Monday, November 25, 2024
Homeರಾಜಕೀಯ | Politicsಬಿಜೆಪಿ ಆಡಳಿತ ಅವಧಿಯ ಹಗರಣ ಬಯಲಿಗೆಳೆಯುವೆ : ಡಿಕೆಶಿ

ಬಿಜೆಪಿ ಆಡಳಿತ ಅವಧಿಯ ಹಗರಣ ಬಯಲಿಗೆಳೆಯುವೆ : ಡಿಕೆಶಿ

ಬೆಂಗಳೂರು,ಜು.19- ಬಿಜೆಪಿ ಆಡಳಿತದ ಅವಧಿಯಲ್ಲಿ ವಿವಿಧ ನಿಗಮಗಳಲ್ಲಿ ನಡೆದಿರುವ 300 ಕೋಟಿ ರೂ.ಗಳ ಬೃಹತ್ ಹಗರಣವನ್ನು ಸದನದಲ್ಲಿ ಬಹಿರಂಗ ಪಡಿಸುವುದಾಗಿ ಉಪ ಮುಖ್ಯಮಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಅಧಿಕಾರಾವಯಲ್ಲಿ 300 ಕೋಟಿ ರೂ. ಗಳಿಗೂ ಹೆಚ್ಚು ಹಣದ ಅವ್ಯವಹಾರವಾಗಿದೆ. ಯಾವ್ಯಾವ ನಿಗಮಗಳಲ್ಲಿ ಅಕ್ರಮವಾಗಿದೆ, ಯಾರ್ಯಾರು ಅಧ್ಯಕ್ಷರಾಗಿದ್ದರು, ಯಾರು ಆ ಅವಯಲ್ಲಿ ಮುಖ್ಯಮಂತ್ರಿಗಳಾಗಿದ್ದರು ಎಂಬ ಎಲ್ಲಾ ವಿವರಗಳನ್ನು ಸದನದಲ್ಲಿ ಬಹಿರಂಗಪಡಿಸುವುದಾಗಿ ಅವರು ಹೇಳಿದರು.

ಈಗಾಗಲೇ ಕೆಲವು ನಿಗಮಗಳ ಭ್ರಷ್ಟಾಚಾರದ ತನಿಖೆ ನಡೆಯುತ್ತಿದೆ. ಇನ್ನೂ ಕೆಲವು ನಿಗಮಗಳ ಅವ್ಯವಹಾರದ ತನಿಖೆ ಮುಂದುವರಿದಿದೆ ಎಂದು ಹೇಳಿದರು.ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮದ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ಅದರ ಬಗ್ಗೆ ಚರ್ಚೆ ಮಾಡುವುದು ಅನವಶ್ಯಕ ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಅದಕ್ಕಾಗಿ ಚರ್ಚೆಗೆ ಅವಕಾಶ ಕೊಟ್ಟಿದ್ದೇವೆ.

ಪ್ರಕರಣದ ಬಗ್ಗೆ ತನಿಖೆಗಾಗಿ ಎಸ್ಐಟಿ ರಚನೆ ಮಾಡಿದ್ದೇವೆ. 89 ಕೋಟಿ ಅಕ್ರಮ ಹಣ ವರ್ಗಾವಣೆಯಲ್ಲಿ ಈಗಾಗಲೇ 34 ಕೋಟಿ ರೂ.ಗಳನ್ನು ವಸೂಲು ಮಾಡಲಾಗಿದೆ. ವ್ಯಾಪಕ ತನಿಖೆ ನಡೆಯುತ್ತಿದೆ. ಪ್ರತಿಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ರಾಜಿನಾಮೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಬ್ಯಾಂಕ್ನಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ರಾಜೀನಾಮೆ ನೀಡಬೇಕಲ್ಲವೇ ಎಂದು ಅವರು ತಿರುಗೇಟು ನೀಡಿದರು.

ಬೋವಿ ನಿಗಮದಲ್ಲಿ 87 ಕೋಟಿ, ಎಪಿಎಂಸಿಯಲ್ಲಿ 47 ಕೋಟಿ, ಕರಕುಶಲ ಅಭಿವೃದ್ಧಿ ನಿಗಮದಲ್ಲಿ 27 ಕೋಟಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ 5 ಕೋಟಿ, ದೇವರಾಜು ಅರಸ್ ಟ್ರಕ್ ಟರ್ಮಿನಲ್ ನಿಗಮದಲ್ಲಿ 47 ಕೋಟಿ, ಪರಿಸರ ಮಾಲಿನ್ಯ ಮಂಡಳಿಯಲ್ಲಿ 10 ಕೋಟಿ, ಕೆಐಎಡಿಬಿಯಿಂದ ಸೇಲಂಗೆ ವರ್ಗಾವಣೆಯಾಗಿರುವ ಹಣ ಸೇರಿದಂತೆ 300 ಕೋಟಿ ರೂ.ಗಳ ಭಾರೀ ಪ್ರಮಾಣದ ಅಕ್ರಮ ಹಣ ವರ್ಗಾವಣೆ ಬಗ್ಗೆ ಸದನದಲ್ಲಿ ಚರ್ಚಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾಗಿ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಅಕಾರದಲ್ಲಿದ್ದರು. ಅವರೇ ಕಿಂಗ್ಸ್ ಆಫ್ ಕರಪ್ಷನ್ ಎಂದು ಡಿಕೆಶಿ ಹೇಳಿದರು.

ಈ ಹಿಂದೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಹುದ್ದೆಗೆ 2.5 ಸಾವಿರ ಕೋಟಿ ರೂ. ನೀಡಬೇಕು. ಮಂತ್ರಿಗಳಾಗಲು 100 ಕೋಟಿ ರೂ. ಕೊಡಬೇಕು ಎಂದು ಹೇಳಿದ್ದರು. ಈ ಯಾವುದರ ಬಗ್ಗೆಯೂ ಯಾವ ಸಮಿತಿಯೂ ತನಿಖೆ ನಡೆಸಲಿಲ್ಲ ಎಂದರು.

ಕ್ಲಬ್ಗಳಲ್ಲಿ ಡ್ರೆಸ್ಕೋಡ್ ಇರುತ್ತದೆ. ಆದರೆ, ಮಾಲ್ಗಳಲ್ಲಿ ಯಾವುದೇ ಡ್ರೆಸ್ ಕೋಡ್ ಇರುವುದಿಲ್ಲ. ಪಂಚೆ ಧರಿಸಿ ಮಾಲ್ಗಳಿಗೆ ಹೋಗುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಅಡ್ಡಿಪಡಿಸುವ ಮಾಲ್ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

RELATED ARTICLES

Latest News