ಬರ್ಲಿನ್, ಜುಲೈ 15– ರೊಮಾಂಚಕಾರಿಯಾಗಿದ್ದ ಯುರೋಪಿಯನ್ ಪುಟ್‌ಬಾಲ್ ಚಾಂಪಿಯನ್‌ಶಿಪ್ ಪೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಸ್ಪೇನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ದಾಖಲೆ ಎಂಬಂತೆ ನಾಲ್ಕನೆ ಭಾರಿಗೆ ಸ್ಪೇನ್ ತಂಡ ಯುರೋಪಿಯನ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಪ್ರೇಕ್ಷಕರಿಂದ ತುಂಬಿ ತಿಳುಕುತ್ತಿದ್ದ ಬರ್ಲಿನ್‌ನ ಒಲಿಂಪಿಯಾ ಸ್ಟೇಡಿಯನ್‌ನಲ್ಲಿ ನಡೆದ ಪೈನಲ್ ಪಂದ್ಯದಲ್ಲಿ ಎರಡು ತಂಡದಿಂದ ಅದ್ಬುತ ಪ್ರದರ್ಶನ ಕಂಡು ಬಂತು.ಪಂದ್ಯದ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಸ್ಪೇನ್ ಪಡೆಯು ಸತತ ದಾಳಿಯ ಮೂಲಕ ಇಂಗ್ಲೆಂಡ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದರು ಇದರಿಂದ ಮೊದಲ ಅರ್ಧದ ವೇಳೆಗೆ 0-0 ಗೋಲುಗಳಿಂದ ಸಮಬಲಗೊಂಡವು.
ದ್ವಿತೀಯಾರ್ಧದಲ್ಲಿ ಉಭಯ ತಂಡಗಳ ಮುನ್ಪೆಡೆ ಆಟಗಾರರು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ್ದರು. ಅದರಲ್ಲೂ ಉತ್ಸಾಹದಲ್ಲಿ ಕಾಣಿಸಿಕೊಂಡ ಸ್ಪೇನ್ ಪಡೆಯ ಫಾರ್ವಡ್ ಆಟಗಾರರಾದ ಅಲ್ವಾರೊ ಮೊರಾಟಾ, ಡ್ಯಾನಿ ಓಲೋ, ಫೆರಾನ್ ಟೊರೆಸ್ ಮತ್ತು ಲ್ಯಾಮಿನ್ ಯಮಲ್ ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದರು.
ನಂತರ 47ನೇ ನಿಮಿಷದಲ್ಲಿ ಸ್ಪೇನ್‌ನ ಯುವ ಆಟಗಾರ ನಿಕೋ ವಿಲಿಯಮ್ಸ್ ಇಂಗ್ಲೆಂಡ್ ಡಿಫೆಂಡರ್‌ಗಳನ್ನು ದಾಟಿ ಗೋಲು ಭಾರಿಸುವುದರ ಮೂಲಕ ಮುನ್ನಡೆ ತಂದುಕೊಟ್ಟರು ಈ ವೇಳೆ ಮೈದಾನದಲ್ಲಿ ಮಿಂಚು ಹರಿದಂತೆ ಬಾಸವಾಗಿ ಪ್ರೇಕ್ಷಕರು ನಿಬ್ಬೆರಗಾದರು.ಆದರೆ ಆದರೆ 73ನೇ ನಿಮಿಷದಲ್ಲಿ ಬೆಲ್ಲಿಂಗ್‌ಹ್ಯಾಮ್ ನೀಡಿದ ಉತ್ತಮ ಪಾಸ್ ಅನ್ನು ಗೋಲಾಗಿಸುವಲ್ಲಿ ಕೋಲ್ ಪಾಲರ್ ಕೊನೆಗೂ ಚೆಂಡನ್ನು ಬಲೆಯೊಳಗೆ ಹೊಡೆಯುವಲ್ಲಿ ಯಶಸ್ವಿಯಾದರು.
ಈ ಗೋಲಿನೊಂದಿಗೆ ಪಂದ್ಯವು 1-1 ಸಮಬಲದೊಂದಿಗೆ ಸಾಗಿತು. ಅಲ್ಲದೆ ಅಂತಿಮ ನಿಮಿಷಗಳ ವೇಳೆ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟಿತು. ಪಂದ್ಯ ಮುಗಿಯುವ 3 ನಿಮಿಷ ಇರುವಾಗ ಸ್ಪೇನ್‌ನ ಮೈಕೆಲ್ ಒಯಾರ್ಜಾಬಲ್ ಅವರ 87 ನೇ ನಿಮಿಷದ ಗೋಲು ಇಂಗ್ಲೆಂಡ್ ವಿರುದ್ಧ 2-1 ಅಂತರದ ಜಯ ಸಾಧಿಸಲು ನೆರವಾಯಿತು.
ಸ್ಪೇನ್ ತಂಡವು ಅಂತಿಮ ಕ್ಷಣದಲ್ಲಿ ರಕ್ಷಣಾತಕ ಆಟಕ್ಕೆ ಮುಂದಾದರು. ಆದರೆ ಪಂದ್ಯವನ್ನು ಡ್ರಾಗೊಳಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ ಇಂಗ್ಲೆಂಡ್‌ಗೆ ಹಲವು ಅವಕಾಶಗಳು ದೊರೆತರೂ ಚೆಂಡನ್ನು ಗೋಲು ಬಲೆಯೊಳಗೆ ತಲುಪಿಸುವಲ್ಲಿ ವಿಫಲರಾದರು.ಅದರಲ್ಲೂ ಎಕ್ಟ್ರಾ ಟೈಮ್‌ನ ಪಂದ್ಯದ 90ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿಸುವಲ್ಲಿ ಇಂಗ್ಲೆಂಡ್ ಆಟಗಾರರು ಸರ್ವ ಪ್ರಯತ್ನ ನಡೆಸಿದ್ದರು.
ಆದರೆ ಗೋಲು ಬಲೆಯ ಲೈನ್‌ನಲ್ಲಿ ನಿಂತು ಡ್ಯಾನಿ ಓಲೋ ಹೆಡ್ ಮಾಡುವ ಮೂಲಕ ಚೆಂಡನ್ನು ತಡೆದರು. ಈ ಅದ್ಭುತ ತಡೆ ಸ್ಪೇನ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿತು ಎಂದರೆ ತಪ್ಪಾಗಲಾರದರು.
ಅಂತಿಮ ಸೀಟಿಯ ನಂತರ ಸ್ಪೇನ್ ಆಟಗಾರರು ಸಂಭ್ರಮಿಸಿದರು. ಇಂಗ್ಲೆಂಡ್ ಮತ್ತೆ ಕೊನೆ ಕ್ಷಣದಲ್ಲಿ ಎಡವಿ ನಿರಾಸೆ ಅನುಭವಿಸಿತು . ಇಂಗ್ಲೆಂಡ್ ತಂಡವು ಈವರೆಗೆ ಯುರೋ ಕಪ್ ಗೆದ್ದಿಲ್ಲ. 2021ರ ಫೈನಲ್‌ನಲ್ಲಿ ಇಟಲಿ ವಿರುದ್ಧ 3-2 ಅಂತರದಿಂದ ಸೋತಿದ್ದ ಆಂಗ್ಲರು, ಈ ಬಾರಿ ಕೂಡ ಸೋಲೊಪ್ಪಿಕೊಂಡಿದ್ದಾರೆ. ಈ ಮೂಲಕ ಚೊಚ್ಚಲ ಬಾರಿ ಯುರೋ ಕಪ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿಕೊಂಡಿದ್ದಾರೆ.