ಬೆಂಗಳೂರು,ಜು.22- ಸಂಚಾರ ಉಲ್ಲಂಘನೆ ಮಾಡುವ ವಾಹನ ಸವಾರರು, ಚಾಲಕರ ವಿರುದ್ಧ ಉತ್ತರ ವಿಭಾಗದ ಸಂಚಾರಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಒಟ್ಟು 748 ಪ್ರಕರಣಗಳನ್ನು ದಾಖಲಿಸಿ 3.78 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ.
ಜು.14 ರಿಂದ 20 ರವರೆಗೆ ನಡೆಸಿದ ಕಾರ್ಯಾಚರಣೆಯ ವೇಳೆ ಏಕಮುಖ ಸಂಚಾರವಿದ್ದರೂ ವಿರುದ್ಧ ದಿಕ್ಕಿನಿಂದ ಸಂಚಾರ, ಪ್ರಕಾಶಮಾನವಾದ ಹೆಡ್‍ಲೈಟ್, ನಂಬರ್‍ಪ್ಲೇಟ್ ಡಿಫಕ್ಟ್, ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ, ಆಟೋ ಚಾಲಕರು ಸಮವಸ ಧರಿಸದಿರುವುದು, ಪುಟ್‍ಪಾತ್‍ನಲ್ಲಿ ಪಾರ್ಕಿಂಗ್ ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಸಿರುವುದು ಕಂಡುಬಂದಿದೆ.
ಒಂದು ವಾರದ ಕಾರ್ಯಾಚರಣೆಯಲ್ಲಿ ಸಂಚಾರ ಉಲ್ಲಂಘನೆ ಮಾಡಿದ ಒಟ್ಟು 748 ಪ್ರಕರಣಗಳನ್ನು ದಾಖಲಿಸಿ 3,78,900 ರೂ. ದಂಡ ಸಂಗ್ರಹಿಸ ಲಾಗಿದೆ. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಹಾಗೂ ಸಂಚಾರ ನಿಯಮಗಳ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು.
ಮುಂದಿನ ದಿನಗಳಲ್ಲಿಯೂ ಕಾರ್ಯಾಚರಣೆ ಮುಂದುವರೆ ಯಲಿದೆ ಎಂದು ಉತ್ತರ ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಿರಿಗೌಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.