Friday, November 22, 2024
Homeರಾಷ್ಟ್ರೀಯ | Nationalಜಗನ್ನಾಥನ ರಕ್ಷೆಯಿಂದ ಟ್ರಂಪ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ ; ರಾಧರಮ್‌ದಾಸ್‌‍

ಜಗನ್ನಾಥನ ರಕ್ಷೆಯಿಂದ ಟ್ರಂಪ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ ; ರಾಧರಮ್‌ದಾಸ್‌‍

ಕೊಲ್ಕತ್ತಾ,ಜು.15- ಭಗವಾನ್‌ ಜಗನ್ನಾಥನ ರಕ್ಷೆಯಿಂದ ಅಮೆರಿಕದ ಮಾಜಿ ಅಧ್ಯಕ್ಷ ಕೊಲೆ ಯತ್ನದಿಂದ ಪಾರಾಗಿದ್ದಾರೆ ಎಂದು ಇಸ್ಕಾನ್‌ ವಕ್ತಾರ ರಾಧರಮ್‌ದಾಸ್‌‍ ಅಭಿಪ್ರಾಯಪಟ್ಟಿದ್ದಾರೆ.

48 ವರ್ಷಗಳ ಹಿಂದೆ ನ್ಯೂಯಾರ್ಕ್‌ನಲ್ಲಿ ನಡೆದ ಮೊದಲ ರಥಯಾತ್ರೆಯಲ್ಲಿ ಡೊನಾಲ್ಡ್‌‍ ಟ್ರಂಪ್‌ ಭಾಗಿಯಾಗಿದ್ದರು ಹೀಗಾಗಿ ಜಗನ್ನಾಥನ ಕೃಪೆ ಅವರ ಮೇಲಿದ್ದರಿಂದಲೇ ಪೆನ್ಸಿಲ್ವೇನಿಯಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ನಡೆದ ಹತ್ಯಾ ಯತ್ನದಿಂದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌‍ ಟ್ರಂಪ್‌ ಪಾರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಹೌದು, ಖಚಿತವಾಗಿ ಇದು ದೈವಿಕ ಹಸ್ತಕ್ಷೇಪವಾಗಿದೆ. ಸರಿಯಾಗಿ 48 ವರ್ಷಗಳ ಹಿಂದೆ ಡೊನಾಲ್ಡ್‌‍ ಟ್ರಂಪ್‌ ಜಗನ್ನಾಥ ರಥಯಾತ್ರೆ ಉತ್ಸವವನ್ನು ಉಳಿಸಿದ್ದರು. ಇಂದು ಜಗತ್ತು ಮತ್ತೆ ಜಗನ್ನಾಥ ರಥಯಾತ್ರೆ ಉತ್ಸವವನ್ನು ಆಚರಿಸುತ್ತಿರುವಾಗ, ಟ್ರಂಪ್‌ ಮೇಲೆ ದಾಳಿ ನಡೆಸಲಾಯಿತು, ಮತ್ತು ಜಗನ್ನಾಥ್‌ ಅವರನ್ನು ರಕ್ಷಿಸುವ ಮೂಲಕ ಕಪೆಗೆ ಮರಳಿದರು ಎಂದು ಇಸ್ಕಾನ್‌ ಕೋಲ್ಕತ್ತಾದ ವಕ್ತಾರ ರಾಧರಮ್‌ ದಾಸ್‌‍ ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇಸ್ಕಾನ್‌ (ಇಂಟರ್ನ್ಯಾಷನಲ್‌ ಸೊಸೈಟಿ ಫಾರ್‌ ಕಷ್ಣ ಕಾನ್ಶಿಯಸ್ನೆಸ್‌‍) ಒಂದು ಆಧ್ಯಾತಿಕ ಚಳುವಳಿಯಾಗಿದ್ದು, ಇದನ್ನು ಸಾಮಾನ್ಯವಾಗಿ ಹರೇ ಕಷ್ಣ ಚಳುವಳಿ ಎಂದು ಕರೆಯಲಾಗುತ್ತದೆ.ಜುಲೈ 1976 ರಲ್ಲಿ, ಡೊನಾಲ್ಡ್‌‍ ಟ್ರಂಪ್‌ ಇಸ್ಕಾನ್‌ ಭಕ್ತರಿಗೆ ರಥಯಾತ್ರೆಯನ್ನು ಆಯೋಜಿಸಲು ಸಹಾಯ ಮಾಡಿದ್ದರು, ರಥಗಳ ನಿರ್ಮಾಣಕ್ಕಾಗಿ ತಮ ರೈಲು ಅಂಗಳವನ್ನು ಉಚಿತವಾಗಿ ಒದಗಿಸಿದರು. ಇಂದು ಜಗತ್ತು 9 ದಿನಗಳ ಜಗನ್ನಾಥ ರಥಯಾತ್ರೆ ಉತ್ಸವವನ್ನು ಆಚರಿಸುತ್ತಿರುವಾಗಲೇ ಅವರ ಮೇಲೆ ದಾಳಿ ನಡೆದಿರುವುದನ್ನು ಅವರು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ.

RELATED ARTICLES

Latest News