ನವದೆಹಲಿ, ಜು.23- ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಸತತ ಏಳನೆ ಬಾರಿಗೆ ಮಹಿಳೆ ಒಬ್ಬರು ಬಜೆಟ್ ಮಂಡಿಸಿರುವುದು ದಾಖಲೆ. 2019 ರಿಂದ ಸತತವಾಗಿ ಇಂದು 2024 ಜು.23ರಂದು ಏಳನೆ ಬಾರಿಗೆ ಭವಿಷ್ಯ ಭಾರತದ ಮುಂಗಡ ಪತ್ರವನ್ನು ಮಂಡಿಸುವ ಮೂಲಕ ನಿರ್ಮಲಾ ಸೀತಾರಾಮನ್ ಅವರು ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಸಾಧನೆ ಪಿ.ಚಿದಂಬರಂ ಅವರ ಹೆಸರಿನಲ್ಲಿದ್ದು, ಅವರ ನಂತರ ಪ್ರಣಬ್ ಮುಖರ್ಜಿ ಮತ್ತು ಮೊರಾರ್ಜಿ ದೇಸಾಯಿ ಅವರಿದ್ದರು. ಈಗ ನಿರ್ಮಲಾ ಸೀತಾರಾಮನ್ ಅವರು ಏಳನೆ ಬಾರಿ ಬಜೆಟ್ ಮಂಡನೆ ಮಾಡುವ ಮೂಲಕ ಮೂರನೆ ಸ್ಥಾನಕ್ಕೆ ಏರಿದಂತಾಗಿದೆ.