ಡೆಹ್ರಾಡೂನ್,ಜು.26- ಇನ್ನು ಮುಂದೆ ಉತ್ತರಾಖಂಡಕ್ಕೆ ಭೇಟಿ ನೀಡುವ ಪ್ರವಾಸಿಗರು ತಪ್ಪದೆ ತಮ ವಾಹನಗಳಲ್ಲಿ ಕಸದ ತೊಟ್ಟಿ ಜೊತೆ ಚೀಲಗಳನ್ನು ಕೊಂಡೋಯ್ಯಬೇಕು. ಇಲ್ಲದಿದ್ದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇರಲಿ ಎಚ್ಚರ…
ಹೌದು ಉತ್ತರಾಖಂಡ ಸರ್ಕಾರ ಕಸದ ರಾಶಿಯಿಂದ ಕಂಗೆಟ್ಟಿದ್ದು, ಇನ್ನು ಮುಂದೆ ಪ್ರವಾಸಿಗರು ತಮ ಜೊತೆಯಲ್ಲೇ ಕಸ ಸಂಗ್ರಹಿಸಿ ಸಾಗಿಸಬೇಕು ಎಂಬ ಹೊಸ ನಿಯಮ ಜಾರಿಗೆ ತಂದಿದೆ.ರಾಜ್ಯಕ್ಕೆ ಪ್ರವೇಶಿಸುವ ಎಲ್ಲಾ ವಾಹನಗಳು ಕಸದ ಚೀಲಗಳು ಮತ್ತು ಡಸ್ಟ್‌ಬಿನ್‌ಗಳನ್ನು ಹೊಂದಿರುವುದನ್ನು ಕಡ್ಡಾಯಗೊಳಿಸುವ ನಿಯಮವನ್ನು ಜಾರಿಗೊಳಿಸುವಂತೆ ಉತ್ತರಾಖಂಡ ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ.
ಉತ್ತರಾಖಂಡ ಸಾರಿಗೆ ಇಲಾಖೆಯು ಎಲ್ಲಾ ಪ್ರವೇಶ ಬಿಂದುಗಳಲ್ಲಿ ಒಳಬರುವ ವಾಹನಗಳ ಮೇಲೆ ತಪಾಸಣೆ ನಡೆಸಲು ಮುಂದಾಗಿದೆ.ನೆರೆಯ ರಾಜ್ಯಗಳಾದ ಹರಿಯಾಣ, ಉತ್ತರ ಪ್ರದೇಶ, ದೆಹಲಿ, ಹಿಮಾಚಲ ಪ್ರದೇಶ, ಪಂಜಾಬ್, ಚಂಡೀಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಸಾರಿಗೆ ಅಧಿಕಾರಿಗಳಿಗೆ ಅವರ ಸಹಕಾರ ಮತ್ತು ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಪತ್ರಗಳನ್ನು ಕಳುಹಿಸಲಾಗಿದೆ.
ವಾಹನಗಳು ನಿಯಮಗಳನ್ನು ಅನುಸರಿಸದಿದ್ದರೆ, ಅವರಿಗೆ ದಂಡ ವಿಧಿಸಲಾಗುತ್ತದೆ ಮತ್ತು ರಾಜ್ಯದಲ್ಲಿ ಪ್ರಯಾಣಿಸಲು ಅನುಮತಿಸುವ ಟ್ರಿಪ್ ಕಾರ್ಡ್ ಅನ್ನು ನೀಡಲಾಗುವುದಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.