದ ದುದ್ದ ಗ್ರಾಮದಿಂದ ಬಂದಿದ್ದೇನೆ. ಜೀವನಕ್ಕೆ ಅನುಕೂಲ ಮಾಡಿಕೊಡುವಂತೆ ಬೇಡಿಕೆ ಸಲ್ಲಿಸಿದರು. ಮೂರು ಚಕ್ರದ ವಾಹನ ನೀಡುವಂತೆ ಕೆಲವರು ಮನವಿ ಮಾಡಿದರು. ಮತ್ತೊಬ್ಬರಿಂದ ನಾಲ್ಕು ಚಕ್ರದ ವಾಹನಕ್ಕೆ ಬೇಡಿಕೆ ಕೇಳಿ ಬಂತು.

ಬಸವನಗುಡಿ ಕ್ಷೇತ್ರದ ಕಾರ್ಯಕರ್ತರೊಬ್ಬರು ಮಕ್ಕಳ ಶಾಲಾ ಶುಲ್ಕ ಪಾವತಿಸಲು ಸಮಸ್ಯೆ ಇದೆ, ಸಹಾಯ ಮಾಡಿ ಎಂದು ಮನವಿ ಮಾಡಿದರು. ಮಹಿಳೆಯೊಬ್ಬರು ಆರ್ಥಿಕ ಸಹಾಯಕ್ಕೆ ಮನವಿ ಮಾಡಿದರು. ನಿಗಮದಿಂದ ಸಹಾಯ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.

ಬೀದಿಬದಿ ವ್ಯಾಪಾರಿ ಘಟಕದ ಅಧ್ಯಕ್ಷರು, ನಿವೇಶನಕ್ಕೆ ಬೇಡಿಕೆ ಮಂಡಿಸಿದರು. ಅರ್ಜಿ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.ಮತ್ತೊಬ್ಬರು ಸೈಬರ್ ಸೆಂಟರ್ ಸ್ಥಾಪನೆಗೆ ಮನವಿ ಸಲ್ಲಿಸಿದರು. ಮಹಿಳೆಯೊಬ್ಬರು ತಾವು ಎಂಎ ಪದವಿ ಪಡೆದಿದ್ದು, ಕೆಲಸ ಕೊಡಿಸುವಂತೆ ಮನವಿ ಮಾಡಿದರು. ನಿಮಗೆ ಪಾಠ ಮಾಡೋಕೆ ಸಾಧ್ಯವೇ ಎಂದು ಮುಖ್ಯಮಂತ್ರಿ ಕೇಳಿದರು. ಮಹಿಳೆ ಸಾಧ್ಯವಿದೆ ಎಂದಾಗ ಅವಕಾಶ ಕೊಡಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.

ನಾನು 50 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ, ನಿಗಮ ಮಂಡಳಿಯಲ್ಲಿ ಅವಕಾಶ ಕೊಡಿಸಿ ಎಂದು ಕಾರ್ಯಕರ್ತರೊಬ್ಬರು ಬೇಡಿಕೆಯಿಟ್ಟರು. ಮಹಿಳೆಯೊಬ್ಬರು ಪಾತಿಮಾ -ಫೌಂಡೇಶನ್ ಆ್ಯಂಬುಲೆನ್ಸ್ ಕೊಡಿಸುವಂತೆ ಬೇಡಿಕೆಯಿಟ್ಟರು.

ಮತ್ತೊಬ್ಬ ಕಾರ್ಯಕರ್ತೆ ನಿಮ್ಮನ್ನ ನೋಡಿದರೆ ದೇವರನ್ನು ನೋಡಿದಂತಾಗುತ್ತದೆ ಎಂದು ಹೊಗಳಿದರು. ನನಗೆ ಪಕ್ಷದಲ್ಲಿ ಸ್ಥಾನಮಾನ ಕೊಡಿಸಿ, ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಮನವಿ ಸಲ್ಲಿಸಿದರು. ಪಕ್ಷದ ಪದಾ„ಕಾರಿಯನ್ನಾಗಿ ನಾಳೆಯೇ ನೇಮಕ ಮಾಡುವುದಾಗಿ ಕೆಪಿಸಿಸಿ ಕಾರ್ಯಧ್ಯಕ್ಷ ಜಿ.ಸಿ.ಚಂದ್ರಶೇಖರ್ ಭರವಸೆ ನೀಡಿದರು.

