Friday, April 4, 2025
Homeರಾಷ್ಟ್ರೀಯ | Nationalಗೆಳತಿಗಾಗಿ ತನ್ನ ಹೆಂಡತಿ ಮತ್ತು ಇಬ್ಬರ ಮಕ್ಕಳ ಕೊಂದ ಫಿಸಿಯೋಥೆರಪಿಸ್ಟ್‌

ಗೆಳತಿಗಾಗಿ ತನ್ನ ಹೆಂಡತಿ ಮತ್ತು ಇಬ್ಬರ ಮಕ್ಕಳ ಕೊಂದ ಫಿಸಿಯೋಥೆರಪಿಸ್ಟ್‌

ಹೈದರಾಬಾದ್‌,ಜು.17- ಫಿಸಿಯೋಥೆರಪಿಸ್ಟ್‌ನೊಬ್ಬ ಗೆಳತಿಗಾಗಿ ತನ್ನ ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಅರವಳಿಕೆ ಚುಚ್ಚುಮದ್ದು ನೀಡಿ ಕೊಲೆ ಮಾಡಿ, ಕಾರು ಅಪಘಾತವೆಂದು ಬಿಂಬಿಸಿರುವ ಆಘಾತಕಾರಿ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಬೋಡಾ ಪ್ರವೀಣ್‌(32) ಕೊಲೆ ಆರೋಪಿ. ಪ್ರವೀಣ್‌ ತನ್ನ ಪತ್ನಿ ಕುಮಾರಿ (29) ಮತ್ತು ಪುತ್ರಿಯರಾದ ಕೃಷಿಕಾ (5) ಮತ್ತು ಕೃತಿಕಾ (3) ಅವರನ್ನು ತನ್ನ ಗೆಳತಿಯ ಬೇಡಿಕೆಯ ಮೇರೆಗೆ ಕೊಲೆ ಮಾಡಿದ್ದಾನೆ. ಮೇ 28ರಂದು ತನ್ನ ಗೆಳತಿ ಸೋನಿ ಫ್ರಾನ್ಸಿಸ್‌‍ಳಿಗಾಗಿ ಕಾರಿನಲ್ಲಿ ಹೆಂಡತಿಗೆ ಚುಚ್ಚುಮದ್ದು ನೀಡಿ, ಕಾರಿನ ಮುಂಭಾಗದ ಸೀಟಿನಲ್ಲೇ ತನ್ನ ಇಬ್ಬರು ಪುತ್ರಿಯರನ್ನು ಮೂಗು ಬಾಯಿ ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಘಟನೆಯ ನಂತರ ದಿನಂಪ್ರತಿ ತನ್ನ ಗೆಳತಿಯೊಂದಿಗೆ ಸಾಮಾನ್ಯ ಜೀವನ ನಡೆಸಿದ್ದಾನೆ. ಘಟನೆ ನಡೆದು 48 ದಿನಗಳ ಬಳಿಕ ಪೊಲೀಸರು ಪ್ರವೀಣ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕುಮಾರಿ ದೇಹದ ಮೇಲೆ ಸೂಜಿಯ ಗುರುತುಗಳನ್ನು ನೋಡಿ ನಾವು ಅನುಮಾನಿಸಿದ್ದೇವೆ. ಕುಮಾರಿ ಮತ್ತು ಮಕ್ಕಳ ದೇಹದಲ್ಲಿ ಬೇರೆ ಯಾವುದೇ ಗಾಯಗಳು ಕಂಡುಬಂದಿಲ್ಲ. ಇಡೀ ಕಾರನ್ನು ಪರಿಶೀಲಿಸಿದಾಗ ಅದರಲ್ಲಿ ಖಾಲಿ ಸಿರಿಂಜ್‌ಗಳು ಕಂಡುಬಂದಿವೆ.ಹೆಚ್ಚಿನ ತನಿಖೆಗಾಗಿ ಸಿರಿಂಜ್‌ನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್‌‍ ಅಧಿಕಾರಿಗಳು ತಿಳಿಸಿದ್ದಾರೆ.

ಏತನಧ್ಯೆ, ಪ್ರವೀಣ್‌ ಸಾಮಾನ್ಯ ಜೀವನವನ್ನು ಮುಂದುವರೆಸಿದರು, ಹೈದರಾಬಾದ್‌ನ ಅತ್ತಾಪುರ ಪ್ರದೇಶದ ಜರ್ಮಂಟೆನ್‌ ಆಸ್ಪತ್ರೆಯಲ್ಲಿ ಭೌತಚಿಕಿತ್ಸಕರಾಗಿ ಕೆಲಸ ಮಾಡಿದರು.ಘಟನೆಯ ನಂತರ ಪ್ರವೀಣ್‌ ಅದೇ ಆಸ್ಪತ್ರೆಯಲ್ಲಿ ನರ್ಸ್‌ ಆಗಿರುವ ತನ್ನ ಗೆಳತಿ ಸೋನಿ ಫ್ರಾನ್ಸಿಸ್‌‍ ಅವರೊಂದಿಗೆ ಪ್ರತ್ಯೇಕ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ ಮತ್ತು ತನ್ನ ಕುಟುಂಬವನ್ನು ಕೊಲೆ ಮಾಡಿರುವುದಕ್ಕೆ ಆತನಿಗೆ ಯಾವುದೇ ಪಶ್ಚಾತ್ತಾಪವಿರಲಿಲ್ಲ ನೆರೆಹೊರೆಯವರು ತಿಳಿಸಿದ್ದಾರೆ.

RELATED ARTICLES

Latest News