ಸಬರಕಾಂತ,ಜು.21- ಗುಜರಾತ್‍ನಲ್ಲಿ ಚಂಡೀಪುರ ವೈರಸ್ ಹಾವಳಿ ಮೀತಿ ಮೀರಿದೆ. ಇದುವರೆಗೂ ರಾಜ್ಯದಲ್ಲಿ 50 ಮಂದಿಗೆ ವೈರಸ್ ಹರಡಿದೆ ಹಾಗೂ 16 ಮಂದಿ ಬಲಿಯಾಗಿದ್ಧಾರೆ. ಹಿಮ್ಮತ್‍ಪುರದಲ್ಲಿ 14 ಚಂಡೀಪುರ ವೈರಸ್ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ಏಳು ರೋಗಿಗಳು ದಾಖಲಾಗಿದ್ದಾರೆ, ಮೂರು ಪ್ರಕರಣಗಳು ಇತರ ರಾಜ್ಯಗಳಿಂದ ಬಂದಿವೆ, ಇಡೀ ರಾಜ್ಯದಲ್ಲಿ 50 ಚಂಡಿಪುರ ವೈರಸ್ ಪ್ರಕರಣಗಳು ಮತ್ತು 16 ಸಾವು ಪ್ರಕರಣಗಳು ವರದಿಯಾಗಿವೆ ಎಂದು ಗುಜರಾತ್ ಆರೋಗ್ಯ ಸಚಿವ ರುಶಿಕೇಶ್ ಪಟೇಲ್ ತಿಳಿಸಿದ್ದಾರೆ.
ಪ್ರತಿ ಗ್ರಾಮ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ಬಗ್ಗೆ ಮಾಹಿತಿ ರವಾನಿಸಲಾಗಿದೆ ಮತ್ತು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳು, ಮುಖ್ಯ ಜಿಲ್ಲಾ ಆರೋಗ್ಯಾಧಿಕಾರಿ (ಸಿಡಿಎಚ್‍ಒ) ಮತ್ತು ವೈದ್ಯಕೀಯ ಕಾಲೇಜುಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ಅವರು ಹೇಳಿದರು.
ಗುಜರಾತಿನಲ್ಲಿ ಚಂಡೀಪುರ ವೈರಸ್‍ನ ಲಕ್ಷಣಗಳು ಕಂಡು ಬಂದಿದ್ದು, ಇದು ಸ್ವಲ್ಪ ಭಯವನ್ನುಂಟು ಮಾಡಿದೆ. ಏಳು ಪ್ರಕರಣಗಳನ್ನು ಲ್ಯಾಬ್ ಪರೀಕ್ಷೆಗಾಗಿ ಪುಣೆಗೆ ಕಳುಹಿಸಲಾಗಿದೆ, ಅದರಲ್ಲಿ ಒಂದು ಪ್ರಕರಣ ಮಾತ್ರ ಚಂಡಿಪುರ ವೈರಸ್‍ನ ಪ್ರಕರಣ ಪತ್ತೆಯಾಗಿದೆ. ಇದು ಊತ ಮತ್ತು ಅತಿಸಾರದಂತಹ ಎಲ್ಲಾ ರೋಗಲಕ್ಷಣಗಳಿಗೆ ಕಾರಣವಾಗಿದೆ, ಇದು ವೈರಸ್‍ಗೆ ಸಂಬಂಧಿಸಿದ ಪ್ರಮುಖ ಮಾಹಿತಿಯು ಇಡೀ ರಾಜ್ಯದಲ್ಲಿ ಪ್ರಸಾರವಾಗಿದೆ.
ಇದಕ್ಕೂ ಮೊದಲು, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಚಂಡೀಪುರ ವೈರಸ್ ಮಧ್ಯೆ ರಾಜ್ಯದಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿದರು ಮತ್ತು ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಕೈಗೊಂಡ ಕ್ರಮಗಳ ಅವಲೋಕನ ನಡೆಸಿದರು.
ಸಿಎಂ ಪಟೇಲ್ ಅವರು ರಾಜ್ಯ ಮುನ್ಸಿಪಲ್ ಕಮಿಷನರ್‍ಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳು ಮತ್ತು ಮುಖ್ಯ ಜಿಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ತಮ್ಮ ಜಿಲ್ಲೆಯ ಕಾರ್ಯಕ್ಷಮತೆಯ ವಿವರಗಳನ್ನು ಪಡೆಯಲು ವೀಡಿಯೊ ಕಾನರೆನ್ಸ ಮೂಲಕ ಸಂವಾದ ನಡೆಸಿದರು.
ರೋಗ ತಡೆಗಟ್ಟಲು ಜಿಲ್ಲೆಗಳಲ್ಲಿ ಮಲಾಥಿಯಾನ್ ಪೌಡರ್ ಸಿಂಪಡಿಸುವ ಅಭಿಯಾನ ನಡೆಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. ಯಾವುದೇ ರೀತಿಯ ಜ್ವರದ ಸಂದರ್ಭದಲ್ಲಿ ರೋಗಿಗಳಿಗೆ ತಕ್ಷಣದ, ತೀವ್ರ ಚಿಕಿತ್ಸೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಗುಜರಾತ್ ಆರೋಗ್ಯ ಸಚಿವ ಹೃಷಿಕೇಶ್ ಪಟೇಲï, ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ನರ್ಸ್ ಸಹೋದರಿಯರಂತಹ ತಳಮಟ್ಟದ ಕಾರ್ಯಕರ್ತೆಯರು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು.