Monday, November 25, 2024
Homeರಾಜ್ಯವಿಪಕ್ಷಗಳ ಧರಣಿ, ವಿಧಾನಸಭೆಯಲ್ಲಿ ಕೋಲಾಹಲ

ವಿಪಕ್ಷಗಳ ಧರಣಿ, ವಿಧಾನಸಭೆಯಲ್ಲಿ ಕೋಲಾಹಲ

ಬೆಂಗಳೂರು, ಜು.19– ವಾಲೀಕಿ ಅಭಿವದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಂಜಸ ಉತ್ತರ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರತಿಪಕ್ಷಗಳು ನಿನ್ನೆ ಆರಂಭಿಸಿದ ಧರಣಿಯನ್ನು ವಿಧಾನಸಭೆಯಲ್ಲಿ ಇಂದು ಮುಂದುವರೆಸಿದ್ದರಿಂದ ಆರೋಪ, ಪ್ರತ್ಯಾರೋಪ ನಡೆದು ಸದನದಲ್ಲಿ ಕೋಲಾಹಲ ಉಂಟಾಯಿತು.

ಇಂದು ಬೆಳಿಗ್ಗೆ ಸದನ ಸಮಾವೇಶಗೊಳ್ಳುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್‌‍ ಶಾಸಕರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗೆ ಇಳಿದು ಧರಣಿ ಮುಂದುವರೆಸಿದರು.ಆಡಳಿತ ಮತ್ತು ಪ್ರತಿಕ್ಷಗಳ ನಡುವೆ ಪದೇ ಪದೇ ಆರೋಪ ಪತ್ಯಾರೋಪ ನಡೆದು ಸದನದಲ್ಲಿ ಕಾವೇರಿದ ವಾತವಾರಣ ಸಷ್ಟಿಯಾಯಿತು. ಪರಿಸ್ಥಿತಿ ತಿಳಿಗೊಳ್ಳದಿದ್ದಾಗ ಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ಅಧಿವೇಶನವನ್ನು ಕೆಲ ಕಾಲ ಮುಂದೂಡಿದರು.

ಪ್ರತಿಪಕ್ಷಗಳು ಧರಣಿ ನಡೆಸಿ ಘೋಷಣೆ ಕೂಗಿದರೆ, ಆಡಳಿತ ಪಕ್ಷದವರು ಕಲಾಪದಲ್ಲಿ ಪಾಲ್ಗೊಂಡು ವಿಪಕ್ಷ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಮುಂದೂಡಿದ ಸದನ ಮತ್ತೆ ಸಮಾವೇಶಗೊಂಡಾಗಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಪ್ರತ್ರಿ ಪಕ್ಷಗಳ ಶಾಸಕರು ಧರಣಿ ನಡೆಸಿದರೆ, ಆಡಳಿತ ಪಕ್ಷದ ಶಾಸಕರು ಕಲಾಪದಲ್ಲಿ ಪಾಲ್ಗೊಂಡು, ಬಿಜೆಪಿ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಧರಣಿ ನಿರತ ಶಾಸಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರೆ, ಆಡಳಿತ ಪಕ್ಷದ ಶಾಸಕರು ಮಳೆ ಹಾನಿಯ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಂಡರು.ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಮಾತನಾಡಿ, ಧರಣಿ ಕೈ ಬಿಟ್ಟು ಸ್ವಸ್ಥಾನಗಳಿಗೆ ತೆರಳಿ ಕಲಾಪ ಸುಗಮವಾಗಿ ನಡೆಯಲು ಸಹಕರಿಸುವಂತೆ ಪದೇ ಪದೇ ಮಾಡಿದ ಮನವಿಗೆ ಧರಣಿ ನಿರತರು ಕಿವಿಗೊಡಲಿಲ್ಲ.

ಅಧಿವೇಶನ ನಡೆಸಲು ನಿಯಮ ಮತ್ತು ಸಂಪ್ರದಾಯವಿದೆ. ಹಿಂದೆ ಆಗಿರುವುದನ್ನೆಲ್ಲಾ ಮರೆತು ಕಲಾಪದಲ್ಲಿ ಪಾಲ್ಗೊಳ್‌ಳಿ. ಯಾರು ಪ್ಲೇ ಕಾರ್ಡ್‌ ಪ್ರದರ್ಶನ ಮಾಡುವುದು ಬೇಡ. ಆಡಳಿತ ಪಕ್ಷದ ಕಡೆಯೂ ಮಾಡಬೇಡಿ, ವಿರೋಧ ಪಕ್ಷದ ಕಡೆಯೂ ಪ್ಲೇ ಕಾರ್ಡ್‌ ಪ್ರದರ್ಶನ ಬೇಡ. ಪ್ರಜಾಪ್ರಭುತ್ವದ ಸೌಂದರ್ಯ ಪ್ರದರ್ಶನವಾಗಬೇಕು ಎಂದು ಸಭಾಧ್ಯಕ್ಷರು ಕಿವಿ ಮಾತು ಹೇಳಿದರು.

ವಿರೋಧ ಪಕ್ಷದ ನಾಯಕ ರ್ಆ.ಅಶೋಕ್‌ ಹಾಗೂ ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ ಬಾಬು ಎದ್ದು ನಿಂತು ಮಾತನಾಡಲು ಮುಂದಾದರು. ಅಷ್ಟರಲ್ಲಿ ಕಾಂಗ್ರೆಸ್‌‍ನ ಹಲವು ಶಾಸಕರು ಎದ್ದು ನಿಂತು ಪ್ರತಿಯಾಗಿ ಮಾತನಾಡಲು ಮುಂದಾದರು. ಆಗ ಸದನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿರಲಿಲ್ಲ. ಆರ್‌.ಅಶೋಕ್‌ ಮಾತನಾಡಿ, ಮುಖ್ಯಮಂತ್ರಿಯವರು ಆಡಳಿತ ಪಕ್ಷದ ಶಾಸಕರಿಗೆ ತಮನ್ನು ಸಮರ್ಥಿಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಅದಕ್ಕಾಗಿ ಇಂದು ಕಲಾಪದಲ್ಲಿ ಕಾಂಗ್ರೆಸ್‌‍ ಶಾಸಕರು ಗಲಾಟೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರು ಪ್ರತಿಪಕ್ಷದವರು ಧರಣಿ ಮಾಡುತ್ತಿದ್ದಾರೆ. ಆಡಳಿತ ಪಕ್ಷದ ಶಾಸಕರು ಏಕೆ ಎದ್ದು ನಿಲ್ಲುತ್ತಿದ್ದೀರಿ. ನಿಮ ಸ್ಥಾನದಲ್ಲೇ ಕುಳಿತುಕೊಳ್ಳಿ. ಪ್ರತಿಪಕ್ಷದವರ ಕೆಲಸವನ್ನು ಆಡಳಿತ ಪಕ್ಷದವರು ಮಾಡುತ್ತಿದ್ದಾರೆ ಎಂದು ಅಸಹನೆ ವ್ಯಕ್ತಪಡಿಸಿದರು.

ಎಲ್ಲರೂ ಒಟ್ಟಿಗೆ ಮಾತನಾಡಿದರೆ ಏನು ಕೇಳುವುದಿಲ್ಲ. ಒಬ್ಬೊಬ್ಬರಾಗಿ ಮಾತನಾಡಿದರೆ ಸರಿಯಾಗಿ ಕೇಳುತ್ತದೆ ಎಂದರು. ಆಗ ಆರ್‌.ಅಶೋಕ್‌ ಮತ್ತೆ ಮಾತನಾಡಿ, ವಾಲೀಕಿ ನಿಗಮದಲ್ಲಿ ಹಗರಣವಾಗಿದೆ. ಹಣ ಲೂಟಿಯಾಗಿದೆ ಎಂದು ಆಡಳಿತ ಪಕ್ಷದವರು ನಮನ್ನು ಬೆಂಬಲಿಸುತ್ತಿದ್ದಾರೆ. ಘೋಷಣೆ ಕೂಗುತ್ತಿದ್ದಾರೆ. ಅಲ್ಲದೆ, ಅನುದಾನಕ್ಕಾಗಿ ತಮದೇ ಸರ್ಕಾರದ ಮುಖ್ಯಸ್ಥರ ವಿರುದ್ಧ ಪರೋಕ್ಷವಾಗಿ ಗಲಾಟೆ ಮಾಡುತ್ತಿದ್ದಾರೆ ಎಂದು ಮೂದಲಿಸಿದರು.ಧರಣಿ ನಿರತ ಪ್ರತಿಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಗದ್ದಲ ಉಂಟು ಮಾಡಿದರೆ, ಆಡಳಿತ ಪಕ್ಷದ ಶಾಸಕರು ತಮ ಸ್ಥಾನಗಳಲ್ಲೇ ಎದ್ದು ನಿಂತು ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದರು. ಇದರಿಂದ ಸದನ ಗದ್ದಲದಿಂದ ಗೊಂದಲದ ಗೂಡಾಯಿತು. ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿರಲಿಲ್ಲ.

