Friday, September 20, 2024
Homeಅಂತಾರಾಷ್ಟ್ರೀಯ | Internationalಭಾರೀ ಮಳೆಯಿಂದ ಗುಡ್ಡ ಕುಸಿದು 11 ಮಂದಿ ಸಾವು

ಭಾರೀ ಮಳೆಯಿಂದ ಗುಡ್ಡ ಕುಸಿದು 11 ಮಂದಿ ಸಾವು

ಬೀಜಿಂಗ್‌‍, ಜುಲೈ 28: ಭಾರೀ ಮಳೆಯಿಂದಾಗಿ ಆಗ್ನೇಯ ಚೀನಾದಲ್ಲಿ ಇಂದು ಮನೆಗಳ ಮೇಲೆ ಮಣ್ಣು ಕುಸಿದು 11 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಮಾಧ್ಯಮ ತಿಳಿಸಿದೆ. ಹುನಾನ್‌ ಪ್ರಾಂತ್ಯದ ಹೆಂಗ್ಯಾಂಗ್‌ ನಗರದ ಸಮೀಪದ ಯುಯೆಲಿನ್‌ ಗ್ರಾಮದಲ್ಲಿ ಬೆಳಿಗ್ಗೆ 8 ಗಂಟೆ ವೇಳೆಗೆ ಈ ದುರಂತ ಸಂಭವಿಸಿದೆ.18 ಮಂದಿ ಮಣ್ಣಿನಡಿ ಸಿಲುಕಿದ್ದು,ಐವರನ್ನು ರಕ್ಷಿಸಲಾಗಿದೆ.

ಭಾರೀ ಮಳೆಯಿಂದ ಪರ್ವತಗಳ ಮೇಲಿಂದ ನೀರು ನುಗ್ಗಿದ್ದರಿಂದ ಮಣ್ಣು ಮರಗಳು ಕುಸಿದಿವೆ ಎಂದು ವರದಿಗಳು ತಿಳಿಸಿವೆ. ಸ್ಥಳಕ್ಕೆ ರಕ್ಷಣಾ ತಂಡ ದೌಡಾಯಿಸಿದೆ. ಚಂಡಮಾರುತ ಚೀನಾವನ್ನು ತಲುಪುವ ಮೊದಲು ಫಿಲಿಪೈನ್ಸ್ ,ಮ್ಯಾನರ್‌ನಲ್ಲಿ ಭಾರಿ ಮಳೆಸುರಿದಿದೆ ಅಲ್ಲಿ ಕನಿಷ್ಠ 34 ಮಂದಿ ಮೃತಪಟ್ಟಿದ್ದಾರೆ.

ತೈವಾನ್‌ ದ್ವೀಪದಾದ್ಯಂತ ಚಂಡಮಾರುತ ಅಬ್ಬರಕ್ಕೆ ಸಾವಿನ ಸಂಖ್ಯೆ 10 ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪ್ರಸ್ತುತ ಚೀನಾದ ಕರಾವಳಿ ಭಗದಲ್ಲಿ ಚಂಡ ಮಾರುತ ಅಪ್ಪೊಳಿಸುತ್ತಿದ್ದು ಭಾರಿ ಮಳೆ ಸುರಿಯುತ್ತಿದೆ.

RELATED ARTICLES

Latest News