Friday, October 18, 2024
Homeರಾಜ್ಯಎಚ್‌.ಡಿ.ಕುಮಾರಸ್ವಾಮಿಯವರಿಗೂ ಮುಡಾದಿಂದ ಬದಲಿ ನಿವೇಶನ ಮಂಜೂರು

ಎಚ್‌.ಡಿ.ಕುಮಾರಸ್ವಾಮಿಯವರಿಗೂ ಮುಡಾದಿಂದ ಬದಲಿ ನಿವೇಶನ ಮಂಜೂರು

ಬೆಂಗಳೂರು,ಜು.26– ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿಯವರು ಮುಡಾದಿಂದ ಬದಲಿ ನಿವೇಶನ ಪಡೆಯಲು ಅರ್ಜಿ ಸಲ್ಲಿಸಿರುವ ದಾಖಲಾತಿಗಳು ಬಹಿರಂಗಗೊಂಡಿವೆ. 1984 ರಲ್ಲಿ ಕುಮಾರಸ್ವಾಮಿ ಯವರಿಗೆ ಮೈಸೂರಿನ ಇಂಡಸ್ಟ್ರಿಯಲ್‌ ಸಬ್‌ ಅರ್ಬನ್‌ ಮೂರನೇ ಹಂತದಲ್ಲಿ 21 ಸಾವಿರ ಚದರ ಅಡಿಯ ನಿವೇಶನ ಮಂಜೂರಾಗಿತ್ತು. ಅದಕ್ಕಾಗಿ 1985 ಜನವರಿ 16 ರಂದು ಸ್ವಾಧೀನ ಪತ್ರವನ್ನೂ ನೀಡಲಾಗಿದೆ.

ಈ ನಿವೇಶನದಲ್ಲಿ ಅಳತೆಯ ಭಾಗಶಃ ಭಾಗವನ್ನು ಬೇರೆಯವರಿಗೆ ಮಂಜೂರು ಮಾಡಿದ್ದು, ತಮಗೆ ಹಂಚಿಕೆಯಾಗಿರುವ ನಿವೇಶನ ಲಭ್ಯವಿಲ್ಲದ ಕಾರಣ ಕೈಗಾರಿಕೆ ಪ್ರಾರಂಭಿಸಲು ಅನುಕೂಲವಾಗುವಂತೆ ಬದಲಿ ನಿವೇಶನ ನೀಡುವಂತೆ ಕುಮಾರಸ್ವಾಮಿಯವರು
2017, 2019, 2020 ರಲ್ಲಿ ಮೂರು ಬಾರಿ ಮುಡಾಗೆ ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ತಾಂತ್ರಿಕ ತನಿಖೆ ನಡೆದಿದ್ದು, ನಿವೇಶನ ಸಂಖ್ಯೆ 17 ಬಿ 1 ರ ಸ್ವಾಧೀನ ಪತ್ರದಂತೆ ಸದರಿ ನಿವೇಶನದಲ್ಲಿ 13,064 ಚದರ ಅಡಿಗಳು ಭೌತಿಕವಾಗಿ ಲಭ್ಯವಿವೆ ಎಂದು ವರದಿ ಸಲ್ಲಿಸಲಾಗಿದೆ. ಕಡಿಮೆ ಇರುವ 7,936 ಚದರ ಅಡಿಯಷ್ಟು ಬದಲಿ ನಿವೇಶನ ನೀಡುವ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಈ ಕುರಿತು ಬದಲಿ ನಿವೇಶನ ನೀಡಲು ಪ್ರಾಧಿಕಾರ ಸಭೆಯಲ್ಲಿ ಚರ್ಚಿಸಲಾಗಿದ್ದು, 21,000 ಚದರ ಅಡಿಗೆ ತಾಳೆ ಹೊಂದುವ ನಿವೇಶನಗಳು ಇಂಡಸ್ಟ್ರಿಯಲ್‌ ಸಬ್‌ ಅರ್ಬನ್‌ನಲ್ಲಿ ಲಭ್ಯವಿಲ್ಲದ ಕಾರಣ ಪರ್ಯಾಯವಾಗಿ 32,800 ಚದರ ಅಡಿಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ.

ಹೆಚ್ಚುವರಿಯಾಗಿರುವ 11,000 ಚದರ ಅಡಿಯನ್ನು ಕುಮಾರಸ್ವಾಮಿಯವರಿಗೆ ಮಂಜೂರು ಮಾಡಲಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ರಿಕಾ ಗೋಷ್ಠಿಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ದಾಖಲಾತಿ ಬಿಡುಗಡೆ ಮಾಡಿದರು.

ಮುಡಾ ನಿವೇಶನ ಪಡೆದ ವಿಪಕ್ಷ ನಾಯಕರು :
ಬೆಂಗಳೂರು, ಜು.26- ಮುಡಾದಿಂದ ಬಿಜೆಪಿ ಮತ್ತು ಜೆಡಿಎಸ್‌‍ನ ಶಾಸಕರು, ಜನಪ್ರತಿನಿಧಿಗಳು, ಪ್ರಮುಖ ನಾಯಕರು ನಿವೇಶನ ಪಡೆದಿರುವ ವಿವರ ಗಳನ್ನು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಬಹಿರಂಗಪಡಿಸಿದ್ದಾರೆ.

ಸಿ.ಎನ್‌.ಮಂಜೇಗೌಡ, ಜಿ.ಟಿ.ದೇವೇಗೌಡ, ಎಚ್‌.ವಿಶ್ವನಾಥ್‌, ಗಂಗರಾಜು, ಮಹದೇವಸ್ವಾಮಿ, ಸಾ.ರಾ.ಮಹೇಶ್‌ ಸೇರಿದಂತೆ ವಿವಿಧ ನಾಯಕರು ಎಕರೆಗಟ್ಟಲೆ ಭೂಮಿಯನ್ನು ಮೈಸೂರಿನ ಪ್ರಮುಖ ಪ್ರದೇಶಗಳಲ್ಲಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಯವರು ಮುಡಾದಿಂದ ಬದಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವ ದಾಖಲೆಯನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.

RELATED ARTICLES

Latest News