ಬೆಂಗಳೂರು,ಜು.15- ಕಾನೂನು ಸಂಕಷ್ಟದಿಂದ ಪಾರಾಗಲು ರಾಜ್ಯ ಸರ್ಕಾರ ತಮಿಳುನಾಡಿಗೆ ಪ್ರಸ್ತುತ ಬೇಡಿಕೆಗಿಂತ ಹೆಚ್ಚು ನೀರನ್ನು ಬಿಡುತ್ತಿದೆ. ನಮ್ಮಲ್ಲೇ ನೀರಿಲ್ಲ, ನೀರು ಬಿಡಲುಸಾಧ್ಯವೇ ಇಲ್ಲ ಎಂದು ಒಂದೆಡೆ ಸರ್ವಪಕ್ಷಗಳ ಸಭೆ ಕರೆದು ನಿರ್ಣಯ ಕೈಗೊಳ್ಳುವ ನಾಟಕ ಆಡುವುದರ ಜೊತೆಗೆ ನೀರನ್ನು ಸಹ ತಮಿಳುನಾಡಿಗೆ ಹರಿಯಬಿಡುತ್ತಿದೆ.
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಒಂದು ಟಿಎಂಸಿ ನೀರನ್ನು ಜುಲೈ 25ರವರೆಗೆ ಹರಿಸುವಂತೆ ಆದೇಶಿಸಿದೆ. ಒಂದು ಹೆಜ್ಜೆ ಮುಂದೆ ಹೋಗಿರುವ ರಾಜ್ಯ ಸರ್ಕಾರ, ಪ್ರತಿದಿನ 2 ಟಿಎಂಸಿ ನೀರನ್ನು ಹರಿಸುತ್ತಿದೆ.
ಕಾವೇರಿ ಜಲಾಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಜಲಾಶಯಗಳು ಭರ್ತಿಯಾಗುವ ಸಂಭವವಿದೆ. ಇನ್ನು ಮುಂದೆ ಮಳೆಯಾಗುವ ಸಾದ್ಯತೆ ಇದೆ. ಈಗಾಗಲೇ ನಾವು ತಮಿಳುನಾಡಿಗೆ ನಿಗದಿತ ಪ್ರಮಾಣದಲ್ಲಿ ನೀರು ಹರಿಸಬೇಕಿತ್ತು. ಈಗ ಮಳೆಯಾಗುತ್ತಿದ್ದು, ನೀರು ಬಿಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂಬುದನ್ನು ಅರಿತು ಪ್ರತಿದಿನ 25 ಸಾವರ ಕ್ಯೂಸೆಕ್ಸ್ ಸ ನೀರನ್ನು ಹರಿಯಬಿಡುತ್ತಿದೆ.
ಕಾವೇರಿ ಜಲಾಯನ ಪ್ರದೇಶದ ಕಬಿನಿ ಭರ್ತಿಯಾಗಿದೆ. ಹಾರಂಗಿಗೆ ಒಳ ಹರಿವನ ಪ್ರಮಾಣ ಹೆಚ್ಛಾಗಿದೆ. ಅದೇ ರೀತಿ ಹೇಮಾವತಿ, ಕೆಆರ್ಎಸ್ ಜಲಾಶಯಗಳಿಗೂ ನೀರು ಹೆಚ್ಚಾಗಿ ಹರಿದುಬರುತ್ತಿದೆ. ಮಳೆಯೂ ಕೂಡ ಜಲಾನಯನ ಪ್ರದೇಶದಲ್ಲಿ ಬಿಡುತ್ತಿದೆ. ಹೀಗಾಗಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ.
ಕಾನೂನು ಸಂಕಷ್ಟದಿಂದ ಪಾರಾಗಲು ಮತ್ತು ಜೂನ್, ಜುಲೈ ತಿಂಗಳಿಲ್ಲಿ ಹರಿಸಬೇಕಾದ ನೀರನ್ನು ಸಾಧ್ಯವಾದಷ್ಟು ಮಟ್ಟಿಗೆ ಪ್ರಯತ್ನ ಮಾಡಲಾಗುತ್ತಿದೆ. ಒಂದೆಡೆ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ. ನಮ್ಮಗೆ ನೀರು ಸಾಕಾಗುವುದಿಲ್ಲ ಎಂದು ಎಲ್ಲ ಹೇಳುತ್ತೇಲೇ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ.