Friday, November 22, 2024
Homeಅಂತಾರಾಷ್ಟ್ರೀಯ | Internationalಪಾಕ್ ಉಗ್ರರ ಸದೆಬಡಿಯಲು ಸಿದ್ದರಾದ 500 ಯೋಧರು

ಪಾಕ್ ಉಗ್ರರ ಸದೆಬಡಿಯಲು ಸಿದ್ದರಾದ 500 ಯೋಧರು

ನವದೆಹಲಿ,ಜು.20- ಕಾಶ್ಮೀರ ಕಣಿವೆಯಲ್ಲಿ ಮತ್ತೆ ಬಾಲ ಬಿಚ್ಚಿರುವ ಪಾಕ್ ಬೆಂಬಲಿತ ಉಗ್ರರನ್ನು ಸದೆಬಡಿಯಲು ವಿಶೇಷ ಪಡೆ ಸಜ್ಜಾಗಿದೆ. ಕೆಲ ದಿನಗಳಿಂದ ಉಗ್ರರ ಉಪಟಳ ಹೆಚ್ಚಾಗಿದ್ದು, ಕಳೆದ ಮೂರು ತಿಂಗಳಿನಿಂದ ಸೇನಾಯೋಧರು ಸೇರಿದಂತೆ 40ಕ್ಕೂ ಹೆಚ್ಚು ಮಂದಿಯನ್ನು ಉಗ್ರರು ಹತ್ಯೆ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದೆ.

ಉಗ್ರ ಕೃತ್ಯ ನಡೆಸಲೆಂದೇ ನೆರೆಯ ಪಾಕಿಸ್ತಾನದಿಂದ 55ಕ್ಕೂ ಹೆಚ್ಚು ಭಯೋತ್ಪಾದಕರು ಕಣಿವೆಯಲ್ಲಿ ಬೀಡುಬಿಟ್ಟಿದ್ದಾರೆ ಎಂಬ ಗುಪ್ತಚರ ಮಾಹಿತಿಯನ್ನಾಧರಿಸಿ ಈ ದಿಟ್ಟ ಕ್ರಮ ಕೈಗೊಳ್ಳಲಾಗಿದೆ. ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸಲು ಕಾಶ್ಮೀರ ಪ್ರವೇಶಿಸಿರುವ ಪಾಕಿಸ್ತಾನದ 50 ರಿಂದ 55 ಭಯೋತ್ಪಾದಕರನ್ನು ಬೇಟೆಯಾಡಲು ಭಾರತೀಯ ಸೇನೆಯು ಸುಮಾರು 500 ಪ್ಯಾರಾ ವಿಶೇಷ ಪಡೆಗಳ ಕಮಾಂಡೋಗಳನ್ನು ನಿಯೋಜಿಸಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಭಯೋತ್ಪಾದಕರನ್ನು ಬೆಂಬಲಿಸುವ ಭೂಗತ ಕಾರ್ಮಿಕರು ಸೇರಿದಂತೆ ಭಯೋತ್ಪಾದಕ ಬೆಂಬಲ ಮೂಲಸೌಕರ್ಯವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಯೋಧರು ತೊಡಗಿದ್ದಾರೆ ಎಂದು ಮೂಲಗಳು ಉಲ್ಲೇಖಿಸಿವೆ. ಪಾಕಿಸ್ತಾನದ ಪ್ರಾಕ್ಸಿ ಆಕ್ರಮಣವನ್ನು ಎದುರಿಸಲು ಸೇನೆಯು ಈಗಾಗಲೇ ಸುಮಾರು 3500-4000 ಸಿಬ್ಬಂದಿಯ ಒಂದು ಬ್ರಿಗೇಡ್‍ಅನ್ನು ನಿಯೋಜಿಸಿದೆ ಎಂದು ತಿಳಿದುಬಂದಿದೆ.

ಅತ್ಯಾಧುನಿಕ ಶಸ್ತ್ರಸಗಳು ಮತ್ತು ಸಂವಹನ ಸಾಧನಗಳನ್ನು ಹೊಂದಿರುವ ಭಯೋತ್ಪಾದಕರನ್ನು ಹುಡುಕಲು ಮತ್ತು ನಾಶಮಾಡಲು ಭೂಸೇನೆಯ ವಿಶೇಷ ಕಾರ್ಯತಂತ್ರಗಳಿಂದ ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದೆ.
ಸೇನೆಯು ಈಗಾಗಲೇ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಭಯೋತ್ಪಾದನಾ ನಿಗ್ರಹ ಮೂಲಸೌಕರ್ಯವನ್ನು ಹೊಂದಿದೆ. ರೋಮಿಯೋ ಮತ್ತು ಡೆಲ್ಟಾ ಪಡೆಗಳು ಸೇರಿದಂತೆ ರಾಷ್ಟ್ರೀಯ ರೈಫೆಲ್ಸ್‍ನ ಎರಡು ಪಡೆಗಳು ಮತ್ತು ಪ್ರದೇಶದಲ್ಲಿ ಇತರ ನಿಯಮಿತ ಪದಾತಿ ದಳಗಳ ಉಪಸ್ಥಿತಿ ಇದೆ ಎಂದು ಅವರು ಹೇಳಿದರು.

ಕಣಿವೆಯಲ್ಲಿ ಉಗ್ರರ ಉಪಟಳ ಹೆಚ್ಚಾಗಿರುವ ಬಗ್ಗೆ ಪ್ರತಿಪಕ್ಷದ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸತ್‍ನ ಪ್ರತಿಪಕ್ಷದ ನಾಯಕ ರಾಹುಲ್ ಗಾಂ„ ಸೇರಿದಂತೆ ಹಲವಾರು ಮುಖಂಡರು ಕೇಂದ್ರ ಸರ್ಕಾರ ಉಗ್ರರನ್ನು ಮಟ್ಟಹಾಕುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದರು.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಕಣಿವೆಯಲ್ಲಿ ಬೀಡು ಬಿಟ್ಟಿರುವ ಉಗ್ರರನ್ನು ಮಟ್ಟ ಹಾಕಲು ಮಾಸ್ಟರ್ ಪ್ಲಾನ್ ಮಾಡಿದೆ ಎಂದು ವರದಿಯಾಗಿದೆ.

RELATED ARTICLES

Latest News