Friday, September 20, 2024
Homeರಾಜಕೀಯ | Politicsಬಿಜೆಪಿ- ಜೆಡಿಎಸ್‌‍ ಪಾದಯಾತ್ರೆಗೆ ಕಾಂಗ್ರೆಸ್‌‍ನಿಂದ ಕೌಂಟರ್ ಪ್ಲಾನ್ ರೆಡಿ

ಬಿಜೆಪಿ- ಜೆಡಿಎಸ್‌‍ ಪಾದಯಾತ್ರೆಗೆ ಕಾಂಗ್ರೆಸ್‌‍ನಿಂದ ಕೌಂಟರ್ ಪ್ಲಾನ್ ರೆಡಿ

ಬೆಂಗಳೂರು, ಜು.30- ಬಿಜೆಪಿ- ಜೆಡಿಎಸ್‌‍ ನಾಯಕರು ಮುಡಾ ಹಗರಣದ ವಿರುದ್ಧ ಜನಜಾಗೃತಿ ಮೂಡಿಸಲು ನಡೆಸಲಿರುವ ಪಾದ ಯಾತ್ರೆಯುದ್ದಕ್ಕೂ ಕಾಂಗ್ರೆಸ್‌‍ ಕೂಡ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಿಗೆ ಸತ್ಯಾಂಶ ತಿಳಿಸಲು ಮುಂದಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಸಂಪುಟದ ಹಿರಿಯ ಸಚಿವರೊಂದಿಗೆ ತುರ್ತು ಸಭೆ ನಡೆಸಿ ಮಹತ್ವದ ಚರ್ಚೆ ನಡೆಸಿದ್ದಾರೆ.ಬಿಜೆಪಿ-ಜೆಡಿಎಸ್‌‍ ಪಕ್ಷಗಳು ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ನಡೆಸಿ ಮುಡಾ ನಿವೇಶನ ಹಂಚಿಕೆ ಹಾಗೂ ಮಹರ್ಷಿ ವಾಲೀಕಿ ಹಗರಣದ ಕುರಿತು ಜನಜಾಗೃತಿ ಮೂಡಿಸಲು ಮುಂದಾಗಿವೆ. ಇದಕ್ಕೆ ತಿರುಗೇಟು ನೀಡಲು ಕಾಂಗ್ರೆಸ್‌‍ ಮುಂದಾಗಿದೆ.

ಪಾದಯಾತ್ರೆ ನಡೆಯುವ ಮಾರ್ಗ ದುದ್ದಕ್ಕೂ ಬಿಡದಿ, ರಾಮನಗರ, ಮದ್ದೂರು-ಮಂಡ್ಯ, ಮೈಸೂರು ಪ್ರದೇಶಗಳಲ್ಲಿ ಕಾಂಗ್ರೆಸ್‌‍ ವತಿಯಿಂದ ಬೃಹತ್‌ ಸಮಾವೇಶಗಳನ್ನು ಆಯೋಜಿಸಿ ಜನರಿಗೆ ಸತ್ಯಾಂಶ ತಿಳಿಸಲು ಹಾಗೂ ಬಿಜೆಪಿ-ಜೆಡಿಎಸ್‌‍ ಪಾಳಯದ ಹಗರಣಗಳ ಬಗ್ಗೆ ಮಾಹಿತಿ ನೀಡಲು ನಿರ್ಧರಿಸಲಾಗಿದೆ.

ಸದ್ಯದ ಕಾರ್ಯಕ್ರಮ ಪಟ್ಟಿ ಪ್ರಕಾರ, ಬಿಡದಿ, ರಾಮನಗರ, ಮದ್ದೂರು-ಮಂಡ್ಯ, ಮೈಸೂರು ರಸ್ತೆಯಲ್ಲಿ ನಾಲ್ಕು ಕಡೆ ಸಾರ್ವಜನಿಕ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಬಿಜೆಪಿಯ ಪಾದಯಾತ್ರೆ ತಲುಪುವ ಒಂದು ದಿನದ ಮೊದಲು ಕಾಂಗ್ರೆಸ್‌‍ ನಿಗದಿತ ಸ್ಥಳಗಳಲ್ಲಿ ಬೃಹತ್‌ ಸಮಾ ವೇಶಗಳನ್ನು ಆಯೋಜಿಸಲಿದೆ.