ನೆಲಮಂಗಲದ ಮಾರುತಿ ಎಂಬುವರು ಗುತ್ತಿಗೆ ನೌಕರಿ ಕೊಡಿಸುವಂತೆ, ಬ್ರೈನ್ ಸ್ಟ್ರೊಕ್ ಗೊಳಗಾದ ಕಾರ್ಯಕರ್ತ ತನಗೆ ಕೆಲಸ ಕೊಡಿಸಿ ಮನವಿ ಕೇಳಿ ಬಂತು. ನಿನಗೆ ಮಕ್ಕಳಿದ್ದಾರಾ, ಏನು ಓದುತ್ತಿದ್ದಾರೆ. ನಿಮ್ಮ ಹೆಂಡತಿಗೆ ಗೃಹ ಲಕ್ಷ್ಮಿ ಬರುತ್ತಿದ್ಯಾ ಎಂದು ಕೇಳಿ ವಿವರಣೆ ಪಡೆದುಕೊಂಡ ಮುಖ್ಯಮಂತ್ರಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.

ಪಹಣಿ ಹಾಗೂ ಭೂ ದಾಖಲೆ ಮಾಡಿಕೊಡುವಲ್ಲಿ ವಿಳಂಬವಾಗಿರುವ ಬಗ್ಗೆ ಹಾಸನ ಚನ್ನಪಟ್ಟಣ ತಾಲ್ಲೂಕು ಬಾಗೂರು ಹೋಬಳಿ ಮಾದಿಹಳ್ಳಿಯ ಕಾರ್ಯಕರ್ತರೊಬ್ಬರು ದೂರು ನೀಡಿದರು. ಈ ವೇಳೆ ಹಾಸನದ ಜಿಲ್ಲಾ„ಕಾರಿಗೆ ದೂರವಾಣಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಯವರು, ಯಾಕಪ್ಪ ಇಷ್ಟೊಂದು ವಿಳಂಬ ಮಾಡುತ್ತೀರಾ. ಇಂತದಕ್ಕೆಲ್ಲ ವಿಳಂಬ ಮಾಡ್ಬೇಡಿ. ನಮ್ಮ ಮೂವರು ಕಾರ್ಯಕರ್ತರು ಬರ್ತಾರೆ. ಕೂಡಲೇ ಕೆಲಸ ಮಾಡಿಕೊಡಿ ಎಂದು ಸಿಎಂ ಕಟ್ಟಪ್ಪಣೆ ಮಾಡಿದರು.

ಕಾಂಗ್ರೆಸ್ ಕಚೇರಿ ಬಳಿ ಪೌರಕಾರ್ಮಿಕರ ನಿಯೋಗವೊಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನೆಗೆ ಮನವಿ ನೀಡಿತ್ತು. ರಾಜೀವ್‍ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಕರೆ ಮಾಡಿದ ಮುಖ್ಯಮಂತ್ರಿಯವರು ಐದು ಮಂದಿ ಇದ್ದಾರೆ, ಅವರಿಗೆ ಮನೆ ಕೊಡಿಸಿ ಎಂದು ಸೂಚನೆ ನೀಡಿದರು.

