ಬೆಂಗಳೂರು, ಸೆ.25- ಪ್ರಯಾಣಿಕರ ಅನುಕೂಲಕ್ಕಾಗಿ ಕಾಚೀಗುಡ-ಯಶವಂತಪುರ-ಕಾಚೇಗೌಡ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಪ್ರಾರಂಭಿಸಲಾಗಿದ್ದು, ವಿಡಿಯೋ ಲಿಂಕ್ ಮೂಲಕ ನಿನ್ನೆ ಪ್ರಧಾನಿ ಚಾಲನೆ ನೀಡಿದ ನಂತರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಯಲಹಂಕ ರೈಲ್ವೆ ನಿಲ್ದಾಣದಲ್ಲಿ ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್ ಮೋಹನ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ಸೇರಿದಂತೆ ರೈಲ್ವೆ ಅಕಾರಿಗಳು ಪಾಲ್ಗೊಂಡಿದ್ದರು.
ಇಂದು ಅಕೃತವಾಗಿ ಯಶವಂತಪುರದಿಂದ ಕಾಚೀಗುಡಕ್ಕೆ ರೈಲು 20704 ಹೊರಟಿದೆ. ಬುಧವಾರ ಬಿಟ್ಟು ಉಳಿದ ವಾರದ ಆರು ದಿನಗಳು ಈ ರೈಲು ಸಂಚರಿಸಲಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ರೈಲು ಸಂಖ್ಯೆ 20703 ಕಾಚೀಗುಡ-ಯಶವಂತಪುರ ವಂದೇ ಭಾರತ್ ಎಕ್ಸ್‍ಪ್ರೆಸ್ ಕಾಚಿಗುಡದಿಂದ ಬೆಳಿಗ್ಗೆ 05:30 ಗಂಟೆಗೆ ಹೊರಟು ಅದೇ ದಿನ ಮಧ್ಯಾಹ್ನ 02:00 ಗಂಟೆಗೆ ಯಶವಂತಪುರವನ್ನು ತಲುಪುತ್ತದೆ. ಮಾರ್ಗದಲ್ಲಿ, ಈ ರೈಲು ಮೆಹಬೂಬ್ ನಗರ (06:49/06:50 ಅI) ಕರ್ನೂಲ್ ನಗರ (08:24/08:25 ಅI) ಅನಂತಪುರ (10:44/10:45 ಅI) ಮತ್ತು ಧರ್ಮಾವರಂ (11:14/11: 15 ಅI) ಮಾರ್ಗದಲ್ಲಿ ಸಂಚರಿಸುತ್ತದೆ.
KRS ಸದ್ಯದ ಚಿತ್ರ ತೋರಿಸಿ ಕಣ್ಣೀರಿಟ್ಟ ದೇವೇಗೌಡರು
ರೈಲು ಸಂಖ್ಯೆ 20704 ಯಶವಂತಪುರ-ಕಾಚೀಗುಡ ವಂದೇ ಭಾರತ್ ಎಕ್ಸ್‍ಪ್ರೆಸ್ ಯಶವಂತಪುರದಿಂದ ಮಧ್ಯಾಹ್ನ 02:45 ಕ್ಕೆ ಹೊರಟು ಅದೇ ದಿನ ರಾತ್ರಿ 11:15ಕ್ಕೆ ಕಾಚೀಗುಡ ತಲುಪುತ್ತದೆ. ಈ ರೈಲು ಧರ್ಮಾವರಂನಲ್ಲಿ ಸಂಜೆ 04:59/05:00ಕ್ಕೆ, ಅನಂತಪುರದಲ್ಲಿ ಸಂಜೆ 05:29/05:30ಕ್ಕೆ, ಕರ್ನೂಲ್ ಸಿಟಿ 07:50/07:51ಕ್ಕೆ ಮತ್ತು ಮಹಬೂಬ್ ನಗರದಲ್ಲಿ 09:34/09:35 PIಗೆ ನಿಲ್ಲುತ್ತದೆ.
ಕಾಚೀಗುಡ-ಯಶವಂತಪುರ ದರ
ಸಿಸಿ ವರ್ಗ ರೂ. 1600
ಇಸಿ ವರ್ಗ ರೂ. 2915
ಇಸಿ ವರ್ಗ ರೂ. 2865
ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲಿನಲ್ಲಿ 2 ಡಿಟಿಸಿ (ಡ್ರೈವಿಂಗ್ ಟ್ರೈಲರ್ ಕೋಚ್‍ಗಳು), 4 ಎಂಸಿ (ಮೋಟಾರ್ ಕೋಚ್‍ಗಳು), ಮತ್ತು 2 ಟಿಸಿ (ಟ್ರೇಲರ್ ಕೋಚ್‍ಗಳು) ಸೇರಿದಂತೆ ಒಟ್ಟು 8 ಕೋಚ್‍ಗಳನ್ನು ಒಳಗೊಂಡಿರುತ್ತದೆ ಎಂದು ಸಾರ್ವಜನಿಕ ಸಂಪರ್ಕಾಕಾರಿ ತ್ರಿನೇತ್ರ ತಿಳಿಸಿದ್ದಾರೆ.