Saturday, November 23, 2024
Homeರಾಜ್ಯವಿದೇಶದಲ್ಲಿ ಕೆಲಸಕ್ಕೆ ಹೋಗುವ ಮುನ್ನ ಏಜೆಂಟ್‌ಗಳ ನೈಜತೆ ಪರಿಶೀಲಿಸಿ : ಆರತಿ ಕೃಷ್ಣ

ವಿದೇಶದಲ್ಲಿ ಕೆಲಸಕ್ಕೆ ಹೋಗುವ ಮುನ್ನ ಏಜೆಂಟ್‌ಗಳ ನೈಜತೆ ಪರಿಶೀಲಿಸಿ : ಆರತಿ ಕೃಷ್ಣ

ಬೆಂಗಳೂರು, ಜು.17- ಹೊರ ದೇಶಗಳಲ್ಲಿ ಕೆಲಸಕ್ಕಾಗಿ ತೆರಳುವ ಮುನ್ನ ಏಜೆಂಟ್‌ಗಳ ನೈಜತೆ ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ ಅವರು ಸಲಹೆ ಮಾಡಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಧಿಕೃತವಲ್ಲದ ಏಜೆಂಟ್‌ಗಳ ಮಾತಿಗೆ ಮರುಳಾಗಿ ಮೋಸ ಹೋಗಬಾರದು. ಅಧಿಕೃತ ಏಜೆಂಟ್‌ಗಳ ಇಲ್ಲವೇ ಸಂಬಂಧಿಸಿದ ಸರ್ಕಾರದ ಇಲಾಖೆಗಳ ಸಹಾಯ ಪಡೆಯುವಂತೆ ತಿಳಿಸಿದ್ದಾರೆ.

ರಾಮನಗರದ ನಿವಾಸಿ ಮೊಹಮದ್‌ ಅಶ್ಪಾಕ್‌ ಎಂಬುವರು ಸೌದಿ ಅರೇಬಿಯಾಕ್ಕೆ ಉದ್ಯೋಗಕ್ಕೆ ತೆರಳಿದ್ದು, ಅಲ್ಲಿ ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಅಶ್ಪಾಕ್‌ ಕುಟುಂಬದ ಮನವಿ ಮೇರೆಗೆ ನಮ ಸಮಿತಿಯು ಸೌದಿ ಅರೇಬಿಯದ ಭಾರತೀಯ ರಾಯಭಾರಿ ಕಚೇರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿತು. ಬಳಿಕ ಜೆದ್ದಾ ಕಾನ್ಸುಲ್‌ ಜನರಲ್‌ರನ್ನು ಸಂಪರ್ಕಿಸಿ ತ್ವರಿತವಾಗಿ ಎಕ್ಸಿಟ್‌ ಪಾಸ್‌‍ ದೊರೆಯುವಂತೆ ಮಾಡಲಾಯಿತು ಎಂದು ಅವರು ಹೇಳಿದ್ದಾರೆ.

ಕೆ.ಎನ್‌.ಆರ್‌.ಐ.ಜೆಡ್ಡಾ ಕನ್ನಡ ಸಂಘವು ವಿಮಾನ ಟಿಕೆಟ್‌ ಮತ್ತು ಭಾರತಕ್ಕೆ ವಾಪಸ್ಸಾಗುವರೆಗೂ ಆದ ವೆಚ್ಚದ ನೆರವು ನೀಡಿದೆ. ಅನಿವಾಸಿ ಭಾರತಿಯ ಸಮಿತಿಯ ಸಕಾಲಿಕ ಪ್ರಯತ್ನದಿಂದ ಅಶ್ಪಾಕ್‌ ತಾಯ್ನಾಡಿಗೆ ಮರಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.

RELATED ARTICLES

Latest News