Friday, September 20, 2024
Homeರಾಜ್ಯಭೂಕಬಳಿಕೆ: ಕೋಕಾ ಕೇಸ್ ದಾಖಲು

ಭೂಕಬಳಿಕೆ: ಕೋಕಾ ಕೇಸ್ ದಾಖಲು

ಬೆಂಗಳೂರು,ಜು.22-ಭೂ ಕಬಳಿಕೆದಾರರ ವಿರುದ್ಧ ಸಿಐಡಿ ಪೊಲೀಸರು ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ-2 ಸಾವಿರ (ಕೋಕಾ)ದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭೂ ಕಬಳಿಕೆದಾರರ ತಂಡದ ಮುಖ್ಯಸ್ಥ ಜಾನ್‍ಮೋಸಸ್‍ನನ್ನು ಬಂಧಿಸಿ ಸಿಐಡಿ ಪೊಲೀಸರ ವಶಕ್ಕೆ ಪಡೆದು ಈತನ ವಿರುದ್ಧ ಕಾಯ್ದೆ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಕಲಿ ದಾಖಲಾತಿ ಸೃಷ್ಠಿಸಿದ ವ್ಯಕ್ತಿಗಳಿಂದ ನ್ಯಾಯಾಲಯಗಳಲ್ಲಿ ದಾವೆಗಳನ್ನು ಹೂಡಿಸಿ ಪಡೆದ ಆದೇಶಗಳ ಮೂಲಕ ಅಮಾಯಾಕರ ಆಸ್ತಿಗಳನ್ನು ಕಬಳಿಸುತ್ತಿರುವ ಕುಖ್ಯಾತ ಜಾನ್ ಮೋಸಸ್ ಹಾಗೂ ಆತನ ಸಹಚರರ ವಿರುದ್ಧ ಸಿಐಡಿ ಪೊಲೀಸರು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಹಲಸೂರು ಗೇಟ್ ಪೊಲೀಸ್ ಠಾಣೆಗೆ ಲಘು ವ್ಯವಹಾರಗಳ ನ್ಯಾಯಾಲಯದ ರಿಜಿಸ್ಟ್ರಾರ್‍ರವರು ದೂರು ನೀಡಿದ್ದು, ಈ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಐಡಿ ಘಟಕಕ್ಕೆ ವಹಿಸಲಾಗಿದೆ. ಸಿಐಡಿ ಘಟಕ ತನಿಖೆ ಕೈಗೊಂಡ ಸಮಯದಲ್ಲಿ ಇದೇ ರೀತಿಯ ಅನೇಕ ಅಪರಾಧಗಳು ಬೆಳಕಿಗೆ ಬಂದಿದ್ದು, 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಈ ಎಲ್ಲಾ ಪ್ರಕರಣಗಳಲ್ಲಿ ಜಾನ್ ಮೋಸಸ್ ಹಾಗೂ ಆತನ ಸಹಚರರ ಚಟುವಟಿಕೆಗಳು ಬಹಿರಂಗಗೊಂಡಿದ್ದು, ಅವುಗಳಲ್ಲಿ 51 ಪ್ರಕರಣಗಳಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ. ಉಳಿದ ಪ್ರಕರಣಗಳು ಪ್ರಸ್ತುತ ತನಿಖಾ ಹಂತದಲ್ಲಿರುತ್ತದೆ. ಈ ಸಂಘಟಿತ ಅಪರಾಗಳ ತಂಡ ಎಸಗಿರುವ ಕೃತ್ಯಗಳಿಂದ ಬಡವರ ಜಮೀನು, ನಿವೇಶನ, ಮನೆಗಳನ್ನು ಕಬಳಿಸಿದ್ದಲ್ಲದೆ ಅವರನ್ನು ಬೆದರಿಸಿ ಒತ್ತಾಯಪೂರ್ವಕವಾಗಿ ಕೋಟ್ಯಂತರ ಹಣವನ್ನು ಪಡೆದು ಮೋಸಮಾಡಿರುವುದು ತನಿಖೆಯಿಂದ ಗೊತ್ತಾಗಿದೆ.

ತನಿಖಾಕಾಧಿರಿಗಳಾದ ಡಿವೈಎಸ್ಪಿ ಪುನೀತ್‍ಕುಮಾರ್, ಇನ್ಸ್‍ಪೆಕ್ಟರ್ ಶಿವಕುಮಾರ್ ಅವರು ತನಿಖೆ ಕೈಗೊಂಡು ಸಕ್ಷಮ ಪ್ರಾಕಾರದಿಂದ ಪೂರ್ವಾನುಮತಿ ಕೋಕಾ ಕಾಯ್ದೆ ಅಳವಡಿಸಿಕೊಂಡಿರುತ್ತಾರೆ.

RELATED ARTICLES

Latest News