ಶಿರಹಟ್ಟಿ ಬಸಪ್ಪ ಶಿವಪ್ಪ ಗಂಟಿ ಇವರಿಗೆ ಕೊಳವೆ ಮಂಜೂರು ಮಾಡಿಕೊಡಿ ಎಂದು ಸಂಬಂ„ಸಿದ ಅ„ಕಾರಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು.ಮಹಿಳೆಯೊಬ್ಬರು ಮನೆಗೆ ಬೇಡಿಕೆ ಇಟ್ಟಾಗ ಸ್ಪಂದಿಸುವುದಾಗಿ ಹೇಳಿದ ಮುಖ್ಯಮಂತ್ರಿಯವರು, ಗೃಹಲಕ್ಷ್ಮೀ, ಅನ್ನಭಾಗ್ಯದ ಹಣ ಬರುತ್ತಿದೆ. ಶಕ್ತಿ ಯೋಜನೆ ಬಗ್ಗೆ ಪುರುಷರು ಟೀಕೆ ಮಾಡುತ್ತಿದ್ಧಾರೆ. ಬಸ್ ಫ್ರೀ ಇರುವುದು ತಮಗೆ ಅನುಕೂಲವಾಗಿದೆ. ಅನ್ನ ಕೊಟ್ಟು ಅನ್ನರಾಮಯ್ಯ ಆಗಿರುವ ಸಿದ್ದರಾಮಯ್ಯ, ವಸತಿ ನೀಡಿ ವಸತಿ ರಾಮಯ್ಯ ಆಗಲಿ ಎಂದು ಹೇಳಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಅನಗತ್ಯ ತೊಂದರೆ ಕೊಡುತ್ತಿದ್ದಾರೆ. ಎತ್ತಂಗಡಿ ಮಾಡಿಸುತ್ತಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಬೀದಿ ವ್ಯಾಪಾರಿಗಳ ಕಾಂಗ್ರೆಸ್ ಘಟಕದ ಇಸ್ಮಾಯಿಲ್ ಅವರು ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಿದರು. ಇದಕ್ಕೆ ಗರಂ ಆದ ಸಿಎಂ ಸ್ಥಳದಿಂದಲೇ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಬೀದಿ ಬದಿ ವ್ಯಾಪಾರಿಗಳ ಜೊತೆ ಮಾನವೀಯವಾಗಿ ವರ್ತಿಸಬೇಕು. ಅವರಿಗೆ ಅನಗತ್ಯ ತೊಂದರೆ ಕೊಡಬಾರದು ಎನ್ನುವ ಸೂಚನೆ ನೀಡಿದರು.

ಸದ್ಯ ಕೆಎಂಎಫ್ ನಲ್ಲಿರುವ ಸಾಫ್ಟ್ ವೇರ್ ಹಾಲು ಉತ್ಪಾದಕರಿಗೆ ಅನುಕೂಲ ಆಗಿಲ್ಲದಿರುವುದರಿಂದ ಅನುಕೂಲವಾದ ಕನ್ನಡ ಸಾಫ್ಟ್ ವೇರ್ ಅಳವಡಿಸುವಂತೆ ಮೈಸೂರಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಮಹಾಮಂಡಳದ ಎಸ್.ಶಿವನಾಗಪ್ಪ ಅವರು ಮನವಿ ಸಲ್ಲಿಸಿದರು.

ಮುಖ್ಯಮಂತ್ರಿಗಳು ಸ್ಥಳದಲ್ಲೇ ಎಂಡಿ ಅವರಿಗೆ -ಫೋನ್ ಮೂಲಕ ಸಂಪರ್ಕಿಸಿ, ಹಾಲು ಉತ್ಪಾದಕರ ಸ್ನೇಹಿಯಾಗಿರುವ ಸಾಫ್ಟ್ ವೇರ್ ಅನ್ನು ಅಳವಡಿಸುವಂತೆ ಸೂಚನೆ ನೀಡಿದರು. ಕೆಪಿಸಿಸಿ ಕಾರ್ಯಧ್ಯಕ್ಷರಾದ ಜಿ.ಸಿ.ಚಂದ್ರಶೇಖರ್, ತನ್ವೀರ್ ಶೆಠ್, ವಸಂತ ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್, ಮುಖ್ಯಮಂತ್ರಿ ಕಾರ್ಯಕರ್ತರಿಗೆ ಹಸ್ತಲಾಘವ ನೀಡಿ ಅರ್ಜಿ ಸ್ವೀಕರಿಸಿ, ಗಂಭೀರ ಸಮಸ್ಯೆಗಳ ಬಗ್ಗೆ ತಾಳ್ಮೆಯಿಂದ ವಿವರಣೆ ಪಡೆದುಕೊಂಡರು.

RELATED ARTICLES

Latest News