Friday, September 20, 2024
Homeರಾಷ್ಟ್ರೀಯ | Nationalಕೇಜ್ರಿವಾಲ್‌ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಕೆ

ಕೇಜ್ರಿವಾಲ್‌ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಕೆ

ನವದೆಹಲಿ,ಜು.29- ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ 2021-22 ರ ದೆಹಲಿ ಅಬಕಾರಿ ನೀತಿಯ ಭ್ರಷ್ಟಾಚಾರ ತನಿಖೆಗೆ ಸಂಬಂಧಿಸಿದಂತೆ ಚಾರ್ಜ್‌ ಶೀಟ್‌ ಸಲ್ಲಿಸಿದೆ ಹಾಗೂ ಅವರನ್ನು ಕ್ರಿಮಿನಲ್‌ ಪಿತೂರಿಯ ಸಂಚುಕೋರರಲ್ಲಿ ಒಬ್ಬರು ಎಂದು ಕರೆದಿದೆ.

ಕೇಜ್ರಿವಾಲ್‌ ಅವರ ನಿಕಟ ಸಹವರ್ತಿ ವಿಜಯ್‌ ನಾಯರ್‌ ಅವರು ವಿವಿಧ ಮದ್ಯ ತಯಾರಕರು ಮತ್ತು ವ್ಯಾಪಾರಿಗಳನ್ನು ಸಂಪರ್ಕಿಸುತ್ತಿದ್ದಾರೆ ಮತ್ತು ಮುಂಬರುವ ದೆಹಲಿ ಅಬಕಾರಿಯಲ್ಲಿ ಅವರಿಗೆ ಅನುಕೂಲಕರವಾದ ನಿಬಂಧನೆಗಳನ್ನು ಸೇರಿಸಲು ಮಾರ್ಚ್‌ 2021 ರಿಂದ ಅನಗತ್ಯ ತಪ್ತಿಯನ್ನು ಕೋರುತ್ತಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಏಪ್ರಿಲ್‌ 2023 ರಲ್ಲಿ ಕೇಜ್ರಿವಾಲ್‌ ಅವರನ್ನು ಮೊದಲ ಬಾರಿಗೆ ಪ್ರಶ್ನಿಸಿದ ಸಿಬಿಐ, ಕೇಜ್ರಿವಾಲ್‌ ಅವರ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾ ಮತ್ತು ಭಾರತ್‌ ರಾಷ್ಟ್ರ ಸಮಿತಿ ನಾಯಕಿ ಕೆ ಕವಿತಾ ಸೇರಿದಂತೆ 18 ಆರೋಪಿಗಳ ವಿರುದ್ಧ ಪ್ರಕರಣದಲ್ಲಿ ಇದುವರೆಗೆ ಐದು ಚಾರ್ಜ್‌ ಶೀಟ್‌ಗಳನ್ನು ಸಲ್ಲಿಸಿದೆ.

ಹಿಂದಿನ ಚಾರ್ಜ್‌ ಶೀಟ್‌ನಲ್ಲಿ, ಎಎಪಿ 100 ಕೋಟಿ ಕಿಕ್‌ಬ್ಯಾಕ್‌ ಆಗಿ ಸ್ವೀಕರಿಸಿದೆ ಎಂದು ಹೇಳಲಾದ 44.45 ಕೋಟಿಯನ್ನು ಚುನಾವಣಾ ಪ್ರಚಾರಕ್ಕಾಗಿ ಹವಾಲಾ ಚಾನೆಲ್‌ಗಳ ಮೂಲಕ ಜೂನ್‌ 2021 ರಿಂದ ಜನವರಿ 2022 ರವರೆಗೆ ಗೋವಾಕ್ಕೆ ವರ್ಗಾಯಿಸಲಾಗಿದೆ ಎಂದು ಸಿಬಿಐ ಹೇಳಿಕೊಂಡಿದೆ

RELATED ARTICLES

Latest News