Friday, November 22, 2024
Homeರಾಜ್ಯಬೆಂಗಳೂರಲ್ಲಿ ಕಳಪೆ ಮಾಂಸ ವಿವಾದ : ವರದಿಗೆ ಕಾಯುತ್ತಿರುವ ಪೊಲೀಸರು

ಬೆಂಗಳೂರಲ್ಲಿ ಕಳಪೆ ಮಾಂಸ ವಿವಾದ : ವರದಿಗೆ ಕಾಯುತ್ತಿರುವ ಪೊಲೀಸರು

ಬೆಂಗಳೂರು,ಜು.28- ನಗರದಲ್ಲಿ ಭುಗಿಲೆದ್ದಿರುವ ಮಾಂಸ ವಿವಾದಕ್ಕೆ ಸಂಬಂಧಿಸಿದಂತೆ ಮಾಂಸ ಪೂರೈಕೆದಾರರ ವಿರುದ್ಧ ದಾಖಲಾಗಿರುವ ಆರೋಪ ಪ್ರಕರಣ ಸಂಬಂಧ ಆಹಾರ ಮತ್ತು ಸುರಕ್ಷತಾ ಇಲಾಖೆಯವರ ವರದಿ ನಿರೀಕ್ಷಿಸಲಾಗಿದ್ದು, ವರದಿ ನಂತರ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರ ರಕ್ಷಣಾ ಪಡೆ ಮುಖಂಡ ಪುನೀತ್‌ ಕೆರೆಹಳ್ಳಿ ಹಾಗೂ ಆತನ ಸಹಚರರು ಮತ್ತು ಮಾಂಸ ಪೂರೈಕೆದಾರರು ಸೇರಿದಂತೆ ಒಟ್ಟು 3 ಎಫ್‌ಐಆರ್‌ಗಳು ಕಾಟನ್‌ಪೇಟೆ ಪೊಲೀಸ್‌‍ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಪುನೀತ್‌ ಕೆರೆಹಳ್ಳಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

2ನೇ ಎಫ್‌ಐಆರ್‌ನಲ್ಲಿ ಈತನ ಸಹಚರರನ ವಿಚಾರಣೆ ನಡೆಸಿ ಠಾಣಾ ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿದೆ.ರಾಜಸ್ಥಾನದ ಮಾಂಸ ಪೂರೈಕೆದಾರರ ವಿರುದ್ಧ ಹಾನಿಕಾರಕ ಆಹಾರ ಪೂರೈಕೆ ಆರೋಪದಡಿ ಪ್ರಕರಣ ದಾಖಲಿಸಲಾಗಿದ್ದು, ಆಹಾರ ಸುರಕ್ಷತಾ ಇಲಾಖೆಯವರು ವಿವಾದಿತ ಮಾಂಸದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದೆರಡು ದಿನಗಳ ಹಿಂದೆ ರಾಜಸ್ಥಾನದಿಂದ ಸುಮಾರು 90 ಬಾಕ್‌್ಸಗಳಲ್ಲಿ 4,500 ಕೆ.ಜಿ.ಗೂ ಹೆಚ್ಚು ಮಾಂಸ ರೈಲಿನಲ್ಲಿ ನಗರದ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣಕ್ಕೆ ತರಲಾಗಿತ್ತು. ಈ ಮಾಂಸ ತಿನ್ನಲು ಯೋಗ್ಯವಲ್ಲ. ನಾಯಿ ಮಾಂಸವೆಂಬ ಆರೋಪ ಕೇಳಿಬಂದಿತ್ತು. ಅಲ್ಲದೆ ನಗರದ ಕೆಲ ಮಾಂಸದ ವ್ಯಾಪಾರಿಗಳು ಹೊರರಾಜ್ಯದಿಂದ ನಗರಕ್ಕೆ ಕಳಪೆ ಗುಣಮಟ್ಟದ ಮಾಂಸ ತಂದು ವ್ಯಾಪಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

RELATED ARTICLES

Latest News