ಬೆಂಗಳೂರು,ಜು.18– ವೈದ್ಯಕೀಯ ಕೋರ್ಸ್‌ಗಳಿಗೆ ನಡೆಯುವ ನೀಟ್-ಪಿಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿರುವ ವೇಳೆ ರಾಜ್ಯಸರ್ಕಾರ ಕನಿಷ್ಟ ಒಂದು ತಿಂಗಳು ಮುಂದೂಡಬೇಕೆಂದು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಸರ್ಕಾರಕ್ಕೆ ಮನವಿ ಮಾಡಿದರು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ನೀಟ್ ಪರೀಕ್ಷೆಯಲ್ಲಿ ಈ ಬಾರಿ ಭಾರಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದರಲ್ಲಿ ಅನೇಕರು ಶಾಮೀಲಾಗಿರುವುದರಿಂದ ಪರೀಕ್ಷೆಯನ್ನು ಮುಂದೂಡಲಾಗಿದೆ. ಹೀಗಾಗಿ ರಾಜ್ಯಸರ್ಕಾರ ಕನಿಷ್ಟ ಪಕ್ಷ ಒಂದು ತಿಂಗಳು ರಾಜ್ಯದಲ್ಲಿ ಮುಂದೂಡಲಿ ಎಂದು ಮನವಿ ಮಾಡಿದರು.
ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದಿಂದಾಗಿ ಗ್ರಾಮೀಣ ಸೇವೆಯಲ್ಲಿರುವ ವೈದ್ಯರು ಕಂಗಾಲಾಗಿದ್ದಾರೆ. ಅವರು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀಟ್-ಪಿಜಿ ಪರೀಕ್ಷೆಗಳನ್ನು ಆಗಸ್ಟ್ 11 ಕ್ಕೆ ಮುಂದೂಡಲಾಗಿದೆ. ಹಾಗಾಗಿ ಕನಿಷ್ಟ ಪಕ್ಷ ಗ್ರಾಮೀಣ ವೈದ್ಯರಿಗೆ 30 ದಿನಗಳ ರಜೆ ನೀಡಲಿ ಎಂದು ಮನವಿ ಮಾಡಿದರು.