ಜಮ್ಮು , ಜು.16-ಕಳೆದ ರಾತ್ರಿ ಕಾಶ್ಮೀರದ ದೋಡಾ ಜಿಲ್ಲೆಯ ದೇಸಾ ಅರಣ್ಯ ಪ್ರದೇಶದ ಧರಿ ಗೋಟೆ ಉರರಬಾಗಿಯಲ್ಲಿ ರಾತ್ರಿ ಉಗ್ರರು ಹಾಗೂ ಸೇನಾಪಡೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಸೇನಾಧಿಕಾರಿ, ಮೂವರು ಯೋಧರು ಹುತಾತರಾಗಿದ್ದಾರೆ. ಐವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಷ್ಟ್ರೀಯ ರೈಫಲ್ಸ್ ಪಡೆ ಮತ್ತು ಜಮು ಮತ್ತು ಕಾಶೀರ ಪೊಲೀಸರ ವಿಶೇಷ ತಂಡ ಕಾರ್ಯಾಚರಣೆ ವೇಳೆ ಉಗ್ರರು ದಾಳಿ ನಡೆಸಿದ್ದಾರೆ. 7.45 ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ 20 ನಿಮಿಷಕ್ಕೂ ಹೆಚ್ಚು ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಬಬ್ಬರು ಸೇನಾ ಅಧಿಕಾರಿ ಸೇರಿದಂತೆ ನಾಲ್ವರು ಯೋಧರು ಹಾಗೂ ಒಬ್ಬ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆದರೆ ನಾಲ್ವರು ಹುತಾತರಾಗಿದ್ದಾರೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಯೋಧರ ಪಡೆ ಕಳುಹಿಸಲಾಗಿದೆ. ಭಯೋತ್ಪಾದಕರು ಆಡಗಿರುವ ಬಗ್ಗೆ ಮಾಹಿತಿಯ ನಂತರ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ರಿಯಾಸಿ ಜಿಲ್ಲೆಯ ಭಯೋತ್ಪಾದಕರ ಅಡಗುತಾಣದಿಂದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
30 ಸುತ್ತುಗಳ ಎಕೆ-47, ಎಕೆ-47 ರೈಫಲ್‌ನ ಒಂದು ವ್ಯಾಗಜೀನ್ ಮತ್ತು ಒಂದು ಎಚ್‌ಇ-36 ಹ್ಯಾಂಡ್ ಗ್ರೆನೇಡ್ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 35 ದಿನಗಳಲ್ಲಿ ದೋಡಾ ಪ್ರದೇಶದಲ್ಲಿ ಇದು ನಾಲ್ಕನೇ ಎನ್‌ಕೌಂಟರ್ ಆಗಿದೆ.ಘಟನೆಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