ಪ್ಯಾರಿಸ್, ಜು. 30– ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಎರಡು ಕಂಚಿನ ಪದಕ ಗೆದ್ದು ಸಂಭ್ರಮಿಸಿದ ಶೂಟರ್ ಮನುಭಾಕರ್ ಅವರು ಒಂದೇ ಒಲಿಂಪಿಕ್‌್ಸನಲ್ಲಿ ಈ ರೀತಿಯ ವಿಶಿಷ್ಟ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಅಥ್ಲೀಟ್ ಎಂಬ ದಾಖಲೆ ನಿರ್ಮಿಸಿ ದೇಶದ ಕೀರ್ತಿ ಬೆಳಗಿಸಿದ್ದಾರೆ.
ಭಾನುವಾರ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ 12 ವರ್ಷಗಳ ನಂತರ ಈ ವಿಭಾಗದಲ್ಲಿ ಮೊದಲ ಪದಕ ಗೆದ್ದ ಭಾರತದ ಶೂಟರ್ ಎಂಬ ದಾಖಲೆ ನಿರ್ಮಿಸಿದ್ದ ಮನುಬಾಕರ್, ಇಂದು (ಜೂನ್ 30) ನಡೆದ 10 ಮೀಟರ್ ಏರ್ ಪಿಸ್ತೂಲ್ ಮಿಕ್ಸೆಡ್‌ನಲ್ಲಿ ಮತ್ತೊಂದು ಕಂಚಿನ ಪದಕ ಗೆದ್ದು ಸಂಭ್ರಮಿಸಿದ್ದಾರೆ.
ಕಂಚಿನ ಪದಕಕ್ಕೆ ನಡೆದಿದ್ದ ಹೋರಾಟದಲ್ಲಿ ಭಾರತದ ಸರ್ಬೋಜಿತ್ ಸಿಂಗ್ ಹಾಗೂ ಮನುಬಾಕರ್ ಜೋಡಿಯು ಕೊರಿಯಾದ ವೊನೊಲಿ ಹಾಗೂ ಜಿನ್ ಎ ಹೊ ಜೋಡಿಯ ವಿರುದ್ಧ ಅದ್ಭುತ ಪ್ರದರ್ಶನ ತೋರಿ 13 ಹೊಡೆತಗಳಲ್ಲಿ 10ರಲ್ಲಿ 10.0 ಅಥವಾ ಅತಿ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ತಮ ಕೊರಳಿಗೆ ಪದಕವನ್ನು ಧರಿಸಿದರು. ಆ ಮೂಲಕ ಮನುಭಾಕರ್ ವಿಶೇಷ ದಾಖಲೆ ನಿರ್ಮಿಸಿದರು.
ಇದಕ್ಕೂ ಮುನ್ನ ಭಾರತದ ಪರ ಒಲಿಂಪಿಕ್ಸ್ ನಲ್ಲಿ ಕೆಡಿ ಜಾಧವ್, ಮೇಜರ್ ಧ್ಯಾನ್ ಚಾಂದ್, ಕರ್ಣಮಂ ಮಲ್ಲೇಶ್ವರಿ, ಅಭಿನವ್ ಬಿಂದ್ರಾ ವೈಯಕ್ತಿಕ ಚಿನ್ನದ ಪದಕ ಗೆದ್ದು ದಾಖಲೆ ನಿರ್ಮಿಸಿದ್ದರು. ಇನ್ನೊಂದೆಡೆ ಸೈನಾ ನೆಹ್ವಾಲ್, ಪಿ.ವಿ.ಸಿಂಧು, ಸುಶೀಲ್ ಕುಮಾರ್, ನೀರಜ್ ಚೋಪ್ರಾ ಸೇರಿದಂತೆ ಹಲವು ಕ್ರೀಡಾಪಟುಗಳು ಒಲಿಂಪಿಕ್‌್ಸ ನಲ್ಲಿ ಚಿನ್ನದ ಪದಕಗಳ ಸಾಧನೆ ಮಾಡಿದ್ದರು. ಆದರೆ ಒಂದೇ ಒಲಿಂಪಿಕ್‌್ಸನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಅಥ್ಲೀಟ್ ಎಂಬ ದಾಖಲೆಯನ್ನು ಮನುಭಾಕರ್ ನಿರ್ಮಿಸಿದ್ದಾರೆ.