ಹೀಗಾಗಿ ಪಾದಯಾತ್ರೆಯಲ್ಲಿ ಬಿಜೆಪಿ- ಜೆಡಿಎಸ್‌‍ ನಾಯಕರು ಮಾಡುವ ಎಲ್ಲಾ ಆರೋಪಗಳಿಗೂ ಎದು ರೇಟು ನೀಡಲು ನಿರ್ಧರಿಸಲಾಗಿದೆ.ನಿನ್ನೆ ನಡೆದ ಸಭೆಯಲ್ಲಿ ಸಮಾವೇಶಗಳ ಆಯೋಜನೆ ಮತ್ತು ಯಾರ್ಯಾರು, ಯಾವ್ಯಾವ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು?, ಯಾವ್ಯಾವ ವಿಚಾರಗಳನ್ನು ಪ್ರಸ್ತಾಪಿಸಬೇಕು? ಎಂಬ ಕುರಿತು ಚರ್ಚೆಗಳಾಗಿವೆ.

ಅಂತಿಮವಾಗಿ ಮೈಸೂರಿನ ಸಮಾ ವೇಶಕ್ಕೆ ಹೈಕಮಾಂಡ್‌ ನಾಯಕ ರನ್ನು ಆಹ್ವಾನಿಸುವ ನಿರ್ಧಾರ ಗಳಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಸಂಪುಟದ ಪ್ರಮುಖ ಸಚಿವರು, ಕಾಂಗ್ರೆಸ್‌‍ ನಾಯಕರು ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಿಜೆಪಿಯ ಹಗರಣಗಳನ್ನು ಎಳೆಎಳೆ ಯಾಗಿ ಬಿಡಿಸಿಟ್ಟು ವಿರೋಧ ಪಕ್ಷಗಳ ನಾಯಕರ ಟೀಕೆಗಳಿಗೆ ಆಸ್ಪದವೇ ಇಲ್ಲದಂತೆ ಮಾಡುವ ರಣತಂತ್ರವನ್ನು ಕಾಂಗ್ರೆಸ್‌‍ ರೂಪಿಸಿದೆ.ಪಾದಯಾತ್ರೆಯ ಬಳಿಕ ರಾಜ್ಯದ ಇತರ ಪ್ರದೇಶಗಳಲ್ಲೂ ಇದೇ ರೀತಿಯ ಸಮಾವೇಶ ನಡೆಸುವ ಬಗ್ಗೆ ಚರ್ಚೆಗಳಾ ಗಿದ್ದು, ಬಿಜೆಪಿ-ಜೆಡಿಎಸ್‌‍ಗೆ ಭರ್ಜರಿ ಕೌಂಟರ್‌ ನೀಡಲು ತಯಾರಿ ನಡೆದಿದೆ.

ಪಾದಯಾತ್ರೆ ನಡೆಸಲು ಅಧಿಕೃತವಾಗಿ ಅನುಮತಿ ನೀಡದಿರಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಈಗಾಗಲೇ ಸ್ಪಷ್ಟಪಡಿಸಿರುವ ಗೃಹಸಚಿವ ಪರಮೇಶ್ವರ್‌, ಈ ಹಿಂದೆ ನಾವು ವಿರೋಧಪಕ್ಷದಲ್ಲಿದ್ದಾಗ ಹಲವು ಪಾದಯಾತ್ರೆಗಳನ್ನು ನಡೆಸಿದ್ದೇವೆ. ಆಗಿನ ಸರ್ಕಾರ ನಮಗೆ ಅನುಮತಿ ನೀಡಿರಲಿಲ್ಲ. ಅದೇ ರೀತಿ ಈಗ ನಾವು ಪಾದಯಾತ್ರೆಗೆ ಅನುಮತಿ ನೀಡುವುದಿಲ್ಲ. ಆದರೆ ಅವರ ಹೋರಾಟಕ್ಕೆ ಅಡ್ಡಿಪಡಿಸುವುದಿಲ್ಲ. ರಾಜಕೀಯವಾಗಿ ಸೂಕ್ತ ಪ್ರತ್ಯುತ್ತರ ನೀಡುತ್ತೇವೆ ಎಂದು ಪರಮೇಶ್ವರ್‌ ಹೇಳಿದ್ದಾರೆ.

ವಿಧಾನಮಂಡಲ ಅಧಿವೇಶನದಲ್ಲಿ ಅರ್ಧಕ್ಕೆ ಮೊಟಕುಗೊಂಡ ಚರ್ಚೆ ಗಳು ಇನ್ನು ಮುಂದೆ ಜನತಾ ನ್ಯಾಯಾಲಯದಲ್ಲಿ ಚರ್ಚೆಗೊಳ ಗಾಗಲಿವೆ. ಪಾದಯಾತ್ರೆಯುದ್ದಕ್ಕೂ ರಾಜಕೀಯ ಜಿದ್ದಾಜಿದ್ದಿ ಕಂಡುಬರುವ ಸಾಧ್ಯತೆಗಳಿವೆ.

RELATED ARTICLES

Latest News