ಹವಾನಾ, ಜ.5- ವೆನೆಜುವೆಲಾದಲ್ಲಿ ನಡೆದ ಅಮೆರಿಕದ ಸೇನಾ ದಾಳಿಯಲ್ಲಿ ನಮ 32 ಕ್ಯೂಬನ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಕ್ಯೂಬನ್ ಸರ್ಕಾರ ಹೇಳಿದೆ. ವೆನೆಜುವೆಲಾ ಸರ್ಕಾರದ ಕೋರಿಕೆಯ ಮೇರೆಗೆ ಕೆರಿಬಿಯನ್ ದೇಶದ ಮಿಲಿಟರಿ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಕ್ಯೂಬನ್ ಮಿಲಿಟರಿ ಮತ್ತು ಪೊಲೀಸ್ ಅಧಿಕಾರಿಗಳು ಇದ್ದರು ಎಂದು ಮಾಧ್ಯಮ ವರದಿ ಮಾಡಿದೆ.
ದಕ್ಷಿಣ ಅಮೆರಿಕಾದ ರಾಷ್ಟ್ರದಲ್ಲಿ ಕ್ಯೂಬನ್ನರು ಏನು ಕೆಲಸ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ, ಆದರೆ ಕ್ಯೂಬಾ ವೆನೆಜುವೆಲಾ ಸರ್ಕಾರದ ನಿಕಟ ಮಿತ್ರ ರಾಷ್ಟ್ರವಾಗಿದೆ ಮತ್ತು ವರ್ಷಗಳಿಂದ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಲು ಮಿಲಿಟರಿ ಮತ್ತು ಪೊಲೀಸ್ ಪಡೆಗಳನ್ನು ಕಳುಹಿಸಲಾಗಿತ್ತು.
ನಿನ್ನೆ ಬಹಳಷ್ಟು ಕ್ಯೂಬನ್ನರು ಕೊಲ್ಲಲ್ಪಟ್ಟದ್ದಾರೆ ಅದು ನಿಮಗೆ ತಿಳಿದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್ ಕಳೆದ ರಾತ್ರಿ ಫ್ಲೋರಿಡಾದಿಂದ ವಾಷಿಂಗ್ಟನ್‌ಗೆ ಹಿಂತಿರುಗುವಾಗ ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಇನ್ನೊಂದು ಕಡೆ ಬಹಳಷ್ಟು ಸಾವು ಸಂಭವಿಸಿದೆ. ನಮ ಕಡೆ ಯಾವುದೇ ಸಾವು ಸಂಭವಿಸಿಲ್ಲ ಎಂದಿದ್ದಾರೆ.
ಶನಿವಾರ ನಡೆದ ಅಮೆರಿಕದ ಕಾರ್ಯಾಚರಣೆಯಲ್ಲಿ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನುಸೆರೆಹಿಡಿದುನ್ಯೂಯಾರ್ಕಗೆ ಕರೆತಂದು ನ್ಯಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಅಮೆರಿಕದ ಸ್ಫೋಟಗಳಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ ಎಂದು ವೆನೆಜುವೆಲಾ ಸರ್ಕಾರ ಒಪ್ಪಿಕೊಂಡಿದ್ದರೂ, ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬುದನ್ನು ಅವರು ಅಸೋಸಿಯೇಟೆಡ್ ಪ್ರೆಸ್‌ಗೆ ದೃಢಪಡಿಸಲಿಲ್ಲ.
ಕ್ಯೂಬಾ ಸರ್ಕಾರ ಎರಡು ದಿನಗಳ ಶೋಕಾಚರಣೆಯನ್ನು ಘೋಷಿಸಿತು ಮತ್ತು ಮಾಜಿ ಅಧ್ಯಕ್ಷ ಮತ್ತು ಕ್ರಾಂತಿಕಾರಿ ನಾಯಕ ರೌಲ್ ಕ್ಯಾಸ್ಟ್ರೋ ಮತ್ತು ಅಧ್ಯಕ್ಷ ಮಿಗುಯೆಲ್ ಡಿಯಾಜ್-ಕ್ಯಾನೆಲ್ ಅವರ ಕುಟುಂಬಗಳಿಗೆ ಸಂತಾಪ ಸೂಚಿಸಿದರು. ಸತ್ತವರ ಹೆಸರುಗಳು ಮತ್ತು ಅವರು ಹೊಂದಿದ್ದ ಸ್ಥಾನಗಳನ್ನು ಕ್ಯೂಬನ್ ಅಧಿಕಾರಿಗಳು ತಕ್ಷಣ ಬಹಿರಂಗಪಡಿಸಲಿಲ್ಲ.
