ಈ ವಾರ ಬಿಡುಗಡೆಯಾದ ಕೆಂಡ ಚಿತ್ರ ಕೆಲವು ವಿಚಾರಗಳಿಗೆ ಮಹತ್ವವನ್ನು ಪಡೆದುಕೊಂಡಿದೆ. ಬಿಡುಗಡೆಗು ಮುಂಚೆ ತಂಡ, ನಮ್ಮ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಆದೇಶದಲ್ಲಿ, ಈ ದೇಶದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದು ಹೇಳಿಕೊಳ್ಳುವಾಗ ಒಂದಷ್ಟು ಕುತೂಹಲಕಾರಿ ಪ್ರಶ್ನೆಗಳು ಮುಡಿದ್ದವು ಅವುಗಳಿಗೆ ಇಂದು ಉತ್ತರ ಸಿಕ್ಕಿದೆ. ಸಿನಿಮಾ ಮನೋರಂಜನೆಯು ಹೌದು, ಇದರ ಜೊತೆಗೆ ಸಮಾಜದ ಪ್ರತಿಬಿಂಬವಾಗಿ ಕೆಲಸ ಮಾಡುವ ಒಂದು ಪ್ರಬಲ ಮಾಧ್ಯಮ ಎನ್ನುವ ಮಾತನ್ನು ನಿಜ ಮಾಡಿದೆ.
ನಿರ್ದೇಶಕ ಸಹದೇವ್ ಕೆಲವಡಿ, ಸ್ಟೀಲ್ ಕಂಪನಿಯಲ್ಲಿ ಕೆಲಸ ಮಾಡುವ, ಅದರಲ್ಲೂ ಬೆಂಕಿಯ ಜೊತೆ ಬೆಂದು ಬದುಕುವ ಕೇಶವನ ಕಥೆಯನ್ನು ಮನಮುಟ್ಟುವಂತೆ ಪ್ರೇಕ್ಷಕರಿಗೆ ಹೇಳಲು ಪ್ರಯತ್ನಿಸಿದ್ದಾರೆ. ಪ್ರತಿಕ್ಷಣ ನೋವುಗಳನ್ನು ನುಂಗಿಕೊಂಡು, ತನ್ನ ಜೀವನ ಇಷ್ಟೇ ಎಂದು ಅಸಹಾಯಕ ಮನಸ್ಥಿತಿಯಲ್ಲಿ ಇರುವ ಒಬ್ಬ ಯುವಕ ಪತ್ರಿಕಾ ಸಂಪಾದಕರೊಬ್ಬರ ಮಾತುಗಳಿಗೆ ಪ್ರೇರೆಪಣೆಗೊಂಡು ಮುಂದೆ ಅವನು ತೆಗೆದುಕೊಳ್ಳುವ ನಿರ್ಧಾರಗಳೆ ಸಿನಿಮಾದ ಕಥಾ ಸಂಪತ್ತು. ಸಮಾಜದಲ್ಲಿ ಬದುಕಬೇಕಾದರೆ ಹಣ ಎಷ್ಟು ಮುಖ್ಯ ಎಂದು ತಿಳಿದ ಕಥಾನಾಯಕ, ಅದರ ಹಿಂದೆ ಬೀಳುತ್ತಾನೆ, ಹೊಡೆದಾಟ, ಬಡಿದಾಟ ನಡೆಸುತ್ತಾನೆ.
ಮೊದಮೊದಲು ಅವನಿಗೆ ಹಣ ಮುಖ್ಯವಾಗಿರುತ್ತದೆ ಅದಕ್ಕಾಗಿ ಅವನು ಏನು ಬೇಕಾದರೂ ಮಾಡುವ ಪರಿಸ್ಥಿತಿಯಲ್ಲಿರುತ್ತಾನೆ. ಈ ಸಂದರ್ಭದಲ್ಲಿ ಗಲಭೆ, ಗಲಾಟೆಗಳು ಮಿತಿಮೀರಿ ನಡೆದ ಹೋಗುತ್ತವೆ. ತಾನು ಮಾಡಿದ್ದು ಸರಿ ಎನ್ನುವ ಮನಸ್ಥಿತಿಗೆ ಕಥಾನಾಯಕ ಬಂದು ಬಿಟ್ಟಿರುತ್ತಾನೆ. ಈ ಸಂದರ್ಭದಲ್ಲಿ ಕೈ ಮೀರಿದ ಅನಾಹುತಗಳು ಗಟಿಸಿರುತ್ತವೆ. ಕಥೆ, ಕಥಾನಾಯಕನ ಮೊದಲ ಮನಸ್ಥಿತಿ ಕೊನೆಯಲ್ಲಿ ಹಾಗೆಯೇ ಅಂತ್ಯ ಕಾಣುತ್ತದೆಯೇ ಇಲ್ಲ ಬದಲಾಗುತ್ತದಾ ಎನ್ನುವುದಕ್ಕೆ ಕತೆಯ ಕೊನೆಯಲ್ಲಿ ಉತ್ತರ ಸಿಗುತ್ತದೆ.
