Friday, November 22, 2024
Homeಅಂತಾರಾಷ್ಟ್ರೀಯ | Internationalಇಥಿಯೋಪಿಯಾದಲ್ಲಿ ಮಳೆ-ಭೂ ಕುಸಿತಕ್ಕೆ 229 ಮಂದಿ ಸಾವು

ಇಥಿಯೋಪಿಯಾದಲ್ಲಿ ಮಳೆ-ಭೂ ಕುಸಿತಕ್ಕೆ 229 ಮಂದಿ ಸಾವು

ಅಡಿಸ್ ಅಬಾಬಾ, ಜು.24 (ಎಪಿ) ಇಥಿಯೋಪಿಯಾದಲ್ಲಿ ಭಾರೀ ಮಳೆ, ಭೂ ಕುಸಿತದಿಂದ ಉಂಟಾಗಿರುವ ಅನಾಹುತದಲ್ಲಿ ಕನಿಷ್ಠ ಪಕ್ಷ 229 ಜನರು ಬಲಿಯಾಗಿದ್ದಾರೆ. ಪ್ರವಾಹದಲ್ಲಿ ಬದುಕುಳಿದವರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ. ದುರಂತದಲ್ಲಿ ಭಯಾನಕ ನಷ್ಟ ಉಂಟಾಗಿದೆ ಎಂದು ಪ್ರಧಾನಿ ಅಬಿ ಅಹದ್ ಹೇಳಿದ್ದಾರೆ. ದಕ್ಷಿಣ ಇಥಿಯೋಪಿಯಾದ ಕೆಂಚೋ ಶಾಚಾ ಗೊಜ್ಡಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದ್ದು ಇದರಲ್ಲಿ ಚಿಕ್ಕ ಮಕ್ಕಳು ಮತ್ತು ಗರ್ಭಿಣಿಯರು ಸೇರಿದ್ದಾರೆ ಎಂದು ಸ್ಥಳೀಯ ಆಡಳಿತಾಧಿಕಾರಿ ಡಾಗಾವಿ ಅಯೆಲೆ ಹೇಳಿದ್ದಾರೆ.

ಕಳೆದ 3 ದಿನದಿಂದ ಸುರಿದ ಭಾರಿ ಮಳೆಯಿಂದ ಬೆಟ್ಟ,ಗುಡ್ಡ ಕುಸಿದು ಮಣ್ಣಿನಿಮದ ಕೊಡಿದ ಪ್ರವಾಹ ವಸತಿ ಗ್ರಾಮಗಳನ್ನು ಮುಳುಗಿಸಿದೆ. ಕೆಸರುಗದ್ದೆಗಳಗಿದೆ ರಕ್ಷನಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಗೋಫಾ ವಲಯದ ಸಂವಹನ ಕಚೇರಿಯ ಮುಖ್ಯಸ್ಥ ಕಸ್ಸಾಹುನ್ ಅಬಯ್ನೆಹ್ ಹೇಳಿದ್ದಾರೆ. ಇನ್ನೂ ಎಷ್ಟು ಮಂದಿ ಪತ್ತೆಯಾಗಿಲ್ಲ ಕಾರ್ಯಾಚರಣೆ ವೇಳೆ ಅನೇಕ ರಕ್ಷಕರು ನಾಪತ್ತೆಯಾಗಿದ್ದಾರೆ ಎಂದು ಗೋಫಾ ವಲಯದ ವಿಪತ್ತು ಪ್ರತಿಕ್ರಿಯೆ ಸಂಸ್ಥೆಯ ನಿರ್ದೇಶಕ ಮಾರ್ಕೋಸ್ ಮೆಲೆಸೆ ಹೇಳಿದ್ದಾರೆ.

ಇಥಿಯೋಪಿಯಾದಲ್ಲಿ ಭಾರಿ ಮಳೆಯ ಕಾರಣದಿಂದ ಭೂಕುಸಿತಗಳು ಸಾಮಾನ್ಯವಾಗಿದೆ, ಇದು ಜುಲೈನಲ್ಲಿ ಪ್ರಾರಂಭವಾಯಿತು ಮತ್ತು ಸೆಪ್ಟೆಂಬರ್ ಮಧ್ಯದವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.

RELATED ARTICLES

Latest News