ಆಗ ಸಭಾಧ್ಯಕ್ಷರು ಪದೇ ಪದೇ ಮಾಡಿದ ಮನವಿಗೆ ಯಾರು ಕಿವಿಗೊಡದಿದ್ದಾಗ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.ಮತ್ತೆ ಸದನ ಸಮಾವೇಶಗೊಂಡಾಗ ಪ್ರತಿ ಪಕ್ಷಗಳ ಶಾಸಕರು ಧರಣಿ ನಡೆಸಿ ಘೋಷಣೆ ಕೂಗಲಾರಂಭಿಸಿದರು. ಮನವಿಗೆ ಪ್ರತಿಪಕ್ಷಗಳ ಶಾಸಕರು ಸ್ಪಂಧಿಸದಿದ್ದಾಗ, ಧರಣಿ ನಡುವೆ ಸಭಾಧ್‌ಯಕ್ಷರು ಅಧಿಕತ ಕಲಾಪ ಕೈಗೆತ್ತಿಕೊಂಡು ಅರ್ಜಿಗಳನ್ನು ಒಪ್ಪಿಸಲು ಅವಕಾಶ ನೀಡಿದರು. ಬಳಿಕ ಕಾನೂನು ಸಚಿವ ಹೆಚ್‌.ಕೆ. ಪಾಟೀಲ್‌ ಅವರು ಮೂರು ವಿಧೇಯಕಗಳನ್ನು ಮಂಡಿಸಿದರು. ಬಳಿಕ ಸಭಾಧ್ಯಕ್ಷರು ಕಾಂಗ್ರೆಸ್‌‍ ಶಾಸಕ ಪೊನ್ನಣ್ಣ ಅವರಿಗೆ ಮಳೆ ಹಾನಿ ಕುರಿತು ಚರ್ಚೆ ಮಾಡಲು ಅವಕಾಶ ನೀಡಿದರು.

ಎಚ್‌.ಕೆ.ಪಾಟೀಲ್‌ ಮಾತನಾಡಿ ಸದನದ ಘನತೆ ಕಾಪಾಡಿ, ಮುಖ್ಯಮಂತ್ರಿ ಉತ್ತರವನ್ನು ಆಲಿಸಿ. ಈ ರೀತಿ ಕಲಾಪಕ್ಕೆ ಅಡ್ಡಿ ಪಡಿಸಿದರೆ ಅಧಿವೇಶನದ ಸಮಯ ಹಾಳಾಗಲಿದೆ. ಸದನದ ಘನತೆ, ಗೌರವವನ್ನು ಗಾಳಿಗೆ ತೂರಿದ್ದಾರೆ ಎಂದು ಟೀಕಿಸಿದರು.
ಅಶೋಕ್‌ ಮಾತನಾಡಿ ವಾಲೀಕಿ ನಿಗಮದ ಹಗರಣ ಮುಚ್ಚಿ ಹಾಕಲು ಈರೀತಿ ಮಾಡುತ್ತಿದ್ದಾರೆ.

ಚಂದ್ರಶೇಖರ್‌ ಸಾವಿಗೆ ನ್ಯಾಯ ಕೊಡಿ, ವಾಲೀಕಿ ನಿಗಮದಿಂದ ಟಕಾ ಟಕ್‌ ಹಣ ಹೋದಂತೆ ಈಗ ಟಕಾಟಕ್‌ ಅಂತಾ ಮಳೆ ಬಂದಿದೆ ಎಂದು ಮೂದಲಿಸಿದರು.ಪ್ರತಿಭಟನಾ ನಿರತ ಶಾಸಕರನ್ನು ಹೊರಹಾಕಿ ಸದನ ನಡೆಸುವಂತೆ ತಮಯ್ಯ ಸೇರಿದಂತೆ ಹಲವು ಸದಸ್ಯರು ಮನವಿ ಮಾಡಿದರು. ಕಾಂಗ್ರೆಸ್‌‍ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಬಿಜೆಪಿ ಆಡಳಿತಾವಧಿಯಲ್ಲಿ ಬೋವಿ ನಿಗಮ, ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಸೇರಿದಂತೆ ಹಲವು ನಿಗಮಗಳಲ್ಲಿ 220 ಕೋಟಿ ರೂ. ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿದರು.

ಇದೇ ರೀತಿ ಸದನದಲ್ಲಿ ಆಡಳಿತ ಮತ್ತು ಪತ್ರಿ ಪಕ್ಷಗಳ ಶಾಸಕರ ನಡುವೆ ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಗಿ, ಸದನ ಗದ್ದಲ, ಗೊಂದಲದ ಗೂಡಾಯಿತಲ್ಲದೆ, ಕೋಲಾಹಲದ ವಾತಾವರಣ ಸಷ್ಟಿಯಾಯಿತು.

RELATED ARTICLES

Latest News