ರಾಂಚಿ, ಜು.28- ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದಕ್ಕಾಗಿ ಜಾರ್ಖಾಂಡ್ನ ನಿರ್ಗಮಿತ ಜಾರ್ಖಂಡ್ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ತೆಲಂಗಾಣದ ಹೆಚ್ಚುವರಿ ಹೊಣೆ ಹೊತ್ತಿದ್ದ ರಾಧಾಕೃಷ್ಣನ್ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ, ಪ್ರಸ್ತುತ ರಮೇಶ್ ಬೈಸ್ ಮಹಾರಾಷ್ಟ್ರದಲ್ಲಿ ರಾಜ್ಯಪಾಲರಾಗಿದ್ದರು.
ರಾಧಾಕೃಷ್ಣನ್ ಅವರ ಸ್ಥಾನಕ್ಕೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮಾಜಿ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಅವರು ಜಾರ್ಖಂಡ್ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಜಾರ್ಖಂಡ್, ತೆಲಂಗಾಣ ಮತ್ತು ಪುದುಚೇರಿ ಮೂರು ಮಹಾನ್ ರಾಜ್ಯಗಳಿಗೆ ಸೇವೆ ಸಲ್ಲಿಸಲು ನನಗೆ ಅದ್ಭುತ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಹೆಮ್ಮೆ ಮತ್ತು ಗೌರವವಿದೆ. ಅದನ್ನು ಎಂದೆಂದಿಗೂ ಪಾಲಿಸುತ್ತೇನೆ. ಮೂರು ರಾಜ್ಯಗಳಿಗೂ ಶುಭವಾಗಲಿ ಎಂದು ಹಾರೈಸಿದ್ದಾರೆ.
ಇದೇ ವೇಳೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ನೂತನವಾಗಿ ನೇಮಕಗೊಂಡ ಜಾರ್ಖಂಡ್ ರಾಜ್ಯಪಾಲರನ್ನು ಅಭಿನಂದಿಸಿದ್ದಾರೆ. ಜಾರ್ಖಂಡ್ನ ಹೊಸದಾಗಿ ನೇಮಕಗೊಂಡ ರಾಜ್ಯಪಾಲರಾದ ಗೌರವಾನ್ವಿತ ಸಂತೋಷ್ಗಂಗ್ವಾರ್ ಜಿ ಅವರಿಗೆ ಅಭಿನಂದನೆಗಳು, ಶುಭಾಶಯಗಳು ಮತ್ತು ಜೋರ್ಹ. ನೂತನ ರಾಜ್ಯಪಾಲರನ್ನು ಜಾರ್ಖಂಡ್ನ ಶ್ರೇಷ್ಠ ಮತ್ತು ಕೆಚ್ಚೆದೆಯ ಭೂಮಿಗೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಸೋರೆನ್ ಎಕ್‌್ಸನಲ್ಲಿ ತಿಳಿಸಿದ್ದಾರೆ.