ನವದೆಹಲಿ,ಜು.23- ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಜನಸಾಮಾನ್ಯರಿಗೆ ಹೊರೆಯಾಗದಂತೆ ಹಿಂದಿನ ತೆರಿಗೆ ಪದ್ದತಿಯನ್ನೇ ಕೇಂದ್ರ ಸರ್ಕಾರ ಮುಂದುವರೆಸಿದೆ. ಸಂಸತ್‍ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2024-25ನೇ ಸಾಲಿನ ಬಜೆಟ್‍ನಲ್ಲಿ ಮೂರು ಲಕ್ಷ ಆದಾಯ ಹೊಂದಿರುವವರಿಗೆ ಯಾವುದೇ ರೀತಿಯ ತೆರಿಗೆ ಇರುವುದಿಲ್ಲ ಎಂದು ಪ್ರಕಟಿಸಿದ್ದಾರೆ.
ಮಧ್ಯಮ ವರ್ಗದವರಿಗೆ ತೆರಿಗೆ ಬಾರ ಹಾಕದೆ ಹಳೆಯ ತೆರಿಗೆ ಪದ್ಧತಿಯನ್ನು ಮುಂದುವರೆಸುವ ಮೂಲಕ ತೆರಿಗೆ ಪದ್ದತಿ ಬಳಸುವವರಿಗೆ ಹೊಸ ಸ್ಲ್ಯಾಬ್ ಘೋಷಿಸಲಾಗಿದೆ. 3ರಿಂದ 7 ಲಕ್ಷ ಆದಾಯ ಹೊಂದಿರುವವರು ಶೇ.5ರಷ್ಟು, 7 ಲಕ್ಷದಿಂದ 10 ಲಕ್ಷ ಆದಾಯ ಹೊಂದಿರುವವರು ಶೇ.10ರಷ್ಟು, 10 ಲಕ್ಷದಿಂದ 12 ಲಕ್ಷ ಆದಾಯ ಹೊಂದಿರುವವರಿಗೆ ಶೇ.15 ಮತ್ತು 12ರಿಂದ 15 ಲಕ್ಷ ಹೊಂದಿರುವವರು ಶೇ.20ರಷ್ಟು ಹಾಗೂ 15 ಲಕ್ಷ ವಾರ್ಷಿಕ ಆದಾಯ ಹೊಂದಿರುವವರು ಶೇ.30ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಇದೀಗ ಹೆಚ್ಚು ಮಂದಿ ಹೊಸ ತೆರಿಗೆ ಪದ್ಧತಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ಪಾವತಿಗಳಿಗೆ 5 ಪ್ರತಿಶತ ಟಿಡಿಎಸ್ ಬದಲಿಗೆ 2 ಪ್ರತಿಶತ ಟಿಡಿಎಸ್ ಅನ್ನು ಒದಗಿಸಲಾಗುತ್ತದೆ. ಮ್ಯೂಚುವಲ್ -Àಂಡ್ ಅಥವಾ ಯುಟಿಐ ಮರುಖರೀದಿಯಲ್ಲಿ ಟಿಡಿಎಸ್ ಅನ್ನು ಶೇ.20ರಷ್ಟು ಹಿಂಪಡೆಯಲಾಗಿದೆ.
ಇ-ಕಾಮರ್ಸ್ ಆಪರೇಟರ್‍ಗಳಿಗೆ ಶೇಕಡಾ 1 ರಿಂದ 0.1 ಕ್ಕೆ ತೆರಿಗೆಯನ್ನು ಇಳಿಸಲಾಗಿದೆ. ಅಲ್ಲದೆ, ಟಿಡಿಎಸ್ ತುಂಬುವಲ್ಲಿ ವಿಳಂಬವನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
0-3 ಲಕ್ಷ : ತೆರಿಗೆ ಇಲ್ಲ
3-7 ಲಕ್ಷ: ಶೇ.5ರಷ್ಟು ತೆರಿಗೆ
7-10 ಲಕ್ಷ : ಶೇ.10ರಷ್ಟು ತೆರಿಗೆ
10 -12 ಲಕ್ಷ : ಶೇ.15ರಷ್ಟು ತೆರಿಗೆ
12 – 15 ಲಕ್ಷ : ಶೇ.20ರಷ್ಟು
15 ಲಕ್ಷಕ್ಕಿಂತ ಹೆಚ್ಚು ಶೇ.30ರಷ್ಟು ತೆರಿಗೆ