ಆರ್ಥಿಕವಾಗಿ,ಸಾಮಾಜಕವಾಗ ಕೆಳಸ್ಥಿತಯಲ್ಲಿ ಬದುಕಿಗಾಗಿ ಹೋರಾಟ ನಡೆಸುವ ಯುವಕರನ್ನ ರಾಜಕೀಯ ವಿಷ ಸರ್ಪಗಳು ಹೇಗೆ ಸುರುಳಿ ಸುತ್ತಿಕೊಂಡು ಉಸಿರಿ ಗಟ್ಟಿ ಸಾಯಿಸುತ್ತವೆ ಎಂದು ಕಥೆಯಲ್ಲಿ ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಯುವಕರೇ ನಿಮ್ಮ ಸಮಸ್ಯೆಗಳಿಗೆ ನಿಮ್ಮ ತಾಳ್ಮೆ,ಆಲೋಚನೆ ಮುದ್ದಾಗಬೇಕೇ ವಿನಹ ಅದಕ್ಕೆ ದುಷ್ಟ ರಾಜಕೀಯ ಆಲೋಚನಗಳ ಸ್ಪರ್ಶವಾಗಕೂಡದು, ಅದರಿಂದ ನಿಮ್ಮ ಬದುಕುಗಳು ಬರಡಾಗಬಾರದು ಎಂಬ ಸಂದೇಶವನ್ನ ಮನಮುಟ್ಟುವಂತೆ ಹೇಳಿದ್ದಾರೆ.
ನಟ ಬಿ.ವಿ ಭರತ್ ನಿರ್ದೇಶಕರು ಕಂಡ ಕನಸನ್ನು ದೃಶ್ಯಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಅಷ್ಟರಮಟ್ಟಿಗೆ ಅವರ ಸಹಜ ಅಭಿನಯ ಸ್ಕ್ರೀನ್ ಪ್ಲೇಯಲ್ಲಿ ಹರಡಿದೆ. ಇವರ ಅಭಿನಯಕ್ಕೆ ಸಾತ್ ನೀಡಿರುವುದು ಗೋಪಾಲಕೃಷ್ಣ ದೇಶಪಾಂಡೆ. ಹಾಗೆ ಸಚಿನ್ ಶ್ರೀನಾಥ್, ವಿನೋದ್ ಸುಶೀಲಾ ತಮಗೆ ಕೊಟ್ಟ ಪಾತ್ರಗಳನ್ನು ಸುಲಭವಾಗಿ ನಿಭಾಯಿಸಿದ್ದಾರೆ. ಸಂಗೀತ ನಿರ್ದೇಶಕ ರಿತ್ವಿಕ್ ಕಾಯ್ಕಿಣಿ, ಕಂಟೆಂಟ್ ಸಿನಿಮಾಗೆ ಹೋಗ್ಗುವ ಸಂಗೀತವನ್ನು ಸಂಯೋಜಿಸಿ ಗಮನ ಸೆಳೆದಿದ್ದಾರೆ. ಸಿನಿಮಾದುದ್ದಕ್ಕೂ ನಿರ್ದೇಶಕರಿಗೆ ಬೆಂಬಲವಾಗಿ ನಿಂತ ರೂಪ ರಾವ್ ಈಗಿನ ಪರಿಸ್ಥಿತಿಯಲ್ಲಿ ಈ ರೀತಿಯ ಕಥೆಯನ್ನು ಆಯ್ದುಕೊಂಡು ತೆರೆ ಮೇಲೆ ತಂದಿರುವುದು ಅವರ ಗುಂಡಿಗೆಯ ಗಟ್ಟಿತನಕ್ಕೆ ಸಾಕ್ಷಿಯಾಗಿದೆ.